ನರಸಿಂಹರಾಜಪುರ: ‘ರಾಷ್ಟ್ರಕವಿ ಕುವೆಂಪು ಅವರು ತಮ್ಮ ಸಾಹಿತ್ಯದಲ್ಲಿ ಮಲೆನಾಡು ಭಾಗದ ಗ್ರಾಮೀಣ ಜನರ ಬದುಕಿನ ಚಿತ್ರಣವನ್ನು ಸುಂದರವಾಗಿ ಚಿತ್ರಿಸಿದ್ದಾರೆ. ಅವರು, ಸಾಹಿತ್ಯ ಲೋಕದ ಮಾಣಿಕ್ಯ’ ಎಂದು ಜ್ವಾಲಾಮಾಲಿನಿ ಜೆ.ಸಿ.ಐ ಸಂಸ್ಥೆಯ ನಿರ್ದೇಶಕ ಜಿ.ಪುರುಷೋತ್ತಮ್ ಹೇಳಿದರು.

ಪಟ್ಟಣದ ರೋಟರಿ ಕ್ಲಬ್ ಹಾಲ್ನಲ್ಲಿ ಗುರುವಾರ ನಡೆದ ಕುವೆಂಪು ಜನ್ಮದಿನಾಚರಣೆ ಪ್ರಯುಕ್ತ ಜೆ.ಸಿ.ಐ ಸಂಸ್ಥೆಯಿಂದ ಆಯೋಜಿಸಿದ್ದ ವಿಶ್ವಮಾನವ ದಿನಾಚರಣೆ ಹಾಗೂ ಹೊಸ ವರ್ಷ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು.

ಕುವೆಂಪು ಅವರು ಕೊಪ್ಪ ತಾಲ್ಲೂಕಿನವರಾಗಿರುವುದು ನಮ್ಮೆಲ್ಲರ ಹೆಮ್ಮೆಯಾಗಿದೆ. ಅವರ ವೈಜ್ಞಾನಿಕ ಚಿಂತನೆಗಳು, ಸಾಹಿತ್ಯಗಳು ಯುವಪೀಳಿಗೆಗೆ ಅನುಕರಣೀಯವಾಗಿವೆ ಎಂದರು.

ಜೆ.ಸಿ.ಐ ಸಂಸ್ಥೆಯ ನಿರ್ದೇಶಕ ಪ್ರೀತಮ್ ಮಾತನಾಡಿ, ಕುವೆಂಪುರವರು ಬರೆದ ಕಥೆ, ಕಾದಂಬರಿಗಳನ್ನು ಯುವಜನರು ಓದಬೇಕು. ಅವರ ಪ್ರತಿಯೊಂದು ಕೃತಿಗಳಲ್ಲಿ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತವೆ. ಕಾದಂಬರಿಗಳಲ್ಲಿ ಬರುವ ಪಾತ್ರಗಳು ಪ್ರತಿ ಕಾಲಘಟ್ಟಕ್ಕೂ ಅನ್ವಯಿಸುತ್ತದೆ. ಅವರ ಬರಹಗಳನ್ನು ಓದಿ ಆನಂದಿಸುವುದೇ ನಮ್ಮೆಲ್ಲರ ಭಾಗ್ಯವಾಗಿದೆ ಎಂದರು.

ಜ್ವಾಲಾಮಾಲಿನಿ ಜೆ.ಸಿ.ಐ ಸಂಸ್ಥೆ ಅಧ್ಯಕ್ಷ ಆದರ್ಶ ಬಿ.ಗೌಡ ಅಧ್ಯಕ್ಷತೆ ವಹಿಸಿದ್ದರು. ಹೊಸ ವರ್ಷಾಚರಣೆ ಅಂಗವಾಗಿ ಕೇಕ್ ಕತ್ತರಿಸಲಾಯಿತು.

ಜೆ.ಸಿ.ಐ ಪೂರ್ವ ವಲಯ ಉಪಾಧ್ಯಕ್ಷ ಚರಣ್ರಾಜ್, ಜೆ.ಸಿ.ಐ ಉಪಾಧ್ಯಕ್ಷರಾದ ಪ್ರಮಾಂಕ್, ದೇವಂತ್ರಾಜ್ಗೌಡ, ಸತ್ಯಪ್ರಸಾದ್, ಕಾರ್ಯದರ್ಶಿ ರಜಿತ್ ವಗ್ಗಡೆ, ಖಜಾಂಚಿ ಜೀವನ್, ನಿರ್ದೇಶಕರಾದ ಜೋಯಿ ಬ್ರೋ, ಪ್ರೀತಮ್, ನವೀನ್, ಮಿಥುನಗೌಡ, ನೂತನ ಸದಸ್ಯರುಗಳಾದ ಮನು, ಸುಹಾಸ್, ಪ್ರಥಮ್, ಶ್ರೀಹರಿ, ಮಂಜುನಾಥ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.