ಬುಧವಾರ, ಅಕ್ಟೋಬರ್ 21, 2020
21 °C
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗೆ ರೈತರಿಂದ ಮನವಿ

ಒತ್ತುವರಿ ತೆರವಿಗೆ ನೋಟಿಸ್‌: ಸ್ಥಳೀಯರಿಂದ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಳಸ: ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ರೈತರಿಗೆ ಭೂತೆರವು ನೋಟಿಸ್ ನೀಡಿರುವುದನ್ನು ವಿರೋಧಿಸಿ ವಲಯ ಅರಣ್ಯಾಧಿಕಾರಿ ಕಚೇರಿ ಬಳಿ ಸ್ಥಳೀಯರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.

ನೆಲ್ಲಿಬೀಡು ಸಂರಕ್ಷಣಾ ವೇದಿಕೆ ಕಾರ್ಯದರ್ಶಿ ಸುರೇಶ್ ಭಟ್ ಮಾತ ನಾಡಿ, ‘ಸಂಸೆ ಗ್ರಾಮದ ಸರ್ವೆ ನಂಬರ್ 138 ಮತ್ತು 120ರಲ್ಲಿ ಹೆಚ್ಚುವರಿ ಭೂಮಿ ಇದೆ. ಅದನ್ನು ಅರಣ್ಯ ಇಲಾಖೆ ಸರ್ವೆ ಮಾಡಿ ಉಳಿಕೆ ಜಾಗ ಸ್ಥಳೀಯರಿಗೆ ಬಿಡಬೇಕು. ಸರ್ವೆ ನಂಬರ್ 183ರಲ್ಲಿ ಕಂದಾಯ ಭೂಮಿ, ಅಕೇಶಿಯಾ ನೆಡು ತೋಪು ಇದೆ. ಆ ಭೂಮಿಯಲ್ಲಿ ಅರ್ಹ ರೈತರಿಗೆ ಫಾರಂ ನಂಬರ್ 50, 53 ಮತ್ತು 57ರ ಅನ್ವಯ ಸಾಗುವಳಿ ಚೀಟಿ ನೀಡಬೇಕು’ ಎಂದು ಆಗ್ರಹಿಸಿದರು.

ಸಂಸೆ ಪಂಚಾಯಿತಿ ಮಾಜಿ ಅಧ್ಯಕ್ಷ ನೆಲ್ಲಿಬೀಡು ಜಗದೀಶ್ ಮಾತನಾಡಿ, ‘ಕುದುರೆಮುಖ ಕಬ್ಬಿಣ ಅದಿರು ಯೋಜ
ನೆಗೆ 40 ವರ್ಷದ ಹಿಂದೆ ಸ್ಥಳಾಂತರ ಆಗಿದ್ದ ಕುಟುಂಬಗಳಿಗೆ ಈಗ ಮತ್ತೆ ತೆರವು ನೋಟಿಸ್ ನೀಡುತ್ತಿರುವುದು ಅಕ್ಷಮ್ಯ. ಅರಣ್ಯ ಇಲಾಖೆ ಮಾನವೀಯವಾಗಿ ಕೆಲಸ ನಿರ್ವಹಿಸಬೇಕು. ಇಲ್ಲದಿದ್ದರೆ ಬಲವಾದ ಪ್ರತಿಭಟನೆ ನಡೆಸಲಾಗುತ್ತದೆ’ ಎಂದು ಎಚ್ಚರಿಸಿದರು.

ಸ್ಥಳಕ್ಕೆ ಬಂದ ಕುದುರೆಮುಖ ವನ್ಯ ಜೀವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗೆ ಈ ಸಂದರ್ಭ ದಲ್ಲಿ ಮನವಿ ಸಲ್ಲಿಸಲಾಯಿತು. ‘ಕುದುರೆ ಮುಖದಲ್ಲಿ ಇರುವ ಕಟ್ಟಡಗಳನ್ನು ಬಳಸಿಕೊಂಡು ಶೈಕ್ಷಣಿಕ, ಆರೋಗ್ಯ ಅಥವಾ ಅರಣ್ಯ ಸಂಶೋಧನಾ ಕೇಂದ್ರ ಸ್ಥಾಪಿಸಬೇಕು. ವಿದೇಶಿ ಹಣ ಪಡೆವ ನಕಲಿ ಪರಿಸರವಾದಿಗಳ ಬಗ್ಗೆ ಎಚ್ಚರ ವಹಿಸಬೇಕು. ಅರಣ್ಯ ಕಾಯ್ದೆ ನೆಪದಲ್ಲಿ ಅರಣ್ಯವಾಸಿಗಳಿಗೆ ಕಿರುಕುಳ ನೀಡಬಾರದು. ಭೂ ತೆರವು ನೋಟಿಸ್ ರದ್ದು ಮಾಡಬೇಕು’ ಎಂಬುದು ಪ್ರಮುಖ ಬೇಡಿಕೆಗಳಾಗಿದ್ದವು.

‘10 ಎಕರೆವರೆಗೆ ಒತ್ತುವರಿ ಮಾಡಿ ರುವ ರೈತರ ಭೂಮಿ ತೆರವು ಮಾಡ ಬಾರದು. ಪ್ರವಾಸೋದ್ಯಮವನ್ನು ಎಚ್ಚರಿಕೆಯಿಂದ ನಡೆಸಬೇಕು. 1980ಕ್ಕಿಂತ ಹಿಂದೆ ಅರಣ್ಯ ಭೂಮಿ ಕೃಷಿ ಮಾಡಿದವರಿಗೆ ಮತ್ತು ಪಟ್ಟಾ ಭೂಮಿ ಹೊಂದಿವರಿಗೆ ಕಿರುಕುಳ ನೀಡಬಾರದು. 2005ಕ್ಕಿಂತ ಮುಂಚೆ ಅರಣ್ಯ ಭೂಮಿ ಕೃಷಿ ಮಾಡಿರುವ ಎಲ್ಲರಿಗೂ ಅರಣ್ಯ ಹಕ್ಕು ಕಾಯ್ದೆಯಲ್ಲಿ ಹಕ್ಕು ಪತ್ರ ನೀಡಬೇಕು. ಜಾಂಬಳೆಯಲ್ಲಿ ನಿರ್ಮಿಸಲಾಗಿರುವ ಜಿಯೋ ಮೊಬೈಲ್ ಟವರ್‌ಗೆ ಭೂಗತ ಕೇಬಲ್ ಅಳವಡಿಸಲು ಅನುಮತಿ ನೀಡಬೇಕು’ ಎಂಬ ಬೇಡಿಕೆ ಮನವಿಯಲ್ಲಿವೆ.

ಸ್ಥಳೀಯರಾದ ಜಯಂತ್‍ ಗೌಡ, ಸುರೇಶ್, ಮನೋಜ್, ನಾಗೇಶ್‍ ಗೌಡ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು