ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಪತ್ರಿಕೆ ನಕಲು ಪ್ರತಿ ಪರೀಕ್ಷೆ: 'ಅನುತ್ತೀರ್ಣ'ಳಾದ ವಿದ್ಯಾರ್ಥಿನಿಗೆ 90 ಅಂಕ

Last Updated 14 ಜುಲೈ 2022, 5:13 IST
ಅಕ್ಷರ ಗಾತ್ರ

ನರಸಿಂಹರಾಜಪುರ: ದ್ವಿತೀಯ ಪಿಯು ಇಂಗ್ಲಿಷ್‌ ಪರೀಕ್ಷೆಯ ಅಂಕ ನಮೂದಿಸುವಾಗ ಯಡವಟ್ಟಾಗಿ, 90 ಅಂಕ ಪಡೆದ ವಿದ್ಯಾರ್ಥಿನಿ

ಜೋಯ್ಸಿ ಜೋಸೆಫ್
ಜೋಯ್ಸಿ ಜೋಸೆಫ್

ಅನುತ್ತೀರ್ಣ ಎಂದು ದಾಖಲಾಗಿರುವುದು ಉತ್ತರಪತ್ರಿಕೆಯ ನಕಲು ಪ್ರತಿ ಪರೀಕ್ಷಿಸಿದಾಗ ಪತ್ತೆಯಾಗಿದೆ.

ಪಟ್ಟಣದ ಎಂ.ಕೆ.ಸಿ.ಪಿ.ಎಂ.ಪಿ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಜೋಯ್ಸಿ ಜೋಸೆಫ್,ಈಗ90ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.

ಫಲಿತಾಂಶ ಪ್ರಕಟಗೊಂಡಾಗ ಜೋಯ್ಸಿ ಜೋಸೆಫ್ ಉಳಿದೆಲ್ಲ ವಿಷಯಗಳಲ್ಲಿ ಉತ್ತಮ ಸಾಧನೆ ಮಾಡಿದ್ದು, 436 ಅಂಕ ಪಡೆದಿದ್ದರು. ಆದರೆ ಇಂಗ್ಲಿಷ್‌ನಲ್ಲಿ ಕೇವಲ 17 ಅಂಕಗಳು ಬಂದಿದ್ದವು. ಅನುಮಾನಗೊಂಡ ಪೋಷಕರು ಹಾಗೂ ಕಾಲೇಜಿನವರು ಉತ್ತರಪತ್ರಿಕೆಯ ನಕಲು ಪ್ರತಿ ತರಿಸಿ ನೋಡಿದಾಗ 90 ಅಂಕಗಳು ಬಂದಿರುವುದು ದೃಢ ಪಟ್ಟಿದೆ.

ಉತ್ತರ ಪತ್ರಿಕೆಯಲ್ಲಿ ಒಟ್ಟು 17 ಪುಟಗಳು ಬರೆದಿದ್ದು, ಅದನ್ನೇ ತಪ್ಪಾಗಿ ನಮೂದಿಸಿರಬಹುದು ಎನ್ನಲಾಗಿದೆ. ಸರಿಪಡಿಸಿದ ಬಳಿಕ ಒಟ್ಟು ಅಂಕವು 509 ಆಗಿದ್ದು, ಕಾಲೇಜು ಶೇ 100 ಫಲಿತಾಂಶ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT