‘ಸುತ್ತೋಲೆ ಹಿಂಪಡೆಯಲಾಗುವುದು’
‘ಸುತ್ತೋಲೆಯನ್ನು ಸೆಪ್ಟೆಂಬರ್‌ನಲ್ಲಿ ಹೊರಡಿಸಲಾಗಿತ್ತು. ಆದರೆ, ಕೆಲವರು ವಿರೋಧ ವ್ಯಕ್ತಪಡಿಸಿದ ಬಳಿಕ ಪ್ರವಚನ ಮಾಡಿಸಿಲ್ಲ’ ಎಂದು ಡಿಡಿಪಿಐ ಜಿ.ಕೆ. ಪುಟ್ಟರಾಜು ತಿಳಿಸಿದರು. ‘ವಿರೋಧ ವ್ಯಕ್ತವಾಗುತ್ತಿರುವ ಬಗ್ಗೆ ಸ್ವಾಮೀಜಿ ಅವರಿಗೂ ತಿಳಿಸಲಾಗಿದೆ. ಅನುಮತಿ ನೀಡಿದ್ದ ಸುತ್ತೋಲೆಯನ್ನು ಇನ್ನೂ ವಾಪಸ್ ಪಡೆದಿಲ್ಲ. ಕೂಡಲೇ ಹಿಂಪಡೆಯಲಾಗುವುದು’ ಎಂದು ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.