ಭಾನುವಾರ, ಜನವರಿ 19, 2020
20 °C

ಚಿಕ್ಕಮಗಳೂರಿನ ಕೆಲವೆಡೆ ಜಿಯೊ, ಏರ್‌ಟೆಲ್ ಇಂಟರ್‌ನೆಟ್ ಸೇವೆ ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದ ಎನ್.ಆರ್.ಪುರ, ಕೊಪ್ಪ, ಬಾಳೆಹೊನ್ನೂರು, ಶೃಂಗೇರಿ ಭಾಗದಲ್ಲಿ 'ಜಿಯೊ', 'ಏರ್ ಟೆಲ್' ಇಂಟರ್ ನೆಟ್ ಸಂಪರ್ಕ ಕಡಿತಗೊಳಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿಭಟನೆ ಕಾವು ಏರಿರುವ ನಿಮಿತ್ತ ಕಾಫಿನಾಡಿನ ಮಲೆನಾಡು ಭಾಗದ ಕೆಲವೆಡೆ ಜಿಯೊ, ಏರ್ ಟೆಲ್ ಇಂಟರ್ ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. 

ಈ ಬಗ್ಗೆ ಗ್ರಾಹಕರಿಗೆ ಎಸ್ಎಂಎಸ್ ರವಾನಿಸಲಾಗಿದೆ. ಸರ್ಕಾರದ ಸೂಚನೆ ಮೇರೆಗೆ ತಾತ್ಕಾಲಿಕವಾಗಿ  ಸೇವೆ ಕಡಿತಗೊಳಿಸಲಾಗಿದೆ ಎಂದು ತಿಳಿಸಲಾಗಿದೆ. ದೂರವಾಣಿ  ಸಂಪರ್ಕ ಮಾಮೂಲಿಯಂತೆ ಇದೆ.  ಬಿಎಸ್ಎನ್ಎಲ್ ಇಂಟರ್‌ನೆಟ್ ಸೇವೆ ಲಭ್ಯ ಇದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು