ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು | ಮಹಿಳಾ ವಿಭಾಗದಲ್ಲಿ ಐಶ್ವರ್ಯಾ ಪ್ರಥಮ

ಎಂಆರ್‌ಎಫ್‌ ಮಾಗ್ರಿಪ್‌ ಬೈಕ್‌ ರ್ಯಾಲಿ ಮೊದಲ ಸುತ್ತು
Last Updated 16 ಮೇ 2022, 3:20 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಎಂಆರ್‌ಎಫ್‌ ಮಾಗ್ರಿಪ್‌ ಎಫ್‌ಎಂಎಸ್‌ಸಿಐ ನ್ಯಾಷನಲ್‌ ರ್ಯಾಲಿ ಚಾಂಪಿಯನ್‌ಶಿಪ್‌– 2ಡಬ್ಲ್ಯು ದ್ವಿಚಕ್ರವಾಹನ ಸ್ಟೇಜ್‌ ರ್ಯಾಲಿಯ ಮೊದಲ ಸುತ್ತಿನ ಮಹಿಳಾ ವಿಭಾಗದಲ್ಲಿ ಟಿವಿಎಸ್‌ ರೇಸಿಂಗ್‌ ತಂಡದ ಹೊಸೂರಿನ ಐಶ್ವರ್ಯಾ ಪಿಚ್ಚೈ ಪ್ರಥಮ ಬಹುಮಾನ ಪಡೆದಿದ್ದಾರೆ.

ಪ್ರಿವೆಟೀರ್‌ ತಂಡದ ಮಂಗಳೂರಿನ ಬಿ.ಅಪೂರ್ವಾ –ದ್ವಿತೀಯ ಹಾಗೂ ಎರ್ನಾಕುಲಂನ ಯು. ಫಸೀಲಾ– ತೃತೀಯ ಸ್ಥಾನ ಪಡೆದಿದ್ದಾರೆ.

ಕ್ಲಾಸ್‌–1 ಸೂಪರ್‌ ಬೈಕ್‌ ಪ್ರೊಎಕ್ಸ್‌ಪರ್ಟ್‌: ಅಬ್ದುಲ್‌ ವಾಹಿದ್‌ ತನ್ವೀರ್‌– ಪ್ರಥಮ, ಸಾಮ್ಯುಯಲ್‌ ಜಾಕೊಬ್‌– ದ್ವಿತೀಯ ಹಾಗೂ ಆರ್‌.ನಟರಾಜ್‌– ತೃತೀಯ.

ಕ್ಲಾಸ್‌–2 ಸೂಪರ್‌ ಸ್ಪೋರ್ಟ್‌ 130 ಗ್ರೂಪ್‌ ಬಿ: ಚೆಲಾಸ್‌ ಕೆ.ಬೋಸ್‌– ಪ್ರಥಮ, ಅನೂಪ್‌ ಮಂಜಪ್ಪ– ದ್ವಿತೀಯ, ದಿಲೀಪ್‌ ರಾಜ್‌– ತೃತೀಯ.

ಕ್ಲಾಸ್‌–4 ಸೂಪರ್‌ ಸ್ಪೋರ್ಟ್‌ 260 ಗ್ರೂಪ್‌ ಬಿ: ಇಮ್ರಾನ್‌ ಪಾಷಾ– ಪ್ರಥಮ, ಡಿ.ಸಚಿನ್‌– ದ್ವಿತೀಯ ಹಾಗೂ ಅದ್ನಾನ್‌ ಅಹಮದ್‌– ತೃತೀಯ.

ಕ್ಲಾಸ್‌ 6 ಸೂಪರ್‌ ಸ್ಪೋರ್ಟ್‌ 550 ಗ್ರೂಪ್‌ ಬಿ: ವಿ.ಎಸ್‌.ನರೇಶ್‌– ಪ್ರಥಮ, ಅರುಣ್‌ ಜಾಯ್‌–ದ್ವಿತೀಯ ಹಾಗೂ ಜಿಮಾನ್‌ ಆಂತೋಣಿ– ತೃತೀಯ.

ಕ್ಲಾಸ್‌ 9 ಸೂಪರ್‌ ಸ್ಟಾಕ್‌ ಗ್ರೂಪ್‌ ಡಿ ಅಪ್‌ಟು 450 ಸಿಸಿ: ಸಂಜಯ್‌ಸೋಮಶೇಖರ್‌– ಪ್ರಥಮ, ವಿವೇಕ ವಿಜಯನ್‌– ದ್ವಿತೀಯ ಹಾಗೂ ಸುಚಿತ್‌ ಕುಮಾರ್‌ ರೆಡ್ಡಿ– ತೃತೀಯ.

ಕ್ಲಾಸ್‌–1ಎ ಸೂಪರ್‌ ಬೈಕ್‌ ಎಕ್ಸ್‌ಪರ್ಟ್‌ ಗ್ರೂಪ್‌ ಎ: ಸಾರಥ್‌ ಮೋಹನ್‌– ಪ್ರಥಮ, ಫ್ರಾನ್ಸಿಸ್‌ ಸಿನನ್‌– ದ್ವಿತೀಯ, ಅಸಾದ್‌ ಖಾನ್‌– ತೃತೀಯ.

ಕ್ಲಾಸ್‌–3 ಸೂಪರ್‌ ಸ್ಪೋರ್ಟ್‌ 165 ಗ್ರೂಪ್‌ ಬಿ: ಪಿ.ವಿ.ಫ್ರಾನ್ಸಿಸ್‌–ಪ್ರಥಮ, ಕೆ.ಶಶಿಕುಮಾರ್‌– ದ್ವಿತೀಯ ಹಾಗೂ ಶಾಬುದ್ದೀನ್‌ ಸೈಯ್ಯದ್‌– ತೃತೀಯ.

ಕ್ಲಾಸ್‌–8 ಗ್ರೂಪ್‌ ಬಿ ಸ್ಕೂಟರ್ಸ್‌ ಅಪ್‌ಟು 210 ಸಿಸಿ: ಶಮಿಮ್‌ ಖಾನ್‌– ಪ್ರಥಮ, ಟಿ.ಸುಬ್ರಮಣ್ಯ–ದ್ವಿತೀಯ, ಪಿಂಕೇಶ್‌ ತಕ್ಕಾರ್‌– ತೃತೀಯ.

ಕ್ಲಾಸ್‌–5 ಸೂಪರ್‌ ಸ್ಪೋರ್ಟ್‌ 400 ಗ್ರೂಪ್‌ ಬಿ: ಮಹಮ್ಮದ್‌ ಜಹೀರ್‌– ಪ್ರಥಮ, ವೇಣು ರಮೇಶ್‌ಕುಮಾರ್‌– ದ್ವಿತೀಯ, ವಿನೀತ್‌ ಶರ್ಮಾ– ತೃತೀಯ ಬಹುಮಾನ ಪಡೆದಿದ್ದಾರೆ.

ವಿಜೇತರಿಗೆ ನಗದು ಬಹುಮಾನ ಪ್ರಥಮ ₹ 9 ಸಾವಿರ, ದ್ವಿತೀಯ– ₹ 7 ಸಾವಿರ, ತೃತೀಯ– ₹ 5 ಸಾವಿರ ಹಾಗೂ ಟ್ರೋಫಿ ವಿತರಿಸಲಾಯಿತು. ಚಿಕ್ಕಮಗಳೂರು ತಾಲ್ಲೂಕಿನ ವಸಂತ ಕೂಲ್‌ ಮತ್ತು ತಿಪ್ಪನಹಳ್ಳಿ ಎಸ್ಟೇಟ್‌ನಲ್ಲಿ ಭಾನುವಾರ ಬೆಳಿಗ್ಗೆಯಿಂದ ಸಂಜೆವರೆಗೆ ರ್ಯಾಲಿ ನಡೆಯಿತು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಕ್ಷಯ್‌ ಎಂ.ಹಾಕೆ, ಪಲ್ಲವಿ ರವಿ ಅವರು ಬಹುಮಾನ ವಿತರಿಸಿದರು.

ರ್ಯಾಲಿ ಕಣ್ತುಂಬಿಕೊಳ್ಳಲು ನೂರಾರು ಮಂದಿ ಪಾಲ್ಗೊಂಡಿದ್ದರು. ಸ್ಪರ್ಧಿಗಳು ಉತ್ಸಾಹದಿಂದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

‘ಕಡಿದಾದ ಹಾದಿಯಲ್ಲಿ ಬೈಕ್‌ ಓಡಿಸುವುದು ಸವಾಲು’
ಎಸ್ಟೇಟ್‌ನಲ್ಲಿ ಕಡಿದಾದ ಹಾದಿಯಲ್ಲಿ ಬೈಕ್‌ ಓಡಿಸುವುದು ಸವಾಲು. ಅದೃಷ್ಟಕ್ಕೆ ಮಳೆ ಇರಲಿಲ್ಲ. 2016ರಿಂದ ಈವರೆಗೆ 10 ನ್ಯಾಷನಲ್‌ ರ್ಯಾಲಿಗಳಲ್ಲಿ ಚಾಂಪಿಯನ್‌ ಮುಡಿಗೇರಿಸಿಕೊಂಡಿದ್ದೇನೆ. ಡಾಕರ್‌ ಇವೆಂಟ್‌ನಲ್ಲಿ ಭಾಗವಹಿಸಿ ಚಾಂಪಿಯನ್‌ ಆಗಬೇಕು ಎಂಬ ಗುರಿ ಇದೆ. ಈ ನಿಟ್ಟಿನಲ್ಲಿ ತಯಾರಿಯಲ್ಲಿ ತೊಡಗಿದ್ದೇನೆ ಎಂದುಮಹಿಳಾ ವಿಭಾಗದ ಪ್ರಥಮ ಬಹುಮಾನ ವಿಜೇತರಾದ ಐಶ್ವರ್ಯಾ ಪಿಚ್ಚೈ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT