ಚಿಕ್ಕಮಗಳೂರು: ಕಲ್ಯಾಣ ನಗರದ ಬಸವತತ್ವ ಪೀಠದ ಆವರಣದಲ್ಲಿ ಫೆ. 24ರಿಂದ 26ರ ತನಕ ಮೈಸೂರು ವಿಭಾಗೀಯ ಮಟ್ಟದ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ನಾಟಕ ಅಕಾಡೆಮಿ ಸದಸ್ಯೆ ಮಮತಾ ಅರಸೀಕೆರೆ ತಿಳಿಸಿದರು.

ಕರ್ನಾಟಕ ನಾಟಕ ಅಕಾಡೆಮಿ, ಬಸವತತ್ವ ಪೀಠದ ಸಹಯೋಗದಲ್ಲಿ ಮೂರು ದಿನಗಳ ಕಾಲ ನಾಟಕೋತ್ಸವ ನಡೆಯಲಿದೆ. ಪ್ರತಿದಿನ ಸಂಜೆ 6.30ರಿಂದ ನಾಟಕ ಪ್ರದರ್ಶನ ಆರಂಭವಾಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಶನಿವಾರ ಹೇಳಿದರು.

ಫೆ. 24ರಂದು ಉದ್ಘಾಟನಾ ಸಮಾರಂಭ ನಡೆಯಲಿದ್ದು, ಬಸವತತ್ವ ಪೀಠದ ಬಸವಮರುಳಸಿದ್ದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಹುಲ್ಲಹಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿ.ರಮೇಶ್, ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ ನಾಗರಾಜ್ ರಾವ್, ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಎಂ. ಲೋಕೇಶಪ್ಪ ಭಾಗವಹಿಸುವರು ಎಂದರು.

ಫೆ. 25ರಂದು ಸಂಜೆ 6.30ಕ್ಕೆ ಸಾಹಿತಿ ಎಚ್.ಎಸ್.ವೆಂಕಟೇಶಮೂರ್ತಿ ರಚನೆಯ ಸುನಿಲ್ಕುಮಾರ್ ಸಿಂಗ್ ನಿರ್ದೇಶನದ ‘ಕಂಸಾಯಣ’ ನಾಟಕ ಪ್ರದರ್ಶನಗೊಳ್ಳಲಿದೆ. ತಾರಾ ಅರೇನಾ ಥಿಯೇಟರ್ ಕ್ಲಬ್ ಕಲಾವಿದರು ಅಭಿನಯಿಸುವರು. ಕಾರ್ಯಕ್ರಮದಲ್ಲಿ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜ್, ಅಕಾಡೆಮಿ ಸದಸ್ಯ ಜಾಹಿದಾ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸೂರಿ ಶ್ರೀನಿವಾಸ್, ಉಪನ್ಯಾಸಕ ಎಚ್.ಎಸ್. ಸತ್ಯನಾರಾಯಣ, ಕನ್ನಡ ಸಾಹಿತ್ಯ ಪರಿಷತ್ ಯುವ ಘಟಕದ ತಾಲ್ಲೂಕು ಅಧ್ಯಕ್ಷ ರೋಹನ್ ಭಾರ್ಗವಪುರಿ ಭಾಗವಹಿಸುವರು ಎಂದು ಹೇಳಿದರು.

ಫೆ. 26ರಂದು ಸಂಜೆ 6.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಮಾಜಿ ಶಾಸಕ ವೈಎಸ್ವಿ ದತ್ತ, ನಾಟಕ ಅಕಾಡೆಮಿ ಸದಸ್ಯರಾದ ರವೀಂದ್ರನಾಥ ಸಿರಿವರ, ಉಗಮ ಶ್ರೀನಿವಾಸ್, ಬಿಸಲೇಹಳ್ಳಿ ಬಿ.ಎಚ್. ಸೋಮಶೇಖರ್, ಮಾಜಿ ಸದಸ್ಯ ಎಂ.ಜೆ. ದೀಪಕ್ ಪಾಲ್ಗೊಳ್ಳುವರು ಎಂದರು.

ಸರಜೂ ಕಾಟ್ಕರ್ ರಚನೆಯ ಸಾಳಿಯಾನ ಉಮೇಶ್ ನಾರಾಯಣ ನಿರ್ದೇಶನದ ‘ಅಂಬೆ’ ನಾಟಕ ಪ್ರದರ್ಶನಗೊಳ್ಳಲಿದೆ. ಮುದ್ರಾಡಿ ನಾಟಕ್ದೂರು ನಮ್ಮ ತುಳುವೇರ್ ಕಲಾಸಂಘದ ಕಲಾವಿದರು ಅಭಿನಯಿಸುವರು ಎಂದು ಹೇಳಿದರು.

ಅನನ್ಯ, ಗಾಯಕ ಮಲ್ಲಿಗೆ ಸುಧೀರ್ ಸುದ್ದಿಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.