ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಸ | ಖಾಸಗಿ ವಾಹನಗಳಿಂದ ಬಾಡಿಗೆ: ಆಕ್ಷೇಪ

Published 15 ಡಿಸೆಂಬರ್ 2023, 14:31 IST
Last Updated 15 ಡಿಸೆಂಬರ್ 2023, 14:31 IST
ಅಕ್ಷರ ಗಾತ್ರ

ಕಳಸ: ತಾಲ್ಲೂಕಿನಲ್ಲಿ ಅನೇಕ ಖಾಸಗಿ ವಾಹನಗಳು ಅಕ್ರಮವಾಗಿ ಬಾಡಿಗೆ ಮಾಡುತ್ತಿದ್ದು, ಹಳದಿ ಬೋರ್ಡ್ ವಾಹನಗಳಿಗೆ ತೊಂದರೆ ಆಗುತ್ತಿದೆ. ಇದನ್ನು ನಿಯಂತ್ರಿಸಬೇಕು ಎಂದು ಪಟ್ಟಣದ ಟ್ಯಾಕ್ಸಿ ಹಾಗೂ ಜೀಪ್ ಚಾಲಕರು ಮತ್ತು ಮಾಲೀಕರು ಪೊಲೀಸರಿಗೆ ಮನವಿ ನೀಡಿದ್ದಾರೆ.

ಕಳಸ ಠಾಣಾಧಿಕಾರಿ ನಿತ್ಯಾನಂದ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದ ನಂತರ ಮಾತನಾಡಿದ ಟ್ಯಾಕ್ಸಿ ಮಾಲೀಕ ಈಶ್ವರ್ ಅವರು, ‘ನಾವು ಸರ್ಕಾರಕ್ಕೆ ತೆರಿಗೆ ಪಾವತಿಸಿ ವಾಹನ ಓಡಿಸುತ್ತಿದ್ದೇವೆ. ಆದರೆ ಖಾಸಗಿ ವಾಹನ ಬಳಸಿ ಕೆಲವರು ಅಕ್ರಮವಾಗಿ ಬಾಡಿಗೆ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಕೋರಿದರು.

ಜೀಪ್ ಮಾಲೀಕ ಕೃಷ್ಣಪ್ಪ ಮಾತನಾಡಿ, ‘ಕೆಲವೇ ಕೆಲವು ಜೀಪ್‍ಗಳು ಹಳದಿ ಬೋರ್ಡ್ ಮೂಲಕ ಸರ್ಕಾರಕ್ಕೆ ತೆರಿಗೆ ಪಾವತಿಸುತ್ತಿವೆ. ಉಳಿದವರು ಖಾಸಗಿ ಜೀಪ್ ಬಳಸಿ ಬಾಡಿಗೆ ಮಾಡುತ್ತಿದ್ದಾರೆ. ಇದನ್ನು ನಿಯಂತ್ರಿಸಬೇಕು’ ಎಂದು ಕೋರಿದರು. ವಾಹನ ಮಾಲೀಕರಾದ ಸುನಿಲ್, ಪ್ರಾಣೇಶ್, ಮೋಹನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT