ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು | ಕಾಫಿನಾಡಲ್ಲಿ ಇಲ್ಲ ಉದ್ಯಾನ: ಇದ್ದರೂ ಅದ್ವಾನ

Published 6 ನವೆಂಬರ್ 2023, 7:55 IST
Last Updated 6 ನವೆಂಬರ್ 2023, 7:55 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನಿಸರ್ಗದ ಮಡಿಲು ಎಂದು ಕರೆಸಿಕೊಳ್ಳುವ ಕಾಫಿನಾಡಿನಲ್ಲಿರುವ ನಗರ ಮತ್ತು ಪಟ್ಟಣಗಳಲ್ಲಿ ಉದ್ಯಾನಗಳಿಗೆ ಬರವಿದೆ. ಇರುವ ಉದ್ಯಾನಗಳು ಅಭಿವೃದ್ಧಿ ಇಲ್ಲದೆ ಸೊರಗಿವೆ.

ಚಿಕ್ಕಮಗಳೂರು ನಗರದಲ್ಲಿ ತೋಟಗಾರಿಕೆ ಇಲಾಖೆ ಅಭಿವೃದ್ಧಿಪಡಿಸಿ ನಿರ್ವಹಣೆ ಮಾಡುತ್ತಿರುವ ಮಹತ್ಮಾಗಾಂಧಿ ಉದ್ಯಾನವನದಲ್ಲಿ ಜನರಿಗೆ ಅಗತ್ಯ ಇರುವ ಎಲ್ಲಾ ಸೌಲಭ್ಯಗಳಿವೆ. ಮಕ್ಕಳ ಆಟಿಕೆ ಸಲಕರಣೆ, ನಡಿಗೆ ಪಥ, ಕಾರಂಜಿ, ಪುಟಾಣಿ ರೈಲು ಸೇರಿ ಎಲ್ಲವೂ ಇವೆ.

ನಗರದ ಹೊರ ವಲಯದ ಕಡೂರು ರಸ್ತೆಯಲ್ಲಿ ಅರಣ್ಯ ಇಲಾಖೆ ನಿರ್ವಹಿಸುತ್ತಿರುವ ಪವಿತ್ರವನ ಪರಿಪೂರ್ಣವಾಗಿ ಅಭಿವೃದ್ಧಿಗೊಂಡಿಲ್ಲ. ನಗರಸಭೆ ನಿರ್ವಹಣೆ ಮಾಡುತ್ತಿರುವ ಒಂದು ಉದ್ಯಾನ ಕೂಡ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಕಂಡಿಲ್ಲ.

ಗರಸಭೆಯ ದಾಖಲೆಗಳ ಪ್ರಕಾರ ನಗರದಲ್ಲಿ 145 ಉದ್ಯಾನಗಳಿವೆ. ಆದರೆ, ಜನ ವಾಯು ವಿಹಾರಕ್ಕೆ ಬಳಸಬಹುದಾ ಒಂದು ಉದ್ಯಾನವೂ ಇಲ್ಲ. ನಗರಸಭೆ ಆವರಣದಲ್ಲೇ ಇರುವ ಉದ್ಯಾನ ₹3 ಕೋಟಿ ವೆಚ್ಚದಲ್ಲಿ ನವೀಕರಣಗೊಳ್ಳುತ್ತಿದೆ. ಸಂಗೀತ ಕಾರಂಜಿ ಸೇರಿ ಎಲ್ಲವನ್ನೂ ಒಳಗೊಂಡಿದೆ ಎಂದು ನಗರಸಭೆ ಅಧಿಕಾರಿಗಳು ಹೇಳುತ್ತಾರೆ.

ಗೌರಿಕಾಲುವೆ ಬಳಿ ಇರುವ ಗೌರಿ ಪಾರ್ಕ್‌ಗೆ ಜಾಗ ಮೀಸಲಿಡಲಾಗಿದೆ. ಆದರೆ, ಅದು ಅಭಿವೃದ್ಧಿಯನ್ನೇ ಕಂಡಿಲ್ಲ. ಗಿಡಗಂಟಿಗಳು ಬೆಳೆದು ನಿಂತಿದ್ದು, ರಾತ್ರಿ ವೇಳೆ ಅಕ್ರಮ ಚಟುವಟಿಕೆಯ ತಾಣವಾಗಿ ಮಾರ್ಪಟ್ಟಿದೆ. ಗಣಪತಿ, ದುರ್ಗಿ ಪ್ರತಿಷ್ಠಾಪನೆ ವೇಳೆ ಸ್ಥಳೀಯರೇ ಸ್ವಚ್ಛಗೊಳಿಸುತ್ತಾರೆ. ನಗರಸಭೆ ಮಾತ್ರ ಈ ಉದ್ಯಾನವನ್ನು ಸ್ವಚ್ಛಗೊಳಿಸುವ ಗೋಜಿಗೆ ಹೋಗುವುದಿಲ್ಲ ಎಂದು ಗೌರಿಕಾಲುವೆ ಬಡಾವಣೆ ನಿವಾಸಿ ರಾಜೇಶ್ ಹೇಳುತ್ತಾರೆ. ನಗರದಲ್ಲಿರುವ ಹಲವು ಉದ್ಯಾನಗಳು ಸ್ಥಿತಿ ಇದೇ ರೀತಿಯಲ್ಲಿವೆ. ಅಭಿವೃದ್ಧಿ ಆಗುವುದು ಯಾವಾಗ ಎಂಬುದು ಸ್ಥಳೀಯರ ಪ್ರಶ್ನೆ.

‘ನಗರದಲ್ಲಿ 145 ಉದ್ಯಾನಗಳಿದ್ದು, ಅಭಿವೃದ್ಧಿಗೆ ಅನುದಾನದ ಕೊರತೆ ಇದೆ. ಮೊದಲ ಹಂತದಲ್ಲಿ ನಗರಸಭೆ ಆವರಣದಲ್ಲಿನ ಉದ್ಯಾನ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಇದೇ ಮಾದರಿಯಲ್ಲಿ ಹಂತ–ಹಂತವಾಗಿ ಉಳಿದ ಉದ್ಯಾನಗಳು ಅಭಿವೃದ್ಧಿ ಆಗಲಿವೆ’ ಎಂದು ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್ ಹೇಳಿದರು.

ಇಲ್ಲ ಉದ್ಯಾನವನ; ಬಾಲವನದಲ್ಲೂ ನಿರ್ವಹಣೆಯಿಲ್ಲ

ಮೂಡಿಗೆರೆ: ತಾಲ್ಲೂಕಿನಲ್ಲಿ ಸಮರ್ಪಕವಾದ ಉದ್ಯಾನವಿಲ್ಲದೆ ಸಾರ್ವಜನಿಕರು ಪರಿತಪಿಸುವಂತಾಗಿದೆ. ಲ್ಯಾಂಪ್ಸ್ ಸಹಕಾರ ಸಂಘದ ಕಚೇರಿ ಬಳಿ ಬಾಲವನವಿದ್ದು ವಯಸ್ಕರು ಕೂಡ ಸಂಜೆ ವೇಳೆಯಲ್ಲಿ ಇದೇ ಬಾಲಭವನದಲ್ಲಿ ಸಮಯ ಕಳೆಯುವಂತಾಗಿದೆ. ಕಾಲೇಜು ರಸ್ತೆಯಲ್ಲಿ ಹೊಯ್ಸಳ ಕ್ರೀಡಾಂಗಣದ ‌ಮುಂಭಾಗ ಖಾಲಿಯಿದ್ದ ಜಾಗವನ್ನು ಪಾರ್ಕ್ ನಿರ್ಮಾಣ ಮಾಡಲಾಗಿದ್ದರೂ ಸಮರ್ಪಕವಾಗಿ ನಿರ್ವಹಣೆಯಿಲ್ಲದೆ ಸೊರಗುತ್ತಿದೆ. ಬಾಲವನವು ಗಿಡಗಂಟಿಗಳಿಂದ ಕೂಡಿದ್ದು ಸೀಟ್ ಹೌಸ್ ಕಟ್ಟಡ ಶೀತಿಲವಾಗಿದ್ದು ಹೆಂಚುಗಳು ಬೀಳುವ ಸ್ಥಿತಿಗೆ ತಲುಪಿವೆ. ನಿರ್ವಹಣೆಯಿಲ್ಲದೆ ರಾತ್ರಿ ವೇಳೆ ಅನೈತಿಕ ಚಟುವಟಿಕೆಯ ತಾಣವಾಗಿ‌ದ್ದು ಮದ್ಯದ ಬಾಟಲಿಗಳು ಎಲ್ಲೆಂದರಲ್ಲಿ ಬಿದ್ದಿವೆ. ತಾಲ್ಲೂಕಿನಲ್ಲಿ ಹಲವಾರು ವಸತಿ ಬಡಾವಣೆಗಳು ನಿರ್ಮಾಣವಾಗಿದ್ದು ಅವುಗಳಲ್ಲಿರುವ ಸಿಡಿಎ ನಿವೇಶನಗಳು ಕಾಡು ಬೆಳೆದಿವೆ. ಅವುಗಳನ್ನು ಬಳಸಿಕೊಂಡು ಸುಸಜ್ಜಿತ ಉದ್ಯಾನವನ ನಿರ್ಮಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ. ‘ಪಟ್ಟಣದಲ್ಲಿ ಉದ್ಯಾನವನವಿಲ್ಲದೇ ವಾಯು ವಿಹಾರಕ್ಕೆ ತೆರಳುವವರು ರಸ್ತೆ ಬದಿ ತಿರುಗಾಡುವಂತಾಗಿದ್ದರೆ ಅಂಗಡಿ ಬಾಗಿಲಲ್ಲಿ ಕುಳಿತು ಸಮಯ ಕಳೆಯುವಂತಾಗಿದೆ. ಪಟ್ಟಣ ಪಂಚಾಯಿತಿ ಹಾಗೂ ಚುನಾಯಿತ ಪ್ರತಿನಿಧಿಗಳು ಆಸಕ್ತಿ ವಹಿಸಿ ಸುಸಜ್ಜಿತ ಉದ್ಯಾನವನ ನಿರ್ಮಿಸಬೇಕು’ ಎಂಬುದು ಮೂಡಿಗೆರೆ ಅನಿಲ್ ಆಗ್ರಹ.

ಉದ್ಯಾನವಲ್ಲಿ ಅದಕ್ಕೆ ಜಾಗವೂ ಇಲ್ಲ

ಶೃಂಗೇರಿ: ತಾಲ್ಲೂಕಿನಲ್ಲಿ ವಿಶ್ರಾಂತಿಗಾಗಿ ಉದ್ಯಾನವನ ಇಲ್ಲದೆ ಜನರು ಪರದಾಡುವ ಪರಿಸ್ಥಿತಿ ಇದೆ.ಶೃಂಗೇರಿಯಲ್ಲಿ ಇದುವರೆಗೂ ಉದ್ಯಾನವನ ಗುರುತಿಸಿಲ್ಲ ಪಟ್ಟಣ ಮತ್ತು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಉದ್ಯಾನವನ ಗುರುತಿಸಲು ಜಾಗವೇ ಇಲ್ಲ. ಗಾಂಧಿ ಮೈದಾನದಲ್ಲಿ ಖಾಸಗಿ ಉದ್ಯಾನವನ ಇದೆ. ಆದರೆ ಅದು ಸರಿಯಾದ ನಿರ್ವಹಣೆ ಇಲ್ಲದಾಗಿದೆ. ಪಕ್ಕದಲ್ಲಿ ಮದ್ಯದ ಅಂಗಡಿ ಇರುವುದರಿಂದ ಕುಡುಕರ ಹಾವಳಿ ಹೆಚ್ಚಾಗಿದೆ. ಪಟ್ಟಣ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಡಾವಣೆಗಳು ಹೆಚ್ಚಿದೆ. ಅವು ಅಭಿವೃದ್ದಿಯಾದರೆ ಉದ್ಯಾನವನ ಹೆಚ್ಚಾಗುತ್ತವೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಪಾದ್ ಹೇಳಿದರು. ತಾಲ್ಲೂಕಿನಲ್ಲಿ ಮತ್ತು ಪಂಚಾಯಿತಿ ವ್ಯಾಪ್ತಿಯಲ್ಲಿ ಬಡಾವಣೆಗಳು ಅಭಿವೃದ್ಧಿಯಾದರೆ ಉದ್ಯಾನವನ ಆಗುವುದಾದರೆ ಅದು ಬಡಾವಣೆಗಳ ನಿವಾಸಿಗಳಿಗೆ ಮಾತ್ರ ಸೀಮಿತ. ಸಾರ್ವಜನಿಕರಿಗೆ ಉದ್ಯಾನವನ ಇಲ್ಲವೇ ಇಲ್ಲ ಎಂದು ಕುರುಬಕೇರಿ ನಿವಾಸಿ ಕೃಷ್ಣಪ್ಪ ಆರೋಪಿಸಿದರು.

ಪ್ರವಾಸಿ ಮಂದಿರ ಆವರಣದಲ್ಲೆ ವಾಯು ವಿಹಾರ

ಕಡೂರು: ಪಟ್ಟಣದೊಳಗೆ ಉದ್ಯಾನವನಗಳು ಹೆಚ್ಚಿಲ್ಲವಾದರೂ ಪ್ರವಾಸಿ ಮಂದಿರದ ಆವರಣದೊಳಗೆ ವಾಯು ವಿಹಾರಕ್ಕೆ ಹಿರಿಯ ನಾಗರೀಕರು ಬರುತ್ತಾರೆ. ಇಲ್ಲಿನ ನಡಿಗೆ ಪಥ ಉತ್ತಮವಗಿದೆ. ಆದರೆ ನೈರ್ಮಲ್ಯದ ಕೊರತೆಯಿದೆ. ಇನ್ನು ಪಟ್ಟಣದಿಂದ ಸ್ವಲ್ಪ ದೂರದಲ್ಲಿ ವೇದಾ ನದಿ ಪಕ್ಕದಲ್ಲಿರುವ ವೇದಾ ಪಾರ್ಕ್ ಸುಸಜ್ಜಿತವಾಗಿದೆ. 500 ಮೀಟರ್ ಉದ್ಧದ ವಾಕಿಂಗ್ ಪಾಥ್ ಇದೆ. ಕಳಿತುಕೊಳ್ಳಲು ಬೆಂಚ್‌ಗಳಿವೆ. ಪಥದ ಎರಡೂ ಕಡೆ ಹಸಿರು ಹುಲ್ಲುಹಾಸು ಮತ್ತು ಅಲಂಕಾರಿಕ ಗಿಡಗಳಿವೆ. ಪಟ್ಟಣದಿಂದ ಸ್ವಲ್ಪ ಹೊರ ವಲಯ ಎಂಬುದನ್ನು ಬಿಟ್ಟರೆ ಉತ್ತಮ ಉದ್ಯಾನ. ಪುರಸಭೆಯಿಂದ ಇದರ ನಿರ್ಮಾಣವಾಗಿದ್ದು ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದು ಕೊರತೆಯಾಗಿದೆ. ಈ ಉದ್ಯಾನ ಬಿಟ್ಟರೆ ದಾಖಲೆಗಳಲ್ಲಷ್ಟೇ ಇರುವ  ಉದ್ಯಾನಗಳಿಂದ ಯಾವುದೇ ಉಪಯೋಗ ಸಾರ್ವಜನಿಕರಿಗೆ ಆಗುತ್ತಿಲ್ಲ

ಮಕ್ಕಳ ಆಟಕ್ಕೆ ಸೀಮಿತವಾದ ಉದ್ಯಾನ

ನರಸಿಂಹರಾಜಪುರ: ಪಟ್ಟಣದ ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ಉದ್ಯಾನವ ನಿರ್ಮಿಸಲಾಗಿದೆ. ಇದು ವಿಸ್ತಾರವಾಗಿಲ್ಲದ ಕಾರಣ ಮಕ್ಕಳ ಆಟಿಕೆಗಳನ್ನು ಅಳವಡಿಸಲಾಗಿದೆ. ನಾಗರೀಕರು ಕೊರುವ ವ್ಯವಸ್ಥೆ ಇದೆ. ಆದರೆ ವಾಯುವಿಹಾರ ಮಾಡಲು ಸಾಕಷ್ಟು ಜಾಗ ಇಲ್ಲ. ಪಟ್ಟಣದ ರಾಘವೇಂದ್ರ ಬಡಾವಣೆ ವ್ಯಾಪ್ತಿಯಲ್ಲಿ ಉದ್ಯಾನಕ್ಕೆ ಜಾಗ ಮೀಸಲಿರಿಸಿ ಸುತ್ತಲೂ ತಡೆಗೋಡೆ ನಿರ್ಮಿಸಲಾಗಿದೆ. ಆದರೆ ಅದು ಅಭಿವೃದ್ಧಿ ಕಂಡಿಲ್ಲ.

ಉದ್ಯಾನ ನಿರ್ವಹಣೆ ಕೊರತೆ

ತರೀಕೆರೆ: ಪಟ್ಟಣದ ಹೃದಯ ಭಾಗದಲ್ಲಿ ಮಹಾತ್ಮಾ ಗಾಂಧಿ ಉದ್ಯಾನ ನಿರ್ವಹಣೆಯಿಲ್ಲದೆ ಸೊರಗಿದೆ. ಮಕ್ಕಳಿಗೆ ಕ್ರೀಡಾ ಪರಿಕರಗಳಿವೆ. ಆದರೆ ಸೂಕ್ತ ನಿರ್ವಹಣೆಯಿಲ್ಲದೆ ಅನುಪಯುಕ್ತವಾಗಿವೆ. ಉದ್ಯಾನದಲ್ಲಿ ಸ್ವಚ್ಚತೆಯಿಲ್ಲದೆ ಎಲ್ಲಾ ಕಡೆ ಗುಟ್ಕಾ ಪ್ಯಾಕೆಟ್ ಹಾಗೂ ಸಾರ್ವಜನಿಕರು ಬಳಸಿದ ಪ್ಲಾಸ್ಟಿಕ್ ಕವರ್‌ಗಳು ತುಂಬಿ ತುಳುಕಿವೆ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಸಮೀಪದಲ್ಲಿ ಸಾರ್ವಜನಿಕ ಶೌಚಾಲಯವಿದೆ. ಆದರೆ  ನಿರ್ವಹಣೆಯಿಲ್ಲದಂತಾಗಿದೆ. ಉದ್ಯಾನದ ಕ್ರೀಡಾ ಪರಿಕರಗಳನ್ನು ಸರಿಪಡಿಸಬೇಕು ಹಾಗೂ ಮೂಲಸೌಕರ್ಯ ಜತಗೆ ಸ್ವಚ್ಚತೆ ಹೆಚ್ಚಿನ ಆದ್ಯತೆ ನೀಡಬೇಕು ಎನ್ನುತ್ತಾರೆ ನಿವಾಸಿ ದೀಪಾ.

ನಿರ್ವಹಣೆ ಇಲ್ಲದೆ ಸೊರಗಿದ ಉದ್ಯಾನ

ಕೊಪ್ಪ: ಪಟ್ಟಣದ ಮೇಲಿನಪೇಟೆ ವಾಟರ್ ಟ್ಯಾಂಕ್ ವೃತ್ತದ ಬಳಿ ಇರುವ ಎಂ.ಎಸ್.ದ್ಯಾವೇಗೌಡ ಮಕ್ಕಳ ಉದ್ಯಾನವನ ನಿರ್ವಹಣೆಯಿಲ್ಲದೇ ಸೊರಗಿದೆ. ಕುಳಿತುಕೊಳ್ಳುವ ಆಸನದ ಕಲ್ಲುಗಳಿಗೆ ಗಿಡಗಂಟಿಗಳು ಆವರಿಸಿವೆ. ಇಲ್ಲಿರುವ ಪರಿಕರಗಳು ಒಡೆದಿವೆ. ಓಡಾಡುವ ಹಾದಿಯನ್ನು ಪೊದೆ ಆವರಿಸಿದೆ. ನೀರಿಲ್ಲದ ಕಾರಂಜಿ ಕಳೆಗುಂದಿದೆ. ಅಲ್ಲಲ್ಲಿ ಬಿದ್ದ ಪ್ಲಾಸ್ಟಿಕ್ ವಸ್ತುಗಳು ಗುಂಡಿಯೊಳಗೆ ಬಿಯರ್ ಬಾಟಲಿ ಬಿದ್ದಿವೆ. ಉದ್ಯಾನವನಕ್ಕೆ ಹೊಂದಿಕೊಂಡಂತೆ ಸಾರ್ವಜನಿಕ ಶೌಚಾಲಯ ಇದ್ದರೂ ಅಸಮರ್ಪಕ ನಿರ್ವಹಣೆ ಕಾಣಿಸಿದೆ. ಶೌಚಾಲಯದ ಕಟ್ಟಡದ ಹಿಂಭಾಗದಲ್ಲಿ ಪ್ಲಾಸ್ಟಿಕ್ ವಸ್ತುಗಳು ರಟ್ಟಿನ ಬಾಕ್ಸ್‌ಗಳನ್ನು ಗುಡ್ಡೆ ಹಾಕಲಾಗಿದೆ. ಸಾರ್ವಜನಿಕರು ಉದ್ಯಾನದೊಳಗೆ ಹೋಗದೆ ತಿಂಗಳುಗಳೆ ಕಳೆದಿವೆ ಎಂಬುದು ಮೇಲ್ನೋಟಕ್ಕೆ ಗೋಚರಿಸುತ್ತದೆ.

ಎರಡು ಉದ್ಯಾನ ಉತ್ತಮ: ಉಳಿದವು ಕಳಪೆ

ಬೀರೂರು: ಪಟ್ಟಣದಲ್ಲಿ ಹೆಸರಿಗೆ ಹತ್ತಾರು ಪಾರ್ಕುಗಳಿದ್ದರೂ ವಿವೇಕಾನಂದ ಬಡಾವಣೆಯಲ್ಲಿ ಪುರಸಭೆಯ ಆಸ್ತಿಯಾಗಿ ಇರುವ ವಿವೇಕಾನಂದ ಪಾರ್ಕ್ ಸಾರ್ವಜನಿಕರ ಮತ್ತು ಇತರ ಸಂಸ್ಥೆಗಳ ಸಹಭಾಗಿತ್ವದಿಂದ ಅತ್ಯುತ್ತಮವಾಗಿದೆ. ಪಾರ್ಕಿನಲ್ಲಿ ವಾಯು ವಿಹಾರ ಮಾಡಲು ಅನುಕೂಲ ಆಗುವಂತೆ ಪಥ ನಿರ್ಮಿಸಲಾಗಿದೆ. ವ್ಯಾಯಾಮ ಮಾಡುವವರಿಗೆ ಅನುಕೂಲವಾಗುವಂತೆ ಕೆಲವು ಉಪಕರಣಗಳನ್ನು ಅಳವಡಿಸಲಾಗಿದೆ. ಮಕ್ಕಳ ಆಟದ ಸಲುವಾಗಿಯೂ ಕೆಲವು ಉಪಕರಣಗಳನ್ನು ಅಳವಡಿಸಲಾಗಿದೆ. ಅದನ್ನು ಬಿಟ್ಟರೆ ಪಟ್ಟಣದ ಕ್ಯಾಂಪ್ ಬಡಾವಣೆ ಸಮೀಪ ಇರುವ ಪುರಸಭೆ ಉದ್ಯಾನ ಚಿಕ್ಕದಾದರೂ ಕೂಡ ಸಾರ್ವಜನಿಕರ ಸಹಕಾರದಿಂದ ಹಸಿರಿನ ವಾತಾವರಣ ಹೊಂದಿ ಸುಸ್ಥಿತಿಯಲ್ಲಿದೆ. ಈ ಎರಡು ಉದ್ಯಾನಗಳನ್ನು ಬಿಟ್ಟರೆ ಮತ್ತೆ ಯಾವ ಬಡಾವಣೆಗಳಲ್ಲಿಯೂ ಸುಸಜ್ಜಿತವಾದ ಉದ್ಯಾನಗಳಿಲ್ಲ.  ಉದ್ಯಾನಗಳ ನಿರ್ವಹಣೆಗೆ ಪುರಸಭೆ ಹಣ ಬಿಡುಗಡೆ ಮಾಡುತ್ತದೆ. ಆದರೆ ಅದು ಕೇವಲ ಕಾಟಾಚಾರದ ಕೆಲಸವಾಗಿದೆ. ಅಂಬೇಡ್ಕರ್ ನಗರದ ಉದ್ಯಾನವನದಲ್ಲಿ ಕೆಲವರು ಗುಡಿಸಲು ನಿರ್ಮಿಸಿ ಅದನ್ನು ಖಾಸಗಿ ಸ್ವತ್ತಾಗಿ ಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆ. ಇನ್ನ ಎಲ್ಲಿಯೂ ಕೂಡ ಪಾರ್ಕಗಳ ನಿರ್ವಹಣೆ ವ್ಯವಸ್ಥಿತವಾಗಿಲ್ಲ.

ಪೂರಕ ಮಾಹಿತಿ: ಬಾಲು ಮಚ್ಚೇರಿ, ಕೆ.ಎನ್.ರಾಘವೇಂದ್ರ, ಕೆ.ವಿ.ನಾಗರಾಜ್, ಎಚ್.ಎಂ.ರಾಜಶೇಖರಯ್ಯ, ರವಿಕುಮಾರ್ ಶೆಟ್ಟಿಹಡ್ಲು, ಎನ್.ಸೋಮಶೇಖರ್

ತರೀಕೆರೆ ಗಾಂಧಿ ಉದ್ಯಾನದಲ್ಲಿ ಅನುಪಯುಕ್ತಗೂಂಡಿರುವ ಪರಿಕರ
ತರೀಕೆರೆ ಗಾಂಧಿ ಉದ್ಯಾನದಲ್ಲಿ ಅನುಪಯುಕ್ತಗೂಂಡಿರುವ ಪರಿಕರ
ಮೂಡಿಗೆರೆ ಬಾಲಭವನದಲ್ಲಿ ಗಿಡಗಂಟಿ ಬೆಳೆದಿರುವುದು
ಮೂಡಿಗೆರೆ ಬಾಲಭವನದಲ್ಲಿ ಗಿಡಗಂಟಿ ಬೆಳೆದಿರುವುದು
ಕೊಪ್ಪದಲ್ಲಿರುವ ಮಕ್ಕಳ ಉದ್ಯಾನ ನಿರ್ವಹಣೆಯಿಲ್ಲದೆ ಸೊರಗಿರುವುದು
ಕೊಪ್ಪದಲ್ಲಿರುವ ಮಕ್ಕಳ ಉದ್ಯಾನ ನಿರ್ವಹಣೆಯಿಲ್ಲದೆ ಸೊರಗಿರುವುದು

Cut-off box - ಇಲ್ಲ ಉದ್ಯಾನವನ; ಬಾಲವನದಲ್ಲೂ ನಿರ್ವಹಣೆಯಿಲ್ಲ ಮೂಡಿಗೆರೆ: ತಾಲ್ಲೂಕಿನಲ್ಲಿ ಸಮರ್ಪಕವಾದ ಉದ್ಯಾನವಿಲ್ಲದೆ ಸಾರ್ವಜನಿಕರು ಪರಿತಪಿಸುವಂತಾಗಿದೆ. ಲ್ಯಾಂಪ್ಸ್ ಸಹಕಾರ ಸಂಘದ ಕಚೇರಿ ಬಳಿ ಬಾಲವನವಿದ್ದು ವಯಸ್ಕರು ಕೂಡ ಸಂಜೆ ವೇಳೆಯಲ್ಲಿ ಇದೇ ಬಾಲಭವನದಲ್ಲಿ ಸಮಯ ಕಳೆಯುವಂತಾಗಿದೆ. ಕಾಲೇಜು ರಸ್ತೆಯಲ್ಲಿ ಹೊಯ್ಸಳ ಕ್ರೀಡಾಂಗಣದ ‌ಮುಂಭಾಗ ಖಾಲಿಯಿದ್ದ ಜಾಗವನ್ನು ಪಾರ್ಕ್ ನಿರ್ಮಾಣ ಮಾಡಲಾಗಿದ್ದರೂ ಸಮರ್ಪಕವಾಗಿ ನಿರ್ವಹಣೆಯಿಲ್ಲದೆ ಸೊರಗುತ್ತಿದೆ. ಬಾಲವನವು ಗಿಡಗಂಟಿಗಳಿಂದ ಕೂಡಿದ್ದು ಸೀಟ್ ಹೌಸ್ ಕಟ್ಟಡ ಶೀತಿಲವಾಗಿದ್ದು ಹೆಂಚುಗಳು ಬೀಳುವ ಸ್ಥಿತಿಗೆ ತಲುಪಿವೆ. ನಿರ್ವಹಣೆಯಿಲ್ಲದೆ ರಾತ್ರಿ ವೇಳೆ ಅನೈತಿಕ ಚಟುವಟಿಕೆಯ ತಾಣವಾಗಿ‌ದ್ದು ಮದ್ಯದ ಬಾಟಲಿಗಳು ಎಲ್ಲೆಂದರಲ್ಲಿ ಬಿದ್ದಿವೆ. ತಾಲ್ಲೂಕಿನಲ್ಲಿ ಹಲವಾರು ವಸತಿ ಬಡಾವಣೆಗಳು ನಿರ್ಮಾಣವಾಗಿದ್ದು ಅವುಗಳಲ್ಲಿರುವ ಸಿಡಿಎ ನಿವೇಶನಗಳು ಕಾಡು ಬೆಳೆದಿವೆ. ಅವುಗಳನ್ನು ಬಳಸಿಕೊಂಡು ಸುಸಜ್ಜಿತ ಉದ್ಯಾನವನ ನಿರ್ಮಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ. ‘ಪಟ್ಟಣದಲ್ಲಿ ಉದ್ಯಾನವನವಿಲ್ಲದೇ ವಾಯು ವಿಹಾರಕ್ಕೆ ತೆರಳುವವರು ರಸ್ತೆ ಬದಿ ತಿರುಗಾಡುವಂತಾಗಿದ್ದರೆ ಅಂಗಡಿ ಬಾಗಿಲಲ್ಲಿ ಕುಳಿತು ಸಮಯ ಕಳೆಯುವಂತಾಗಿದೆ. ಪಟ್ಟಣ ಪಂಚಾಯಿತಿ ಹಾಗೂ ಚುನಾಯಿತ ಪ್ರತಿನಿಧಿಗಳು ಆಸಕ್ತಿ ವಹಿಸಿ ಸುಸಜ್ಜಿತ ಉದ್ಯಾನವನ ನಿರ್ಮಿಸಬೇಕು’ ಎಂಬುದು ಮೂಡಿಗೆರೆ ಅನಿಲ್ ಆಗ್ರಹ.

Cut-off box - ಉದ್ಯಾನವಲ್ಲಿ ಅದಕ್ಕೆ ಜಾಗವೂ ಇಲ್ಲ ಶೃಂಗೇರಿ: ತಾಲ್ಲೂಕಿನಲ್ಲಿ ವಿಶ್ರಾಂತಿಗಾಗಿ ಉದ್ಯಾನವನ ಇಲ್ಲದೆ ಜನರು ಪರದಾಡುವ ಪರಿಸ್ಥಿತಿ ಇದೆ.ಶೃಂಗೇರಿಯಲ್ಲಿ ಇದುವರೆಗೂ ಉದ್ಯಾನವನ ಗುರುತಿಸಿಲ್ಲ ಪಟ್ಟಣ ಮತ್ತು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಉದ್ಯಾನವನ ಗುರುತಿಸಲು ಜಾಗವೇ ಇಲ್ಲ. ಗಾಂಧಿ ಮೈದಾನದಲ್ಲಿ ಖಾಸಗಿ ಉದ್ಯಾನವನ ಇದೆ. ಆದರೆ ಅದು ಸರಿಯಾದ ನಿರ್ವಹಣೆ ಇಲ್ಲದಾಗಿದೆ. ಪಕ್ಕದಲ್ಲಿ ಮದ್ಯದ ಅಂಗಡಿ ಇರುವುದರಿಂದ ಕುಡುಕರ ಹಾವಳಿ ಹೆಚ್ಚಾಗಿದೆ. ಪಟ್ಟಣ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಡಾವಣೆಗಳು ಹೆಚ್ಚಿದೆ. ಅವು ಅಭಿವೃದ್ದಿಯಾದರೆ ಉದ್ಯಾನವನ ಹೆಚ್ಚಾಗುತ್ತವೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಪಾದ್ ಹೇಳಿದರು. ತಾಲ್ಲೂಕಿನಲ್ಲಿ ಮತ್ತು ಪಂಚಾಯಿತಿ ವ್ಯಾಪ್ತಿಯಲ್ಲಿ ಬಡಾವಣೆಗಳು ಅಭಿವೃದ್ಧಿಯಾದರೆ ಉದ್ಯಾನವನ ಆಗುವುದಾದರೆ ಅದು ಬಡಾವಣೆಗಳ ನಿವಾಸಿಗಳಿಗೆ ಮಾತ್ರ ಸೀಮಿತ. ಸಾರ್ವಜನಿಕರಿಗೆ ಉದ್ಯಾನವನ ಇಲ್ಲವೇ ಇಲ್ಲ ಎಂದು ಕುರುಬಕೇರಿ ನಿವಾಸಿ ಕೃಷ್ಣಪ್ಪ ಆರೋಪಿಸಿದರು.

Cut-off box - ಪ್ರವಾಸಿ ಮಂದಿರ ಆವರಣದಲ್ಲೆ ವಾಯು ವಿಹಾರ ಕಡೂರು: ಪಟ್ಟಣದೊಳಗೆ ಉದ್ಯಾನವನಗಳು ಹೆಚ್ಚಿಲ್ಲವಾದರೂ ಪ್ರವಾಸಿ ಮಂದಿರದ ಆವರಣದೊಳಗೆ ವಾಯು ವಿಹಾರಕ್ಕೆ ಹಿರಿಯ ನಾಗರೀಕರು ಬರುತ್ತಾರೆ. ಇಲ್ಲಿನ ನಡಿಗೆ ಪಥ ಉತ್ತಮವಗಿದೆ. ಆದರೆ ನೈರ್ಮಲ್ಯದ ಕೊರತೆಯಿದೆ. ಇನ್ನು ಪಟ್ಟಣದಿಂದ ಸ್ವಲ್ಪ ದೂರದಲ್ಲಿ ವೇದಾ ನದಿ ಪಕ್ಕದಲ್ಲಿರುವ ವೇದಾ ಪಾರ್ಕ್ ಸುಸಜ್ಜಿತವಾಗಿದೆ. 500 ಮೀಟರ್ ಉದ್ಧದ ವಾಕಿಂಗ್ ಪಾಥ್ ಇದೆ. ಕಳಿತುಕೊಳ್ಳಲು ಬೆಂಚ್‌ಗಳಿವೆ. ಪಥದ ಎರಡೂ ಕಡೆ ಹಸಿರು ಹುಲ್ಲುಹಾಸು ಮತ್ತು ಅಲಂಕಾರಿಕ ಗಿಡಗಳಿವೆ. ಪಟ್ಟಣದಿಂದ ಸ್ವಲ್ಪ ಹೊರ ವಲಯ ಎಂಬುದನ್ನು ಬಿಟ್ಟರೆ ಉತ್ತಮ ಉದ್ಯಾನ. ಪುರಸಭೆಯಿಂದ ಇದರ ನಿರ್ಮಾಣವಾಗಿದ್ದು ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದು ಕೊರತೆಯಾಗಿದೆ. ಈ ಉದ್ಯಾನ ಬಿಟ್ಟರೆ ದಾಖಲೆಗಳಲ್ಲಷ್ಟೇ ಇರುವ  ಉದ್ಯಾನಗಳಿಂದ ಯಾವುದೇ ಉಪಯೋಗ ಸಾರ್ವಜನಿಕರಿಗೆ ಆಗುತ್ತಿಲ್ಲ

Cut-off box - ಮಕ್ಕಳ ಆಟಕ್ಕೆ ಸೀಮಿತವಾದ ಉದ್ಯಾನ ನರಸಿಂಹರಾಜಪುರ: ಪಟ್ಟಣದ ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ಉದ್ಯಾನವ ನಿರ್ಮಿಸಲಾಗಿದೆ. ಇದು ವಿಸ್ತಾರವಾಗಿಲ್ಲದ ಕಾರಣ ಮಕ್ಕಳ ಆಟಿಕೆಗಳನ್ನು ಅಳವಡಿಸಲಾಗಿದೆ. ನಾಗರೀಕರು ಕೊರುವ ವ್ಯವಸ್ಥೆ ಇದೆ. ಆದರೆ ವಾಯುವಿಹಾರ ಮಾಡಲು ಸಾಕಷ್ಟು ಜಾಗ ಇಲ್ಲ. ಪಟ್ಟಣದ ರಾಘವೇಂದ್ರ ಬಡಾವಣೆ ವ್ಯಾಪ್ತಿಯಲ್ಲಿ ಉದ್ಯಾನಕ್ಕೆ ಜಾಗ ಮೀಸಲಿರಿಸಿ ಸುತ್ತಲೂ ತಡೆಗೋಡೆ ನಿರ್ಮಿಸಲಾಗಿದೆ. ಆದರೆ ಅದು ಅಭಿವೃದ್ಧಿ ಕಂಡಿಲ್ಲ.

Cut-off box - ಉದ್ಯಾನ ನಿರ್ವಹಣೆ ಕೊರತೆ ತರೀಕೆರೆ: ಪಟ್ಟಣದ ಹೃದಯ ಭಾಗದಲ್ಲಿ ಮಹಾತ್ಮಾ ಗಾಂಧಿ ಉದ್ಯಾನ ನಿರ್ವಹಣೆಯಿಲ್ಲದೆ ಸೊರಗಿದೆ. ಮಕ್ಕಳಿಗೆ ಕ್ರೀಡಾ ಪರಿಕರಗಳಿವೆ. ಆದರೆ ಸೂಕ್ತ ನಿರ್ವಹಣೆಯಿಲ್ಲದೆ ಅನುಪಯುಕ್ತವಾಗಿವೆ. ಉದ್ಯಾನದಲ್ಲಿ ಸ್ವಚ್ಚತೆಯಿಲ್ಲದೆ ಎಲ್ಲಾ ಕಡೆ ಗುಟ್ಕಾ ಪ್ಯಾಕೆಟ್ ಹಾಗೂ ಸಾರ್ವಜನಿಕರು ಬಳಸಿದ ಪ್ಲಾಸ್ಟಿಕ್ ಕವರ್‌ಗಳು ತುಂಬಿ ತುಳುಕಿವೆ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಸಮೀಪದಲ್ಲಿ ಸಾರ್ವಜನಿಕ ಶೌಚಾಲಯವಿದೆ. ಆದರೆ  ನಿರ್ವಹಣೆಯಿಲ್ಲದಂತಾಗಿದೆ. ಉದ್ಯಾನದ ಕ್ರೀಡಾ ಪರಿಕರಗಳನ್ನು ಸರಿಪಡಿಸಬೇಕು ಹಾಗೂ ಮೂಲಸೌಕರ್ಯ ಜತಗೆ ಸ್ವಚ್ಚತೆ ಹೆಚ್ಚಿನ ಆದ್ಯತೆ ನೀಡಬೇಕು ಎನ್ನುತ್ತಾರೆ ನಿವಾಸಿ ದೀಪಾ.

Cut-off box - ನಿರ್ವಹಣೆ ಇಲ್ಲದೆ ಸೊರಗಿದ ಉದ್ಯಾನ ಕೊಪ್ಪ: ಪಟ್ಟಣದ ಮೇಲಿನಪೇಟೆ ವಾಟರ್ ಟ್ಯಾಂಕ್ ವೃತ್ತದ ಬಳಿ ಇರುವ ಎಂ.ಎಸ್.ದ್ಯಾವೇಗೌಡ ಮಕ್ಕಳ ಉದ್ಯಾನವನ ನಿರ್ವಹಣೆಯಿಲ್ಲದೇ ಸೊರಗಿದೆ. ಕುಳಿತುಕೊಳ್ಳುವ ಆಸನದ ಕಲ್ಲುಗಳಿಗೆ ಗಿಡಗಂಟಿಗಳು ಆವರಿಸಿವೆ. ಇಲ್ಲಿರುವ ಪರಿಕರಗಳು ಒಡೆದಿವೆ. ಓಡಾಡುವ ಹಾದಿಯನ್ನು ಪೊದೆ ಆವರಿಸಿದೆ. ನೀರಿಲ್ಲದ ಕಾರಂಜಿ ಕಳೆಗುಂದಿದೆ. ಅಲ್ಲಲ್ಲಿ ಬಿದ್ದ ಪ್ಲಾಸ್ಟಿಕ್ ವಸ್ತುಗಳು ಗುಂಡಿಯೊಳಗೆ ಬಿಯರ್ ಬಾಟಲಿ ಬಿದ್ದಿವೆ. ಉದ್ಯಾನವನಕ್ಕೆ ಹೊಂದಿಕೊಂಡಂತೆ ಸಾರ್ವಜನಿಕ ಶೌಚಾಲಯ ಇದ್ದರೂ ಅಸಮರ್ಪಕ ನಿರ್ವಹಣೆ ಕಾಣಿಸಿದೆ. ಶೌಚಾಲಯದ ಕಟ್ಟಡದ ಹಿಂಭಾಗದಲ್ಲಿ ಪ್ಲಾಸ್ಟಿಕ್ ವಸ್ತುಗಳು ರಟ್ಟಿನ ಬಾಕ್ಸ್‌ಗಳನ್ನು ಗುಡ್ಡೆ ಹಾಕಲಾಗಿದೆ. ಸಾರ್ವಜನಿಕರು ಉದ್ಯಾನದೊಳಗೆ ಹೋಗದೆ ತಿಂಗಳುಗಳೆ ಕಳೆದಿವೆ ಎಂಬುದು ಮೇಲ್ನೋಟಕ್ಕೆ ಗೋಚರಿಸುತ್ತದೆ.

Cut-off box - ಎರಡು ಉದ್ಯಾನ ಉತ್ತಮ: ಉಳಿದವು ಕಳಪೆ ಬೀರೂರು: ಪಟ್ಟಣದಲ್ಲಿ ಹೆಸರಿಗೆ ಹತ್ತಾರು ಪಾರ್ಕುಗಳಿದ್ದರೂ ವಿವೇಕಾನಂದ ಬಡಾವಣೆಯಲ್ಲಿ ಪುರಸಭೆಯ ಆಸ್ತಿಯಾಗಿ ಇರುವ ವಿವೇಕಾನಂದ ಪಾರ್ಕ್ ಸಾರ್ವಜನಿಕರ ಮತ್ತು ಇತರ ಸಂಸ್ಥೆಗಳ ಸಹಭಾಗಿತ್ವದಿಂದ ಅತ್ಯುತ್ತಮವಾಗಿದೆ. ಪಾರ್ಕಿನಲ್ಲಿ ವಾಯು ವಿಹಾರ ಮಾಡಲು ಅನುಕೂಲ ಆಗುವಂತೆ ಪಥ ನಿರ್ಮಿಸಲಾಗಿದೆ. ವ್ಯಾಯಾಮ ಮಾಡುವವರಿಗೆ ಅನುಕೂಲವಾಗುವಂತೆ ಕೆಲವು ಉಪಕರಣಗಳನ್ನು ಅಳವಡಿಸಲಾಗಿದೆ. ಮಕ್ಕಳ ಆಟದ ಸಲುವಾಗಿಯೂ ಕೆಲವು ಉಪಕರಣಗಳನ್ನು ಅಳವಡಿಸಲಾಗಿದೆ. ಅದನ್ನು ಬಿಟ್ಟರೆ ಪಟ್ಟಣದ ಕ್ಯಾಂಪ್ ಬಡಾವಣೆ ಸಮೀಪ ಇರುವ ಪುರಸಭೆ ಉದ್ಯಾನ ಚಿಕ್ಕದಾದರೂ ಕೂಡ ಸಾರ್ವಜನಿಕರ ಸಹಕಾರದಿಂದ ಹಸಿರಿನ ವಾತಾವರಣ ಹೊಂದಿ ಸುಸ್ಥಿತಿಯಲ್ಲಿದೆ. ಈ ಎರಡು ಉದ್ಯಾನಗಳನ್ನು ಬಿಟ್ಟರೆ ಮತ್ತೆ ಯಾವ ಬಡಾವಣೆಗಳಲ್ಲಿಯೂ ಸುಸಜ್ಜಿತವಾದ ಉದ್ಯಾನಗಳಿಲ್ಲ.  ಉದ್ಯಾನಗಳ ನಿರ್ವಹಣೆಗೆ ಪುರಸಭೆ ಹಣ ಬಿಡುಗಡೆ ಮಾಡುತ್ತದೆ. ಆದರೆ ಅದು ಕೇವಲ ಕಾಟಾಚಾರದ ಕೆಲಸವಾಗಿದೆ. ಅಂಬೇಡ್ಕರ್ ನಗರದ ಉದ್ಯಾನವನದಲ್ಲಿ ಕೆಲವರು ಗುಡಿಸಲು ನಿರ್ಮಿಸಿ ಅದನ್ನು ಖಾಸಗಿ ಸ್ವತ್ತಾಗಿ ಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆ. ಇನ್ನ ಎಲ್ಲಿಯೂ ಕೂಡ ಪಾರ್ಕಗಳ ನಿರ್ವಹಣೆ ವ್ಯವಸ್ಥಿತವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT