ಮೂಡಿಗೆರೆ: ವಕ್ಫ್ ಕಾಯ್ದೆ ತಿದ್ದುಪಡಿ ರದ್ದುಪಡಿಸಬೇಕು ಎಂದು ಒತ್ತಾಯಿಸಿ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಕರೆ ನೀಡಿದ್ದ ಲೈಟ್ ಆಫ್ ಚಳವಳಿಗೆ ತಾಲ್ಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು

ಶುಕ್ರವಾರ ರಾತ್ರಿ 9ರಿಂದ 9.30 ರವರೆಗೆ ಮುಸ್ಲಿಂ ಸಮುದಾಯದವರು ವಾಸದ ಮನೆ, ಅಂಗಡಿ, ಹೋಟೆಲ್, ಸೂಪರ್ ಮಾರ್ಕೆಟ್, ತರಕಾರಿ, ಮೀನು, ಮಾಂಸದ ಮಾರುಕಟ್ಟೆ, ಇನ್ನಿತರ ವ್ಯಾಪಾರ ಕೇಂದ್ರ, ಖಾಸಗಿ ಕಚೇರಿ, ಮದರಸ, ಮಸೀದಿ, ದರ್ಗಾ ಸೇರಿದಂತೆ ಎಲ್ಲಾ ಕಡೆ ವಹಿವಾಟು ಬಂದ್ ಮಾಡಿ 30 ನಿಮಿಷ ವಿದ್ಯುತ್ ದೀಪ ಆರಿಸಿ, ಕತ್ತಲೆಯಲ್ಲಿ ಕುಳಿತು ವಿನೂತನ ರೀತಿಯಲ್ಲಿ ಚಳುವಳಿ ನಡೆಸಿದರು.

ಬ್ಯಾರಿ ಒಕ್ಕೂಟದ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಎಚ್. ಮಹಮ್ಮದ್ ಮಾತನಾಡಿ, ‘ವಕ್ಪ್ ತಿದ್ದುಪಡಿ ಕಾಯ್ದೆ ಮುಸ್ಲಿಮರಿಗೆ ಮರಣ ಶಾಸನವಾಗಿದೆ. ಕಾಯ್ದೆ ತಿದ್ದುಪಡಿಗೆ ದೇಶದಾದ್ಯಂತ ವಿರೋಧ ವ್ಯಕ್ತವಾಗಿದೆ. ಈ ಕಾಯ್ದೆಯನ್ನು ಹಿಂಪಡೆಯಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿ ಕೊಡುವ ಉದ್ದೇಶದಿಂದ ಮುಸ್ಲಿಮರು ಲೈಟ್ ಆಫ್ ಚಳುವಳಿ ನಡೆಸಿದ್ದಾರೆ. ಈಗಲೂ ಕೇಂದ್ರ ಸರ್ಕಾರ ಮೊಂಡುತನ ಮುಂದುವರಿಸಿ ಕಾಯ್ದೆಯನ್ನು ಜಾರಿಗೆ ತರಲು ಪ್ರಯತ್ನಿಸಿದರೆ ದೇಶದ ಜನರು ತಕ್ಕ ಪಾಠ ಕಲಿಸಲು ತುದಿಗಾಲಲ್ಲಿ ನಿಂತಿದ್ದಾರೆʼ ಎಂದರು.

ʼವಕ್ಫ್ ಮಂಡಳಿಗೆ ಸೇರಿದ ಆಸ್ತಿಯನ್ನು ಮುಸ್ಲಿಮರು ಯಾರಿಂದಲೂ ಕಬಳಿಸಿದ್ದಲ್ಲ. ಮುಸ್ಲಿಂ ಜಮೀನ್ದಾರರು ದಾನವಾಗಿ ನೀಡಿದ ಆಸ್ತಿಯನ್ನು ವಕ್ಫ್ ಮಂಡಳಿಗೆ ಪಡೆಯಲಾಗಿದೆ. ಅದರ ಮೇಲೆ ಈಗ ಕೇಂದ್ರ ಸರ್ಕಾರದ ಕಣ್ಣು ಬಿದ್ದಿದೆ. ವಕ್ಫ್ಗೆ ಸೇರಿದ ಜಮೀನನ್ನು ಕಬಳಿಸುವ ಹುನ್ನಾರದಿಂದ ಕೇಂದ್ರ ಸರ್ಕಾರ ಹಿಂದೆ ಸರಿಯಬೇಕು. ಇಲ್ಲವಾದರೆ ದೇಶದಲ್ಲಿ ಬಹು ದೊಡ್ಡ ಆಂದೋಲನ ನಡೆಯಲಿದೆʼ ಎಂದು ಅವರು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.