ಮೂಡಿಗೆರೆ: ಗೇಟ್ ಮಾಡಿಸುವ ವಿಷಯಕ್ಕೆ ಸಂಬಂಧ ಇಬ್ಬರ ನಡುವೆ ನಡೆದ ಗಲಾಟೆಯು ವ್ಯಕ್ತಿಯೊಬ್ಬರ ಸಾವಿನೊಂದಿಗೆ ಅಂತ್ಯವಾಗಿರುವ ಘಟನೆ ಪಟ್ಟಣದ ಬೇಲೂರು ರಸ್ತೆಯಲ್ಲಿ ನಡೆದಿದೆ.

ಜಾವಿದ್ (54) ಸಾವನ್ನಪ್ಪಿದ ಮೃತಪಟ್ಟವರು. ಪಟ್ಟಣದ ಬೇಲೂರು ರಸ್ತೆಯಲ್ಲಿ ವೆಲ್ಡಿಂಗ್ ಶಾಪ್ ಇಟ್ಟುಕೊಂಡಿದ್ದ ಜಾವೀದ್ ಅವರ ಬಳಿ ಛತ್ರಮೈದಾನದ ರಾಜು ಎಂಬ ಆಟೊ ಚಾಲಕ ಗೇಟ್ ನಿರ್ಮಿಸಿ ಕೊಡುವ ವಿಚಾರವಾಗಿ ಭಾನುವಾರ ಗಲಾಟೆ ನಡೆದಿದ್ದು, ಈ ವೇಳೆ ಹಲ್ಲೆಯಿಂದ ಜಾವಿದ್ ಅವರು ಸಾವನ್ನಪ್ಪಿದ್ದಾರೆ ಎಂದು ಜಾವಿದ್ ಪತ್ನಿ ಜೈನಾಬಿ ದೂರು ನೀಡಿದ್ದು, ಆರೋಪಿ ರಾಜುನನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯಿಂದ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಮುಂಜಾಗೃತಾ ಕ್ರಮವಾಗಿ ರಾತ್ರಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

ಕರ್ತವ್ಯಕ್ಕೆ ಅಡ್ಡಿ: ಪ್ರಕರಣ ದಾಖಲು: ಪಟ್ಟಣದಲ್ಲಿ ಭಾನುವಾರ ನಡೆದ ಕೊಲೆ ಪ್ರಕರಣ ಸಂಬಂಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ದಾಖಲಾಗಿದೆ.

ಮೃತ ಜಾವಿದ್ ಪುತ್ರ ಆಶಿರ್ ಎಂಬಾತ ತನ್ನ ಕಾರಿನಲ್ಲಿ ಪೊಲೀಸ್ ಠಾಣೆ ಆವರಣಕ್ಕೆ ಬಂದು, ಕಾರಿನ ಹಿಂಭಾಗದಲ್ಲಿ ಇಟ್ಟಿದ್ದ ಕತ್ತಿಯೊಂದಿಗೆ ಠಾಣೆಯೊಳಗೆ ನುಗ್ಗಿ, ಕರ್ತವ್ಯ ನಿರ್ವಹಿಸುತ್ತಿದ್ದ ಪುಟ್ಟೇಗೌಡ ಹಾಗೂ ಇತರ ಸಿಬ್ಬಂದಿಯನ್ನು ತಳ್ಳಿ, ಕೂಗಾಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.