ಶುಕ್ರವಾರ, ಫೆಬ್ರವರಿ 26, 2021
31 °C

ಕರಗಡ ಕಾಮಗಾರಿ ಕಾಲುವೆ ಹೂಳು ತೆಗೆಯಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನೆಟ್ಟೇಕೆರೆಹಳ್ಳಿ ಜಯಣ್ಣ ಅವರು ದೇವಿಕೆರೆ ಪರಿಶೀಲಿಸಿದರು. ಸದಸ್ಯ ಈ.ಆರ್.ಮಹೇಶ್, ಜಿಲ್ಲಾಪಂಚಾಯಿತಿ ಸದಸ್ಯರಾದ ಬಿ.ಜಿ.ಸೋಮಶೇಖರಪ್ಪ, ಬೆಳವಾಡಿ ರವೀಂದ್ರ ಇದ್ದಾರೆ.

ಚಿಕ್ಕಮಗಳೂರು: ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನೆಟ್ಟೇಕೆರೆಹಳ್ಳಿ ಜಯಣ್ಣ ಅವರು ತಾಲ್ಲೂಕಿನ ಕರಗಡದ ಕಾಮಗಾರಿಯ ಕಾಲುವೆಯನ್ನು ಶುಕ್ರವಾರ ಪರಿಶೀಲನೆ ನಡೆಸಿದರು.

ನೆಟ್ಟೇಕೆರೆಹಳ್ಳಿ ಜಯಣ್ಣ ‘ಪ್ರಜಾವಾಣಿ’ ಜೊತೆ ಮಾತನಾಡಿ, ‘ದೇವಿಕೆರೆ ಕೋಡಿ ಬೀಳಲು ಒಂದು ಅಡಿ ಬಾಕಿ ಇದೆ. ಕರಗಡ ಕಾಮಗಾರಿ ಕಾಲುವೆಯಲ್ಲಿ ಎರಡು–ಮೂರು ಕಡೆ ಹೂಳು ಬಿದ್ದಿದೆ. ಅದನ್ನು ತೆರವುಗೊಳಿಸಲು ಕ್ರಮವಹಿಸುವಂತೆ ಸಣ್ಣನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ತಿಳಿಸಿದರು.

ತಾಲ್ಲೂಕಿನ ಮಾಳೇನಹಳ್ಳಿ, ಕೊಪ್ಪಲು ಸಮೀಪ ಮಳೆಯಿಂದಾಗಿ ಜಮೀನಿನ ಮಣ್ಣು ಕರಗಡ ಕಾಮಗಾರಿ ಕಾಲುವೆಗೆ ಬಿದ್ದಿದೆ. ದೇವಿ ಕೆರೆ ತುಂಬುವಷ್ಟರಲ್ಲಿ ಕಾಲುವೆಯಲ್ಲಿನ ಹೂಳು, ಕುಸಿದ ಮಣ್ಣು ತೆಗೆಯಲು ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಪ್ರತಿಭಟನೆ ಹಾದಿ ಹಿಡಿಯುತ್ತೇವೆ ಎಂದು ಸದಸ್ಯ ಈಶ್ವರಹಳ್ಳಿ ಮಹೇಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು