ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಸರ್ಕಾರಗಳಿಂದ ಬಡವರ ಸುಲಿಗೆ: ವೈ.ಎಸ್.ವಿ. ದತ್ತ ಟೀಕೆ

ಪ್ರತಿಭಟನಾ ಪಾದಯಾತ್ರೆಯಲ್ಲಿ ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್.ವಿ. ದತ್ತ ಟೀಕೆ
Last Updated 7 ಮಾರ್ಚ್ 2021, 3:59 IST
ಅಕ್ಷರ ಗಾತ್ರ

ಬೀರೂರು: ‘ಭಾವನಾತ್ಮಕ ವಿಷಯಗಳನ್ನು ಕೆರಳಿಸಿ ರಾಜ್ಯ ಮತ್ತು ಕೇಂದ್ರಗಳಲ್ಲಿ ಅಧಿಕಾರದ ಅಂಕುಶ ಹಿಡಿದಿರುವ ಬಿಜೆಪಿ ಸರ್ಕಾರಗಳ ಜನವಿರೋಧಿ ನೀತಿಯಿಂದ ಬಡವರ ಜೇಬಿನ ಹಣದ ಸುಲಿಗೆಯಾಗುತ್ತಿದೆ’ ಎಂದು ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್.ವಿ.ದತ್ತ ಆಕ್ರೋಶ ವ್ಯಕ್ತಪಡಿಸಿದರು.

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮತ್ತು ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಬೀರೂರು ಜೆಡಿಎಸ್ ಯುವ ಘಟಕ ಆಯೋಜಿಸಿದ್ದ ಬೀರೂರು ಕೆಇಬಿ ಕಚೇರಿ ಬಳಿಯಿಂದ ಕಡೂರು ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನ ಪಾದಯಾತ್ರೆಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಬಡವ, ರೈತ, ಜನಸಾಮಾನ್ಯರ ವಿರೋಧಿ ಆಡಳಿತ ಹಾಗೂ ಆರ್ಥಿಕ ನೀತಿಯಿಂದ ಎಲ್ಲ ವಸ್ತುಗಳ ಬೆಲೆ ಗಗನಕ್ಕೇರಿದೆ. ಜನಕಲ್ಯಾಣ ಕಾರ್ಯಕ್ರಮಗಳಿಗೆ ಹಣ ಇಲ್ಲವೆನ್ನುವ ಸರ್ಕಾರಗಳು ಬೇಡದ ಕಾರಣಗಳಿಗೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿವೆ. ಅಪಪ್ರಚಾರಗಳಿಗೆ ಮನಸೋತು, ಕಣ್ಣುಮುಚ್ಚಿ ಬಿಜೆಪಿ ಬೆಂಬಲಿಸಿದ ಜನಸಮೂಹ ಪರಿತಪಿಸು ವಂತಾಗಿದೆ’ ಎಂದು ಟೀಕಿಸಿದರು.

ಬೀರೂರು ಮೆಸ್ಕಾಂ ಕಚೇರಿ ಬಳಿ ಆರಂಭವಾದ ಪ್ರತಿಭಟನ ಮೆರವಣಿಗೆ ಯಲ್ಲಿ ಜೆಡಿಎಸ್ ಕಾರ್ಯಕರ್ತರು, ‘ಜನವಿರೋಧಿ ಬಿಜೆಪಿ ಸರ್ಕಾರಗಳಿಗೆ ಧಿಕ್ಕಾರ, ಬೇಕೇಬೇಕು-ನ್ಯಾಯ ಬೇಕು, ಡೌನ್ ಡೌನ್ ಬಿಜೆಪಿ’ ಎಂದು ಘೋಷಣೆಗಳನ್ನು ಕೂಗುತ್ತಾ ಪಾದಯಾತ್ರೆಯಲ್ಲಿ ಸಾಗಿದರು.

ಜೆಡಿಎಸ್ ತಾಲ್ಲೂಕು ಘಟಕ ಅಧ್ಯಕ್ಷ ಕೋಡಿಹಳ್ಳಿ ಮಹೇಶ್ವರಪ್ಪ, ರಾಜ್ಯ ಯುವ ಘಟಕ ಪ್ರಧಾನ ಕಾರ್ಯದರ್ಶಿ ಪ್ರೇಂಕುಮಾರ್, ಕೆಎಂಎಫ್ ನಿರ್ದೇಶಕ ಬಿದರೆ ಜಗದೀಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಪಿ.ನಾಗರಾಜ್, ಬಾವಿಮನೆ ಮಧು, ತಾಲ್ಲೂಕು ಪಂಚಾ ಯಿತಿ ಸದಸ್ಯ ಬ್ಯಾಗಡೆಹಳ್ಳಿ ಬಸವರಾಜು, ಪುರಸಭೆ ಸದಸ್ಯ ಮೋಹನ್‍ಕುಮಾರ್, ಜೆಡಿಎಸ್ ಯುವ ಘಟಕದ ಮುಬಾರಕ್, ಗಣೇಶ್, ಬಿ.ಆರ್.ಹೇಮಂತ್, ಹಿರಿಯ ಕಾರ್ಯಕರ್ತರಾದ ಯರದಕೆರೆ ರಾಜಪ್ಪ, ಪಾತೇನಹಳ್ಳಿ ಚೌಡಪ್ಪ, ರವಿಪ್ರಕಾಶ್, ಪುನೀತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT