ಶುಕ್ರವಾರ, ಫೆಬ್ರವರಿ 26, 2021
20 °C

ಚಿಕ್ಕಮಗಳೂರು: ಕಂಪಿಸಿದ ಭೂಮಿ, ಆತಂಕದಲ್ಲಿ ಜನರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲ್ಲೂಕಿನ ಕೊಗ್ರೆಮನೆ ಮನೆ ಗ್ರಾಮ ಆಸುಪಾಸಿನಲ್ಲಿ ಶುಕ್ರವಾರ ಭೂಮಿ ಕಂಪಿಸಿದ ಅನುಭವವಾಗಿದೆ.

ಗ್ರಾಮಸ್ಥ ಕೆ.ಎಸ್.ವೆಂಕಟೇಶ್ ಅವರು 'ಪ್ರಜಾವಾಣಿ'ಯೊಂದಿಗೆ ಮಾತನಾಡಿ, 'ಬೆಳಿಗ್ಗೆ 10 ಗಂಟೆ ಸುಮಾರಿಗೆ ಡಬ್ ಎಂದು ಜೋರಾಗಿ ಶಬ್ಧ ಕೇಳಿಸಿತು. ಮನೆಯ ಅಡುಗೆಕೋಣೆಯಲ್ಲಿ ಪಾತ್ರೆಗಳು ಅಲುಗಾಡಿದವು' ಎಂದು ತಿಳಿಸಿದರು.

'ಕಂಪನದ ಅನುಭವ ಆಯಿತು.ಗುರುವಾರವೂ ಒಮ್ಮೆ ಇದೇ ರೀತಿಯ ಶಬ್ಧ ಕೇಳಿಸಿತ್ತು. ಮಾರ್ಚ್ ಹಾಗೂ ಏಪ್ರಿಲ್‌ನಲ್ಲಿಯೂ ಭೂಮಿ ನಡುಗಿದ ಅನುಭವ ಆಗಿತ್ತು' ಎಂದರು.

ಕೊಗ್ರೆಮನೆ ಮತ್ತು ಸುತ್ತಮುತ್ತಲಿನ ಪ್ರದೇಶದ ಜನರು ಭಯಭೀತರಾಗಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು