ಕೊಪ್ಪ: ತಾಲ್ಲೂಕಿನಲ್ಲಿ ಕೃಷಿಕರು ಶನಿವಾರದಂದು ಭೂಮಿ ಹುಣ್ಣಿಮೆ ಹಬ್ಬ ಆಚರಿಸಿದರು.
ಮನೆಯಲ್ಲಿ 101 ಬಗೆಯ ಸಸ್ಯಗಳಿಂದ ತಯಾರಿಸಿದ ಕೊಟ್ಟೆಕಡುಬು, ಪಲ್ಯ, ಅಚ್ಚಂಬಲಿ ಮುಂತಾದ ಪದಾರ್ಥವನ್ನು ಭೂಮಿ ಹುಣ್ಣಿಮೆಯ ಮುಂಜಾನೆ ರೈತರು ತಮ್ಮ ಜಮೀನಿಗೆ ಅದನ್ನು ಕೊಂಡೊಯ್ದು ಅಲ್ಲಿ ಹಣ್ಣುಕಾಯಿ ಇಟ್ಟು, ವಿಶೇಷ ಪೂಜೆ ಮಾಡಿ, ಭೂಮಿತಾಯಿಗೆ ಬಡಿಸಿದರು.
‘ಭೂಮಿ ಮೇಲೆ ಬೆಳೆದ ಬೆಳೆಗಳು ಭೂಮಿ ಹುಣ್ಣಿಮೆಯ ದಿನದಂದು ಫಲವನ್ನು ನೀಡುವ ಸಮಯ. ಈಗ ಭೂಮಾತೆ ಗರ್ಭಿಣಿಯಾಗಿದ್ದು, ಆಕೆಗೆ ಸೀಮಂತ ಮಾಡುವ ಕಾರ್ಯಕ್ರಮ ಇದಾಗಿದೆ. ಇದರಿಂದ ಉತ್ತಮ ಫಸಲು ಭೂಮಿತಾಯಿ ನೀಡುತ್ತಾಳೆ’ ಎಂಬುದು ರೈತರ ನಂಬಿಕೆಯಾಗಿದೆ.