ಶನಿವಾರ, ಜನವರಿ 28, 2023
16 °C

ಜೇನುಹುಳು ಕಡಿತಕ್ಕೆ ವ್ಯಕ್ತಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀರೂರು: ಇಲ್ಲಿನ ಲಿಂಗದಹಳ್ಳಿ ರಸ್ತೆಯ ತೋಟದಲ್ಲಿ ದಂಪತಿ ಮೇಲೆ ಜೇನುಹುಳುಗಳು ದಾಳಿ ನಡೆಸಿದ್ದು, ಪತಿ ಪಟ್ಟಣದ ಭಾಗವತ್ ನಗರ ಬಡಾವಣೆಯ ಕುಬೇರಪ್ಪ (55) ಮೃತಪಟ್ಟಿದ್ದಾರೆ. ಪತ್ನಿ ಪಾರಾಗಿದ್ದಾರೆ.

ಕುಬೇರಪ್ಪ ಮತ್ತು ಪತ್ನಿ ಸುಧಾ ಇಬ್ಬರು ತೋಟದ ಕೆಲಸಕ್ಕೆಂದು ತೆರಳಿದ್ದರು. ಕೆಲಸ ಮಾಡುತ್ತಿರುವಾಗ ಜೇನುಹುಳುಗಳು ಏಕಾಏಕಿ ದಾಳಿ ನಡೆಸಿವೆ. ಪತ್ನಿಯ ಮುಖಕ್ಕೆ ದಾಳಿ ನಡೆಸಿದ್ದರೂ ಆಕೆ ತಪ್ಪಿಸಿಕೊಂಡು ತೋಟದಿಂದ ಹೊರಗೆ ಓಡಿಹೋದ ಪರಿಣಾಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೀರೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ದೇಹವನ್ನು ಸಂಬಂಧಪಟ್ಟವರಿಗೆ ಹಸ್ತಾಂತರಿಸಲಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು