ನರಸಿಂಹರಾಜಪುರ: ಸರ್ಕಾರಿ ನೌಕರರ ವಸತಿಗಾಗಿ ಲಕ್ಷಾಂತ ರೂಪಾಯಿ ವೆಚ್ಚ ಮಾಡಿ ಸರ್ಕಾರ ನಿರ್ಮಿಸಿರುವ ಬಹುತೇಕ ವಸತಿ ಗೃಹಗಳು ವಾಸಿಸಲು ಯೋಗ್ಯವಾಗಿಲ್ಲದೆ ಶಿಥಿಲಾವಸ್ಥೆಗೆ ತಲುಪಿವೆ. ಆವರಣದಲ್ಲಿ ಗಿಡಗಂಟಿ ಬೆಳೆದು ಪಾಳು ಕೊಂಪೆಯಾಗಿವೆ.

ಲೋಕೋಪಯೋಗಿ ಇಲಾಖೆ ವಸತಿ ಗೃಹಗಳು, ತಾಲ್ಲೂಕು ಪಂಚಾಯಿತಿ, ಪಂಚಾಯತ್ ರಾಜ್ ಇಲಾಖೆ, ಅರಣ್ಯ ಇಲಾಖೆಗೆ ಸೇರಿದ ವಸತಿ ಗೃಹಗಳು ಇವೆ. ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೊನಿ, ಡಿಪೊ ರಸ್ತೆ, ತಾಲ್ಲೂಕು ಪಂಚಾಯಿತಿ ಸಮೀಪ, ಬಸ್ ನಿಲ್ದಾಣದ ಸಮೀಪ, ಮುತ್ತಿನಕೊಪ್ಪ, ಮೇಗರಮಕ್ಕಿಯಲ್ಲಿ ಸರ್ಕಾರಿ ವಸತಿ ಗೃಹಗಳಿವೆ.

ಹಲವು ವರ್ಷಗಳ ಹಿಂದೆ ವರ್ಗಾ ವಣೆಯಾಗಿ ಬಂದ ಸರ್ಕಾರಿ ನೌಕರರಿಗೆ ಖಾಸಗಿ ಬಾಡಿಗೆ ಮನೆಗಳು ಲಭ್ಯವಾಗುತ್ತಿರಲಿಲ್ಲ. ಆಗ ಅನಿವಾರ್ಯವಾಗಿ ಸರ್ಕಾರಿ ವಸತಿ ಗೃಹಗಳನ್ನು ಅವರು ಆಶ್ರಯಿಸಿದ್ದರು. ಸದ್ಯ ಬಸ್ ಸೌಕರ್ಯ ಇರುವುದರಿಂದ ಹಾಗೂ ಮನೆಗಳು ಬಾಡಿಗೆಗೆ ಲಭ್ಯವಾಗುವುದರಿಂದ ಸರ್ಕಾರಿ ವಸತಿ ಗೃಹದಲ್ಲಿ ವಾಸ ಇರುವವರ ಸಂಖ್ಯೆ ಕಡಿಮೆಯಾಗಿದೆ. ಸರ್ಕಾರಿ ವಸತಿ ಗೃಹಗಳ ಚಾವಣಿ ಹೆಂಚಿನದ್ದಾಗಿದ್ದು, ಅವುಗಳಲ್ಲಿ ವಾಸ ಮಾಡಲು ಇಚ್ಛಿಸುವುದಿಲ್ಲ.

ಸರ್ಕಾರಿ ನೌಕರರು ಕೆಲಸ ಮಾಡುವ ಕೇಂದ್ರ ಸ್ಥಳದಲ್ಲಿಯೇ ವಾಸವಾಗಿರಬೇಕೆಂಬ ನಿಯಮ ಇದ್ದರೂ ಕೇಂದ್ರ ಸ್ಥಾನದಿಂದ ಸುಮಾರು 60 ಕಿ.ಮೀ ದೂರವಿರುವ ನಗರ ಪ್ರದೇಶಗಳಲ್ಲಿ ಮನೆ ಮಾಡಿಕೊಂಡು ಓಡಾಡುತ್ತಿದ್ದಾರೆ. ಸರ್ಕಾರಿ ನೌಕರರ ಸಂಖ್ಯೆಯೂ ಹೆಚ್ಚಿದೆ. ಈ ಕಾರಣದಿಂದ ವಸತಿ ಗೃಹದ ಮೇಲಿನ ಅವಲಂಬನೆ ಕಡಿಮೆಯಾಗಿ ವಸತಿ ಗೃಹಗಳು ಶಿಥಿಲಾವಸ್ಥೆಗೆ ತಲುಪಿವೆ.

ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಗೆ ಸೇರಿದ 4 ವಸತಿಗೃಹಗಳಿದ್ದು, ಅದರಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ವಾಸವಾಗಿದ್ದಾರೆ. ಲೋಕೋಪಯೋಗಿ ಇಲಾಖೆಗೆ ಸೇರಿದ ವಸತಿ ಗೃಹಗಳು ಲಭ್ಯವಿದ್ದರೂ ಯಾರೂ ವಾಸವಿಲ್ಲದೆ ಶಿಥಿಲಾವಸ್ಥೆಗೆ ತಲುಪಿವೆ. ಮುತ್ತಿನಕೊಪ್ಪ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮಲೆಕ್ಕಾಧಿಕಾರಿಗೆ ವಸತಿ ಗೃಹ ಮತ್ತು ಕಚೇರಿಗೆ ಕಟ್ಟಡ ನಿರ್ಮಿಸಿಕೊಡಲಾಗಿತ್ತು. ಅದನ್ನು ಬಳಸದೆ ಇರುವುದರಿಂದ ಕಟ್ಟಡದ ಮುಂದೆ ಗ್ರಾಮಲೆಕ್ಕಾಧಿಕಾರಿಗಳ ಕಚೇರಿ ಎಂದು ನಾಮಫಲಕವಿದೆ. ಕಟ್ಟಡದ ಮುಂದೆ ಗಿಡ ಗಂಟಿಗಳು ಬೆಳೆದಿವೆ. ಕಟ್ಟಡದ ಕಿಟಕಿ ಬಾಗಿಲು, ಮುಖ್ಯಬಾಗಿಲು ಶಿಥಿಲಾವಸ್ಥೆಗೆ ತಲುಪಿದೆ.

‘ತಾಲ್ಲೂಕಿನ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆಗೆ ಸೇರಿದ ಯಾವುದೇ ವಸತಿ ಗೃಹವಿಲ್ಲ. ಗ್ರಾಮ ಲೆಕ್ಕಾಧಿಕಾರಿಗಳು ಗ್ರಾಮ ಪಂಚಾಯಿತಿ ಕಟ್ಟಡದ ವ್ಯಾಪ್ತಿಯಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೇ ಅವರಿಗೆ ಕಚೇರಿ ನಿರ್ಮಿಸಿಕೊಡಬೇಕೆಂದು ಸರ್ಕಾರ ಆದೇಶ ಹೊರಡಿಸಿದೆ’ ಎಂದು ತಹಶೀಲ್ದಾರ್ ತನುಜಾ ಟಿ.ಸವದತ್ತಿ ತಿಳಿಸಿದರು.

ತೆರವುಗೊಳಿಸಲು ಮೇಲಧಿಕಾರಿಗೆ ಪತ್ರ

ತಾಲ್ಲೂಕಿನ ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ 15 ವಸತಿ ಗೃಹಗಳಿದ್ದು, ಅದರಲ್ಲಿ 8 ವಸತಿ ಗೃಹಗಳಲ್ಲಿ ನೌಕರರು ವಾಸವಾಗಿದ್ದಾರೆ. ಉಳಿದ 7 ಖಾಲಿ ಇದೆ.

ಮುತ್ತಿನಕೊಪ್ಪ ಗ್ರಾಮದಲ್ಲಿರುವ ಇಲಾಖೆಯ ವಸತಿ ಗೃಹಗಳು ಶಿಥಿಲಾವಸ್ಥೆಗೆ ತಲುಪಿದ್ದು, ಅದನ್ನು ತೆರವುಗೊಳಿಸಲು ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಇದನ್ನು ಸೂಪರಿಂಡೆಂಟ್ ಎಂಜಿನಿಯರ್(ಎಸ್.ಇ) ಪರಿಶೀಲನೆ ನಡೆಸಿ ವರದಿ ನೀಡಿದ ನಂತರ ನೆಲಸಮಗೊಳಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆಯ ಕೊಪ್ಪ ವಿಭಾಗದ ಎಂಜಿನಿಯರ್ ದಿನೇಶ್ ನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.