ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿನಾಡಿನ ವಿವಿಧೆಡೆ ಮಳೆ

Last Updated 9 ಡಿಸೆಂಬರ್ 2020, 5:21 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಕಾಫಿನಾಡಿನ ವಿವಿಧೆಡೆ ಮಂಗಳವಾರ ಮಳೆಯಾಗಿದೆ.

ಬೆಳಿಗ್ಗೆಯಿಂದಲೂ ಮೋಡ ಕವಿದ ವಾತಾವರಣ ಇತ್ತು. ನಗರದಲ್ಲಿ ರಾತ್ರಿ 7.30ರ ಹೊತ್ತಿಗೆ ಆರಂಭವಾಗಿ ಅರ್ಧ ಗಂಟೆ ಸುರಿಯಿತು. ರಸ್ತೆಗಳ ಗುಂಡಿಗಳು ಕೆಸರುಮಯವಾಗಿವೆ. ತಾಲ್ಲೂಕಿನ ಗಿರಿಶ್ರೇಣಿ, ಇಂದಾವರ, ಅತ್ತಿ ಗುಂಡಿ, ಆಲ್ದೂರಿನಲ್ಲಿ ಮಳೆಯಾಗಿದೆ.

‘ಈ ಭಾಗ ಮಳೆಯಾಗುತ್ತಿರುವು ದಿರಿಂದ ಅಡಿಕೆ, ಕಾಫಿ, ಅಡಿಕೆ, ಭತ್ತ ಎಲ್ಲದಕ್ಕೂ ತೊಂದರೆ. ಅಡಿಕೆ ಸಂಸ್ಕರ ಣೆಗೆ ಗೋಳಾಡುವಂತಾಗಿದೆ’ ಎಂದು ಬೆಳೆಗಾರ ಜಯರಾಂ ತಿಳಿಸಿದರು.

ಅಕಾಲಿಕ ಮಳೆಗೆ ತತ್ತರಿಸಿದ ಬೆಳೆಗಾರ: ಮೂಡಿಗೆರೆ ತಾಲ್ಲೂಕಿನಾದ್ಯಂತ ಮಂಗಳವಾರ ಅರ್ಧ ಗಂಟೆಗೂ ಅಧಿಕ ಕಾಲ ಅಕಾಲಿಕವಾಗಿ ಮಳೆ ಸುರಿದಿದ್ದು, ಬೆಳೆಗಾರರು ತತ್ತರಿಸಿದ್ದಾರೆ.

ಸೋಮವಾರ ತಡರಾತ್ರಿ ಒಂದು ತಾಸಿಗೂ ಅಧಿಕ ಕಾಲ ತುಂತುರು ಮಳೆ ಸುರಿಯಿತು.

ಈಗಾಗಲೇ ಮಲೆನಾಡಿನಲ್ಲಿ ಭತ್ತದ ಕಟಾವು ಪ್ರಾರಂಭವಾಗಿದ್ದು, ಹೊರಟ್ಟಿ, ಗುತ್ತಿ, ಕುಂದೂರು, ಬೆಟ್ಟದಮನೆ, ಬಡವನ ದಿಣ್ಣೆ, ಸಬ್ಬೇನಹಳ್ಳಿ, ತತ್ಕೊಳ ಸೇರಿದಂತೆ ವಿವಿಧ ಭಾಗಗಳಲ್ಲಿ ಕಟಾವು ಮಾಡಿದ್ದ ಭತ್ತವೆಲ್ಲವೂ ಮಳೆಗೆ ಸಿಲುಕಿ ಹಾನಿಯಾಗಿದೆ. ಅಲ್ಲದೇ ಅರೇಬಿಕಾ ಕಾಫಿ ಕೊಯ್ಲು ಪ್ರಾರಂಭವಾಗಿದ್ದು, ಅಕಾಲಿಕವಾಗಿ ಸುರಿದ ಮಳೆಯಿಂದ ಕಾಫಿ ಕಣಗಳಲ್ಲಿ ಒಣಗುತ್ತಿದ್ದ ಕಾಫಿಯೆ ಲ್ಲವೂ ಮಳೆಯಿಂದ ಹಾನಿಯಾಗಿದೆ.

ಕೊಟ್ಟಿಗೆಹಾರ: ಕೊಟ್ಟಿಗೆಹಾರ, ಬಣಕಲ್ ಸುತ್ತಮುತ್ತ ತುಂತುರು ಮಳೆಯಾಗಿದೆ

ಕಳಸದಲ್ಲಿ ಮಳೆ– ಕೃಷಿಕರಲ್ಲಿ ಚಿಂತೆ: ಕಳಸ ಪಟ್ಟಣ ಮತ್ತು ಆಸುಪಾಸಿನ ಪ್ರದೇಶದಲ್ಲಿ ಮಳೆ ಸುರಿದಿದೆ. ಕಟಾವಿಗೆ ಸಜ್ಜಾಗಿದ್ದ ಭತ್ತದ ಕೃಷಿಕರು ಆತಂಕಗೊಂಡಿದ್ದಾರೆ. ಕಾಫಿ ಹಣ್ಣು ಕೂಡಾ ಕೊಯ್ಲಿಗೆ ಬಂದಿದ್ದು ಬೆಳೆಗಾರರು ಮಳೆಯಿಂದಾಗಿ ಚಿಂತಿತರಾಗಿದ್ದಾರೆ.

ಬೇಯಿಸಿದ ಅಡಿಕೆಯ ಒಣಗುವಿ ಕೆಗೂ ಮೋಡ, ಮಳೆ ಅಡ್ಡಿ ಆಗಿದೆ. ಮಳೆಯಿಂದಾಗಿ ಹೆಚ್ಚಿನ ಕಾರ್ಮಿಕರ ಬಳಕೆ ಆಗುತ್ತಿದೆ.

ಮಂಗಳವಾರ ಸಂಜೆ ಸುಮಾರು 5 ಮಿ.ಮೀ. ಮಳೆ ಸುರಿದಿದೆ.

ತರೀಕೆರೆ– ಸಾಧಾರಣ ಮಳೆ: ಪಟ್ಟಣದಲ್ಲಿ ಮಂಗಳವಾರ ಸಂಜೆ 5 ಗಂಟೆಗೆ ಹತ್ತು ನಿಮಿಷಗಳ ಕಾಲ ಸಾಧಾರಣಾ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT