ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಟ್ಟಿಗೆಹಾರ|ಪರ್ಸ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಪೆಟ್ರೋಲ್ ಬಂಕ್ ಸಿಬ್ಬಂದಿ

Published 2 ಆಗಸ್ಟ್ 2023, 15:45 IST
Last Updated 2 ಆಗಸ್ಟ್ 2023, 15:45 IST
ಅಕ್ಷರ ಗಾತ್ರ

ಕೊಟ್ಟಿಗೆಹಾರ: ಪೆಟ್ರೋಲ್ ಬಂಕ್‌ನಲ್ಲಿ ವಾಹನಕ್ಕೆ ಪೆಟ್ರೋಲ್ ಹಾಕಿಸಿ, ನಂತರ ಅಲ್ಲಿಯೇ ಬಿಟ್ಟು ಹೋದ ಹಣದ ಪರ್ಸ್ ಅನ್ನು ಪೆಟ್ರೋಲ್ ಬಂಕ್ ಸಿಬ್ಬಂದಿ ವಾರಸುದಾರರಿಗೆ ತಲುಪಿಸಿದ್ದಾರೆ.

ಬಣಕಲ್‌ನ ಗುಜರಿ ವ್ಯಾಪಾರಿ ಅಬ್ದುಲ್ ರೆಹಮಾನ್ ಬುಧವಾರ ತಮ್ಮ ಗೂಡ್ಸ್ ವಾಹನಕ್ಕೆ ಪೆಟ್ರೋಲ್ ಹಾಕಿಸಿ ಪರ್ಸ್ ಅನ್ನು ಅಲ್ಲಿಯೇ ಬಿಟ್ಟು ಹೋಗಿದ್ದರು. ಪರ್ಸ್‌ನಲ್ಲಿ ₹10ಸಾವಿರ ಹಣವಿತ್ತು. ಅದನ್ನು ನೋಡಿದ ಪೆಟ್ರೋಲ್ ಬಂಕ್‌ ಸಿಬ್ಬಂದಿ ಪ್ರಕಾಶ್ ಪೂಜಾರಿ, ಹಣದ ಪರ್ಸ್ ಅನ್ನು ಅಬ್ದುಲ್ ರೆಹಮಾನ್ ಅವರಿಗೆ ಹಿಂದಿರುಗಿಸಿ ಮಾನವೀಯತೆ ಮೆರೆದಿದ್ದಾರೆ. ಈ ಸಂದರ್ಭದಲ್ಲಿ ಶರತ್, ಸುದೀಪ್, ಶಶಾಂಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT