ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: 32 ಗ್ರಾ. ಪಂ ಚುನಾವಣೆ, ಮತದಾನ ಇಂದು

257 ಸ್ಥಾನಗಳಿಗೆ 663 ಅಭ್ಯರ್ಥಿಗಳು ಕಣದಲ್ಲಿ
Last Updated 29 ಮಾರ್ಚ್ 2021, 2:57 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಗ್ರಾಮ ಪಂಚಾಯಿತಿ ಚುನಾವಣೆ ಮತದಾನ ಸೋಮವಾರನಡೆಯಲಿದೆ. ಜಿಲ್ಲೆಯಲ್ಲಿ 32 ಪಂಚಾಯಿತಿಗಳ 257 ಸ್ಥಾನಗಳಿಗೆ 663 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ.

ಮೇಗೆ ಅವಧಿ ಮುಗಿವವ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆ, ವಿವಿಧ ಕಾರಣಗಳಿಂದ ತೆರವಾಗಿರುವ ಸ್ಥಾನಗಳಿಗೆ ಉಪಚುನಾವಣೆ ನಡೆಯುತ್ತಿದ್ದು ಮತದಾನಕ್ಕೆ ಎಲ್ಲ ಸಿದ್ಧತೆ ಕೈಗೊಳ್ಳಲಾಗಿದೆ. ಬೆಳಿಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ.

ಗ್ರಾಮ ಪಂಚಾಯಿತಿಗಳು, ಮತಗಟ್ಟೆಗಳು, ಮತದಾರರು, ಸಿಬ್ಬಂದಿ ತಾಲ್ಲೂಕುವಾರು ಅಂಕಿಅಂಶ ಇಂತಿದೆ.

ಚಿಕ್ಕಮಗಳೂರು ತಾಲ್ಲೂಕಿನ 13 ಪಂಚಾಯಿತಿಗಳಿಗೆ ಮತದಾನ ನಡೆಯಲಿದ್ದು, 65 ಮತಗಟ್ಟೆಗಳಿವೆ. 38,656 ಮತದಾರರು ಇದ್ದಾರೆ. 308 ಸಿಬ್ಬಂದಿ ನಿಯೋಜಿಸಲಾಗಿದೆ. ಕಡೂರು ತಾಲ್ಲೂಕಿನ 7 ಪಂಚಾಯಿತಿಗಳಿಗೆ ಮತದಾನ ನಡೆಯಲಿದ್ದು 33 ಮತಗಟ್ಟೆಗಳಿವೆ. 23262 ಮತದಾರರು ಇದ್ದಾರೆ. 160 ಸಿಬ್ಬಂದಿ ನಿಯೋಜಿಸಲಾಗಿದೆ.

ಮೂಡಿಗೆರೆ ತಾಲ್ಲೂಕಿನ 6 ಪಂಚಾಯಿತಿಗಳಿಗೆ ಮತದಾನ ನಡೆಯಲಿದ್ದು, 22 ಮತಗಟ್ಟೆಗಳಿವೆ. 12,474 ಮತದಾರರು ಇದ್ದಾರೆ. 100 ಸಿಬ್ಬಂದಿ ನಿಯೋಜಿಸಲಾಗಿದೆ.

ಎನ್‌.ಆರ್‌.ಪುರ ತಾಲ್ಲೂಕಿನ 4 ಪಂಚಾಯಿತಿಗಳಿಗೆ ಮತದಾನ ನಡೆಯಲಿದ್ದು, 15 ಮತಗಟ್ಟೆಗಳಿವೆ. 8,481 ಮತದಾರರು ಇದ್ದಾರೆ. 72 ಸಿಬ್ಬಂದಿ ನಿಯೋಜಿಸಲಾಗಿದೆ.

ಕೊಪ್ಪ ತಾಲ್ಲೂಕಿನ 2 ಪಂಚಾಯಿತಿಗಳಿಗೆ ಮತದಾನ ನಡೆಯಲಿದ್ದು 11 ಮತಗಟ್ಟೆಗಳಿವೆ. 5,090 ಮತದಾರರು ಇದ್ದಾರೆ. 42 ಸಿಬ್ಬಂದಿ ನಿಯೋಜಿಸಲಾಗಿದೆ.

31ರಂದು ಮತ ಎಣಿಕೆ: ಇದೇ 31 ರಂದು ತಾಲ್ಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ. ಬೆಳಿಗ್ಗೆ 8 ಗಂಟೆಗೆ ಪ್ರಕ್ರಿಯೆ ಶುರುವಾಗಲಿದೆ.

16 ಮಂದಿ ಅವಿರೋಧ ಆಯ್ಕೆ: ಚಿಕ್ಕಮಗಳೂರು ತಾಲ್ಲೂಕಿನಲ್ಲಿ 10 ಹಾಗೂ ಕಡೂರು ತಾಲ್ಲೂಕಿನಲ್ಲಿ 6 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚಿಕ್ಕಮಗಳೂರು ತಾಲ್ಲೂಕಿನ ಮೇಲಿನ ಹುಲುವತ್ತಿಮತ್ತು ತರೀಕೆರೆಯ ಕೆಂಚಿಕೊಪ್ಪ ಪಂಚಾಯಿತಿಗಳು ಚುನಾವಣೆಯಿಂದ ಹೊರಗುಳಿದಿವೆ.

ಮಾರ್ಗಸೂಚಿ ಪಾಲನೆಗೆ ಸೂಚನೆ

ಮತಗಟ್ಟೆಗಳಿಗೆ ಸಿಬ್ಬಂದಿ ತೆರಳಿದ್ದಾರೆ. ಮತದಾನಕ್ಕೆ ಎಲ್ಲ ಸಿದ್ಧತೆ ಕೈಗೊಳ್ಳಲಾಗಿದೆ.

ಮಾಸ್ಕ್‌ ಧರಿಸಬೇಕು. ಅಂತರ ಪಾಲನೆ ಮಾಡಬೇಕು. ಕೋವಿಡ್‌ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು ಎಂದು ಚುನಾವಣೆ ಅಧಿಕಾರಿಗಳು, ಸಿಬ್ಬಂದಿಗೆ ಸೂಚನೆ ನೀಡಲಾಗಿದೆ ಎಂದು ಹೆಚ್ಚವರಿ ಜಿಲ್ಲಾಧಿಕಾರಿ ಬಿ.ಆರ್‌.ರೂಪಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT