ಭಾನುವಾರ, ಸೆಪ್ಟೆಂಬರ್ 19, 2021
24 °C
ʼಸರ್ಕಾರ ಬಹಳ ದಿನ ಉಳಿಯಲ್ಲʼ ಎಂಬ ಹೇಳಿಕೆಗೆ ಪ್ರತಿಕ್ರಿಯೆ

ಭವಿಷ್ಯ ಹೇಳಲು ಸಿದ್ದರಾಮಯ್ಯ ಕಾಲಜ್ಞಾನಿಯೇ: ಸಿ.ಟಿ.ರವಿ ವ್ಯಂಗ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ‘ಸರ್ಕಾರ ಬಹಳ ದಿನ ಉಳಿಯಲ್ಲ ಎಂದು ಭವಿಷ್ಯ ಹೇಳಲು ಸಿದ್ದರಾಮಯ್ಯ ಅವರೇನು ಕಾಲಜ್ಞಾನಿಯೇ? ಅವರು ಹೇಳಿದ್ದಕ್ಕೆ ತದ್ವಿರುದ್ಧವಾಗಿ ಎಲ್ಲ ನಡೆಯುತ್ತೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದು ಅವರು, ‘ಮೋದಿ ಅವರು ಪ್ರಧಾನಿಯಾಗಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು, ಮೋದಿ ಎರಡು ಬಾರಿ ಪ್ರಧಾನಿಯಾಗಲಿಲ್ಲವೇ’ ಎಂದು ಪ್ರಶ್ನಿಸಿದರು.

‘ಬಾಯಿಯಲ್ಲಿ ಮಚ್ಚೆ ಇದ್ದವರು ಹೇಳಿದ್ದು ನಡೆಯುತ್ತೆ ಎಂದು ಹೇಳಲಾಗುತ್ತದೆ. ಸಿದ್ದರಾಮಯ್ಯ ಬಾಯಿಯಲ್ಲಿ ಇರುವುದು ಉಲ್ಟಾ ಮಚ್ಚೆ. ಹಾಗಾಗಿ, ಹೀಗೆ ಆಗುತ್ತೆ’ ಎಂದು ಲೇವಡಿ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು