ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡೂರು: ಪತಿಯಿಂದಲೇ ಪತ್ನಿಯ ಹತ್ಯೆ

Last Updated 9 ಜುಲೈ 2021, 17:03 IST
ಅಕ್ಷರ ಗಾತ್ರ

ಕಡೂರು: ತಾಲ್ಲೂಕಿನ ಪಂಚನಹಳ್ಳಿ ಬಳಿಯ ಬಿ.ಕಾವಲಹಟ್ಟಿ ಗ್ರಾಮದ ಗೀತಾ(40) ಅವರನ್ನು ಅವರ ಪತಿಯೇ ಹತ್ಯೆ ಮಾಡಿದ್ದಾರೆ.

ಗುರುವಾರ ರಾತ್ರಿ ಗೀತಾ ಅವರ ಗಂಡ ಶೇಖರ್ ಮದ್ಯಪಾನ‌ ಮಾಡಿ ಮನೆಗೆ ಬಂದಿದ್ದು, ಹೆಂಡತಿ ಜೊತೆ ಜಗಳವಾಡಿದ್ದಾನೆ. ಗೀತಾ ಅವರಿಗೂ ಮದ್ಯಪಾನ ಮಾಡುವ ಅಭ್ಯಾಸವಿತ್ತೆನ್ನಲಾಗಿದೆ. ಜಗಳ ವಿಕೋಪಕ್ಕೆ ಹೋಗಿ ಕೈ ಕೈ ಮಿಲಾಯಿಸುವ ಹಂತ ತಲುಪಿದೆ. ನಂತರ ಇಬ್ಬರೂ ಮಲಗಿದ್ದಾರೆ.

ಬೆಳಿಗ್ಗೆ ನೋಡಿದಾಗ ಗೀತಾ ಮೃತದೇಹ ಪತ್ತೆಯಾಗಿದೆ. ಶೇಖರ್ ನಾಪತ್ತೆಯಾಗಿದ್ದಾನೆ.

ಘಟನಾ ಸ್ಥಳಕ್ಕೆ ಡಿವೈಎಸ್ಪಿ ಯೇಗನಗೌಡ, ಇನ್‌ಸ್ಪೆಕ್ಟರ್ ಮಂಜುನಾಥ್, ಪಿಎಸ್‌ಐ ಶೋಭಾ ಭೇಟಿ ನೀಡಿದ್ದಾರೆ. ಪಂಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ದಂಪತಿಗೆ ಇಬ್ಬರು ಪುತ್ರರು ಇದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT