ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಸ: ನಿರ್ಮಾಣ ಹಂತದಲ್ಲಿದ್ದ ಸೇತುವೆಯ ತಡೆಗೋಡೆ ಕುಸಿತ

Last Updated 16 ಜುಲೈ 2022, 3:09 IST
ಅಕ್ಷರ ಗಾತ್ರ

ಕಳಸ: ಇಲ್ಲಿನ ಅಬ್ಬುಗುಡಿಗೆ- ಕಲ್ಲುಗೋಡು ರಸ್ತೆಯಲ್ಲಿ ನಿರ್ಮಾಣ ಹಂತದ ಸೇತುವೆಗೆ ಹೊಂದಿ ಕೊಂಡಂತೆ ಇದ್ದ ತಡೆಗೋಡೆ ಶುಕ್ರವಾರ ಕುಸಿದು ಬಿದ್ದಿದೆ.

₹ 40 ಲಕ್ಷ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ನಿರ್ಮಾಣ ಮಾಡುತ್ತಿರುವ ಈ ಸೇತುವೆಯ ತಡೆಗೋಡೆಯಲ್ಲಿ 10 ದಿನದ ಹಿಂದೆಯೇ ಸ್ಥಳೀಯರು ದೋಷ ಪತ್ತೆ ಮಾಡಿದ್ದರು. ಈಗ ತಡೆಗೋಡೆ ಬಿದ್ದಿದೆ.

‘4 ವರ್ಷದಿಂದ ನಮ್ಮ ಊರಿಗೆ ಮಳೆಗಾಲದಲ್ಲಿ ರಸ್ತೆ ಸಂಪರ್ಕ ಇಲ್ಲದೆ ಕಷ್ಟ ಪಟ್ಟಿದ್ದೆವು. ಈ ಬಾರಿ ಸೇತುವೆ ಕೆಲಸ ಆಯಿತು ಎಂಬ ಸಮಾಧಾನದಲ್ಲಿ ಇರುವಾಗಲೇ ತಡೆಗೋಡೆ ಕುಸಿದಿದೆ. ಇನ್ನು ನಮ್ಮ ರಸ್ತೆ ಕೂಡ ಕುಸಿದು ಹೋದರೆ ನಮಗೆ ಸಂಪರ್ಕ ರಸ್ತೆಯೇ ಇಲ್ಲ’ ಎಂದು ಕಲ್ಲುಗೋಡಿನ ಯುವಕ ಗಿರೀಶ್ ಆತಂಕ ಹೊರಹಾಕಿದರು.

‘ಸೇತುವೆಯ ಉಳಿದ ತಡೆಗೋಡೆಗಳು ಕೂಡ ಬೀಳುವ ಸಾಧ್ಯತೆ ಇದೆ. ಕಳಪೆ ಕಾಮಗಾರಿ ಮಾಡಿದವರ ಮೇಲೆ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಹರಿಜನ ಕಾಲೊನಿಯ ಬಾಲಕೃಷ್ಣ ಒತ್ತಾಯಿಸಿದ್ದಾರೆ.

ಈ ಬಗ್ಗೆ ಲೊಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಮಂಜುನಾಥ್ ಅವರನ್ನು ಪ್ರಶ್ನಿಸಿದಾಗ ಅವರು, ‘15 ದಿನದ ಹಿಂದಷ್ಟೇ ನಿರ್ಮಾಣ ಆದ ತಡೆಗೋಡೆ ಮೇಲೆ ಅತಿಹೆಚ್ಚು ಮಣ್ಣನ್ನು ಹೇರಿದ್ದರಿಂದ ತಡೆಗೋಡೆ ಕುಸಿದಿರಬಹುದು. ಗುತ್ತಿಗೆದಾರರಿಗೆ ಈವರೆಗೆ ಹಣ ಪಾವತಿ ಮಾಡಿಲ್ಲ. ತಡೆಗೋಡೆ ಪುನರ್ ನಿರ್ಮಾಣ ಮಾಡಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT