ಮಂಗಳವಾರ, ಜನವರಿ 26, 2021
15 °C

ಕಾಫಿನಾಡಲ್ಲಿ ಗುಡುಗು ಸಹಿತ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪ: ತಾಲ್ಲೂಕಿನ ಕೆಲವೆಡೆ ಭಾನು ವಾರ ಸಂಜೆ ತುಂತುರು ಮಳೆಯಾಗಿದೆ. ತಾಲ್ಲೂಕಿನ ನಾರ್ವೆ ಭಾಗ, ಗಡಿಕಲ್ ಸೇರಿದಂತೆ ಹಲವೆಡೆ ಮಳೆಯಾಗಿದೆ.

ಶೃಂಗೇರಿ ತಾಲ್ಲೂಕಿನಲ್ಲೂ ತುಂತುರು ಮಳೆಯಾಗಿದೆ. ಮೂಡಿಗೆರೆ ತಾಲ್ಲೂಕಿನ ಕಳಸ ಸುತ್ತಮುತ್ತ ಸಾಧಾರಣ ಮಳೆಯಾಗಿದೆ.

ಕೊಟ್ಟಿಗೆಹಾರ: ಬಣಕಲ್, ಕೊಟ್ಟಿಗೆಹಾರ ಸುತ್ತಮುತ್ತ ಭಾನುವಾರ ಸಂಜೆ ಗುಡುಗು ಸಹಿತ ಮಳೆಯಾಗಿದೆ. ಅಕಾಲಿಕ ಮಳೆಯಿಂದ ಕಾಫಿ ಬೆಳೆಗಾರರಿಗೆ ಮತ್ತು ಭತ್ತ ಬೆಳೆಗಾರರಿಗೆ ತೊಂದರೆಯಾಗಿದೆ.

ಬಾಳೆಹೊನ್ನೂರು: ಭಾನುವಾರ ಸಂಜೆ ವೇಳೆಗೆ ಸಿಗೋಡು, ಹೇರೂರು, ಬಿಕ್ಕರಣೆ, ಜಯಪುರ ಸೇರಿದಂತೆ ವಿವಿಧಡೆ ದಿಢೀರನೆ ಧಾರಾಕಾರ ಮಳೆ ಸುರಿದ ಪರಿಣಾಮ ಜನಜೀವನ ಆಸ್ತವ್ಯಸ್ತಗೊಂಡಿತು.

ಕಾಫಿ, ಅಡಿಕೆ, ಭತ್ತದ ಕೊಯ್ಲು ಎಲ್ಲಡೆ ನಡೆಯುತ್ತಿದ್ದು ಮಳೆಯಿಂದಾಗಿ ರೈತರು ಕಂಗಾಲಾದರು. ಮಳೆಯ ಹೊಡೆತದಿಂದ ಕಟಾವು ಮಾಡಿದ ಬೆಳೆಯನ್ನು ರಕ್ಷಿಸಲು ಟಾರ್ಪಲ್ ಹೊದೆಸುತ್ತಿದ್ದ ದೃಶ್ಯ ಕಂಡುಬಂತು.

ನರಸಿಂಹರಾಜಪುರ: ಪಟ್ಟಣದ ವ್ಯಾಪ್ತಿಯಲ್ಲಿ ಭಾನುವಾರ ಸಂಜೆ ಸಾಧಾರಣ ಮಳೆ ಸುರಿಯಿತು. ಮಧ್ಯಾಹ್ನದ ನಂತರ ಮೋಡಕವಿದ ವಾತಾವರಣ ಇತ್ತು.

ಕಳೆದೆರೆಡು ದಿನಗಳಿಂದ ಬಿಸಿಲು, ಮೋಡ ಕವಿದ ವಾತಾವರಣವಿತ್ತು. ಮಳೆ ಸುರಿದಿದ್ದರಿಂದ ವಾತಾವರಣ ತಂಪಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.