ಬಾಳೆಹೊನ್ನೂರು: ಪಟ್ಟಣದಲ್ಲಿ ಡಿ. 18ರಂದು ರಾತ್ರಿ 4 ಅಂಗಡಿಗಳಲ್ಲಿ ಸರಣಿ ಕಳ್ಳತನ ನಡೆಸಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಒರ್ವ ಆರೋಪಿ ಪರಾರಿಯಾಗಿದ್ದು ಬಂಧಿತರಿಂದ ₹4,10,985 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಮೂಲದ ಶಿವಮೊಗ್ಗ ವಾಸಿ ಆರ್.ಕರುಣ, ಕೋಟೆ ಹೊಸದುರ್ಗ ನಿವಾಸಿ ಹಸೈನ್ ಎಂಬುವರನ್ನು ಬಂಧಿಸಿರುವ ಪೊಲೀಸರು ಅವರಿಂದ ಕೃತ್ಯಕ್ಕೆ ಬಳಸಿದ್ದ ಸ್ವಿಪ್ಟ್ ಕಾರು, ಕಳುವು ಮಾಡಿದ್ದ ಟಿವಿ, ವಾಚ್, ನಗದು, ಹೋಂ ಥೀಯೇಟರ್ ಸೇರಿದಂತೆ ವಿವಿಧ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಪರಾರಿಯಾಗಿರುವ ಆರೋಪಿಯ ಬಂಧನಕ್ಕೆ ಬಲೆ ಬೀಸಲಾಗಿದೆ. ಆರೋಪಿಗಳು ಅಂತರರಾಜ್ಯ ಕಳ್ಳರಾಗಿದ್ದು, ಈ ಹಿಂದೆ ಆಂಧ್ರ, ಕರ್ನಾಟಕದ ಉಡುಪಿ, ಸಾಗರ, ಕಡೂರು, ಅಜ್ಜಂಪುರ ಸೇರಿದಂತೆ 50ಕ್ಕೂ ಹೆಚ್ಚು ಕಡೆ ಕಳ್ಳತನ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಾರ್ಯಾಚರಣೆಯಲ್ಲಿ ಪಿಎಸ್ಐ ರವೀಶ್, ಸಿಬ್ಬಂದಿಗಳಾದ ಕೆ.ಜೆ.ಶಂಕರ್, ಜಯರಾಂ, ಮಂಜುನಾಥ್, ವಿನಾಯಕ, ಮನು, ಮಂಜುನಾಥ್ ಗುಗ್ಗರಿ, ಕಿರಣ್, ಭೀಮ್ಸೇನ, ಚೆನ್ನಯ್ಯ, ಚಾಲಕ ಕಾರ್ತಿಕ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.