ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಚನಕಾರರ ರಚನೆಗಳು ಇಂದಿಗೂ ಪ್ರಸ್ತುತ’

‘ಮತ್ತೆ ಕಲ್ಯಾಣ’ ಕಾರ್ಯಕ್ರಮ
Last Updated 2 ಆಗಸ್ಟ್ 2022, 1:55 IST
ಅಕ್ಷರ ಗಾತ್ರ

ಕಡೂರು:‘12ನೇ ಶತಮಾನದ ವಚನಕಾರರ ಅನುಭವದ ರಚನೆಗಳು ಇಂದಿಗೂ ಪ್ರಸ್ತುತ’ ಎಂದು ಸಾಣೆಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

‘ಮತ್ತೆ ಕಲ್ಯಾಣ’ ಕಾರ್ಯಕ್ರಮಕ್ಕೆ ತೆರಳುವ ಮಾರ್ಗ ಮಧ್ಯೆ ಕಡೂರಿನ ಪ್ರಜ್ಞಾ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ವಚನಕಾರರ ಜ್ಞಾನದ ಮಟ್ಟ ವಿಶ್ವವಿದ್ಯಾಲಯಕ್ಕಿಂತ ಹೆಚ್ಚಿತ್ತು ಎಂಬುದು ಉತ್ಪ್ರೇಕ್ಷೆಯಲ್ಲ. ಜೀವನಾನುಭವವನ್ನು ವಚನಗಳ ಮೂಲಕ ಹೇಳಿ ಸಮಾಜದ ಓರೆ ಕೋರೆಗಳನ್ನು ತಿದ್ದುವ ಪ್ರಯತ್ನ ಮಾಡಿದರು. ಆ ಪರಂಪರೆ ಮತ್ತೆ ಪುನರುಜ್ಜೀವನಗೊಳ್ಳಬೇಕೆಂಬ ಆಶಯದ ಫಲವೇ ಮತ್ತೆ ಕಲ್ಯಾಣ ಕಾರ್ಯಕ್ರಮ. ವಚನಕಾರರು, ಶರಣರು ಸಾರಿದ ಸಮಾನತೆಯ ಸಂದೇಶಗಳ ಸಾಕಾರವಾಗಬೇಕು, ಸಾರ್ವಜನಿಕರಲ್ಲಿ, ಮಕ್ಕಳಲ್ಲಿ ಸಂಸ್ಕೃತಿಯ ಪರಿಚಯ ಮತ್ತು ಸಂಸ್ಕಾರ ಮೂಡಿಸಬೇಕೆಂಬ ಚಿಂತನೆಯಿಂದ ಈ ಕಾರ್ಯಕ್ರಮ ರೂಪಿತಗೊಂಡಿತು’ ಎಂದು ಅವರು ವಿವರಿಸಿದರು

ಮತ್ತೆ ಕಲ್ಯಾಣ ಅಭಿಯಾನ 2019ರಲ್ಲಿ ಅತ್ಯಂತ ಯಶಸ್ವಿಯಾಗಿ ನಡೆದಿತ್ತು. ಇದೀಗ ಅರಸೀಕೆರೆಯ ಗ್ರಾಮೀಣ ಭಾಗಗಳಲ್ಲಿ ಈ ಅಭಿಯಾನ ಒಂದು ತಿಂಗಳ ಕಾಲ ನಡೆಯಲಿದೆ ಎಂದರು.

ಪ್ರಜ್ಞಾ ಶಾಲೆಯ ಕಾರ್ಯದರ್ಶಿ ಮಂಜುನಾಥ ಪ್ರಸನ್ನ ಮಾತನಾಡಿ, ‘ಮತ್ತೆ ಕಲ್ಯಾಣ ಎಂಬ ಕಲ್ಪನೆಯೇ ವಿನೂತನ. ಸಮಾಜದಲ್ಲಿ ಸಮಾನತೆಯ ಸಾಕಾರವಾಗಬೇಕೆಂಬ ಪ್ರಜ್ಞಾವಂತ ಚಿಂತನೆ ಇದರಲ್ಲಿದೆ. ಎಲ್ಲರೂ ಇದರ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕಾದ್ದು ಇಂದಿನ ಅಗತ್ಯವಾಗಿದೆ’ ಎಂದರು.

ಶಾಲೆಯ ಅಧ್ಯಕ್ಷ ಕೆ.ಎನ್.ರಾಜಣ್ಣ, ಉಪಾಧ್ಯಕ್ಷ ಡಿ.ಪ್ರಶಾಂತ್, ದೀಕ್ಷಾ ಶಾಲೆಯ ನವೀನ್ ಡಿ.ಆಲ್ಮೆಡಾ, ಮುಖ್ಯಶಿಕ್ಷಕಿ ಕ್ಲಾರಾ ಡಿಮೆಲ್ಲೋ
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT