ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ.ಪಂ ಚುನಾವಣೆ: ಅಂತಿಮ ಕಣದಲ್ಲಿ 663 ಅಭ್ಯರ್ಥಿಗಳು

16 ಮಂದಿ ಅವಿರೋಧ ಆಯ್ಕೆ
Last Updated 24 ಮಾರ್ಚ್ 2021, 3:34 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಗ್ರಾಮ ಪಂಚಾಯಿತಿ ಚುನಾವಣೆ ನಾಮಪತ್ರ ವಾಪಸ್‌ ಪಡೆಯವ ಪ್ರಕ್ರಿಯೆ ಮುಗಿದಿದ್ದು, 34 ಪಂಚಾಯಿತಿಗಳ 257 ಸ್ಥಾನಗಳಿಗೆ 663 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ. ಒಟ್ಟು 16 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚಿಕ್ಕಮಗಳೂರು ತಾಲ್ಲೂಕಿನಲ್ಲಿ 10 ಹಾಗೂ ಕಡೂರು ತಾಲ್ಲೂಕಿನಲ್ಲಿ 6 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮೇಗೆ ಅವಧಿ ಮುಗಿಯುವ ಪಂಚಾಯಿತಿಗಳಿಗೆ ಅಂತಿಮ ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳ ತಾಲ್ಲೂಕುವಾರು ಅಂಕಿಅಂಶ:

ಚಿಕ್ಕಮಗಳೂರು –6 ಪಂಚಾಯಿತಿಗಳ 59 ಸ್ಥಾನಗಳಿಗೆ 139, ಕಡೂರು– 5 ಪಂಚಾಯಿತಿಗಳ 61 ಸ್ಥಾನಗಳಿಗೆ 149, ಕೊಪ್ಪ– 1 ಪಂಚಾಯಿತಿಯ 17 ಸ್ಥಾನಗಳಿಗೆ 35 ಹಾಗೂ ಮೂಡಿಗೆರೆ– 1 ಪಂಚಾಯಿತಿಯ 5 ಸ್ಥಾನಗಳಿಗೆ 11 ನಾಮಪತ್ರಗಳು ಸಲ್ಲಿಕೆಯಾಗಿವೆ. ಒಟ್ಟು 13 ಪಂಚಾಯಿತಿಗಳ 142 ಸ್ಥಾನಗಳಿಗೆ 334 ಮಂದಿ ಕಣದಲ್ಲಿದ್ದಾರೆ.

ವಿವಿಧ ಕಾರಣದಿಂದ ಉಪಚುನಾವಣೆ ನಡೆಯಲಿರುವ ಪಂಚಾಯಿತಿಗಳಿಗೆ ಅಂತಿಮ ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳ ತಾಲ್ಲೂಕುವಾರು ಅಂಕಿಅಂಶ: ಚಿಕ್ಕಮಗಳೂರು–8 ಪಂಚಾಯಿತಿಗಳ 64 ಸ್ಥಾನಗಳಿಗೆ 164, ಕಡೂರು– 4 ಪಂಚಾಯಿತಿಗಳ 3 ಸ್ಥಾನಗಳಿಗೆ 9, ಕೊಪ್ಪ– 1 ಪಂಚಾಯಿತಿಯ 2 ಸ್ಥಾನಗಳಿಗೆ 4, ಮೂಡಿಗೆರೆ– 5 ಪಂಚಾಯಿತಿಗಳ 33 ಸ್ಥಾನಗಳಿಗೆ 83, ಎನ್‌.ಆರ್‌.‍ಪುರ– 4 ಪಂಚಾಯಿತಿಗಳ 28 ಸ್ಥಾನಗಳಿಗೆ 69 ಮಂದಿ ಕಣದಲ್ಲಿ ಇದ್ದಾರೆ. ಒಟ್ಟು 22 ಪಂಚಾಯಿತಿಗಳ 132 ಸ್ಥಾನಗಳಿಗೆ 329 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ಚಿಕ್ಕಮಗಳೂರು ತಾಲ್ಲೂಕಿನ ಪಂಚಾಯಿತಿವಾರು ಅಂಕಿಅಂಶ

ಅವಧಿ ಮುಗಿಯವ ಪಂಚಾಯಿತಿಗಳು: ಕಳಸಾಪುರ–13 ಸ್ಥಾನಗಳಿಗೆ 33 ಮಂದಿ, ಈಶ್ವರಹಳ್ಳಿ– 9 ಸ್ಥಾನಗಳಿಗೆ 23, ಬೆಳವಾಡಿ– 13 ಸ್ಥಾನಗಳಿಗೆ 30, ಮಾಚೇನಹಳ್ಳಿ– 6 ಸ್ಥಾನಗಳಿಗೆ 17, ಕುರುಬರ ಬೂದಿಹಾಳ್‌– 5 ಸ್ಥಾನಗಳಿಗೆ 14 ಹಾಗೂ ಸಿಂಧಿಗೆರೆ– 9 ಸ್ಥಾನಗಳಿಗೆ 22 ಮಂದಿ ಕಣದಲ್ಲಿದ್ದಾರೆ. ಒಟ್ಟು 6 ಪಂಚಾಯಿತಿಗಳ 55 ಸ್ಥಾನಗಳಿಗೆ 139 ಮಂದಿ ಸ್ಪರ್ಧಿಸಿದ್ದಾರೆ.

ನಾಲ್ವರು ಅವಿರೋಧ ಆಯ್ಕೆ: ಕಳಸಾಪುರ, ಈಶ್ವರಹಳ್ಳಿ, ಮಾಚೇನಹಳ್ಳಿ ಮತ್ತು ಕುರುಬರಬೂದಿಹಾಳ್‌ ಪಂಚಾಯಿತಿ ತಲಾ ಒಂದು ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿದೆ.

ಉಪಚುನಾವಣೆ ಪಂಚಾಯಿತಿಗಳು: ಐ.ಡಿ ಪೀಠ– 4 ಸ್ಥಾನಗಳಿಗೆ 11, ಶಿರವಾಸೆ– 11 ಸ್ಥಾನಗಳಿಗೆ 34, ಬಿದರೆ– 7 ಸ್ಥಾನಗಳಿಗೆ 24, ಕಡವಂತಿ 4 ಸ್ಥಾನಗಳಿಗೆ 10, ದೇವದಾನ–16 ಸ್ಥಾನಗಳಿಗೆ 47, ಹುಯಿಗೆರೆ– 9 ಸ್ಥಾನಗಳಿಗೆ 19, ಬಸರವಳ್ಳಿ– 7ಸ್ಥಾನಗಳಿಗೆ 19 ಮಂದಿ ಸ್ಪರ್ಧಿಸಿದ್ದಾರೆ. ಒಟ್ಟು ಏಳು ಪಂಚಾಯಿತಿಗಳ 58 ಸ್ಥಾನಗಳಿಗೆ 164 ಮಂದಿ ಕಣದಲ್ಲಿ ಉಳಿದಿದ್ದಾರೆ.

6 ಮಂದಿ ಅವಿರೋಧ ಆಯ್ಕೆ: ಕಡವತಿ– 3, ದೇವದಾನ, ಬಸರವಳ್ಳಿ ಹಾಗೂ ಕೆ.ಆರ್‌.ಪೇಟೆಯ ತಲಾ ಒಂದು ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದೆ.

ಕೆ.ಆರ್‌.ಪೇಟೆಯ ಒಂದೇ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿತ್ತು, ಅದು ಅವಿರೋಧವಾಗಿ ಆಯ್ಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT