ನರಸಿಂಹರಾಜಪುರ: ತಾಲ್ಲೂಕಿನ ವಿವಿಧೆಡೆ ಎರಡನೇ ಹಂಗಾಮಿನ ಬೆಳೆಯಾಗಿ ಬೆಳೆದಿರುವ ಭತ್ತದ ಕಟಾವಿಗೆ ಮಳೆ ಅಡ್ಡಿಯಾಗಿದೆ.

ತಾಲ್ಲೂಕಿನ ವ್ಯಾಪ್ತಿಯಲ್ಲಿ ರೈತರು ಸ್ವಂತ ಜಮೀನಿನಲ್ಲಿ ಹಾಗೂ ಭದ್ರಾ ಹಿನ್ನೀರಿಗೆ ಹೊಂದಿ ಕೊಂಡಿರುವ ಪ್ರದೇಶದಲ್ಲಿ ಬೇಸಿಗೆಯಲ್ಲಿ ಬೆಳೆದಿದ್ದ ಭತ್ತದ ಬೆಳೆ ಈಗ ಕಟಾವಿಗೆ ಬಂದಿದೆ. ಮೂರು ತಿಂಗಳಿಗೆ ಕಟಾವಿಗೆ ಬರುವ ಜ್ಯೋತಿ ತಳಿಯ ಭತ್ತವನ್ನು ರೈತರು ಅಧಿಕವಾಗಿ ಬೆಳೆದಿದ್ದಾರೆ. ಸ್ಥಳೀಯ ಮಾರುಕಟ್ಟೆಯಲ್ಲಿ ಪ್ರತಿ ವರ್ಷ ಜ್ಯೋತಿ ಭತ್ತಕ್ಕೆ ಹೆಚ್ಚು ಬೇಡಿಕೆ ಇದ್ದುದರಿಂದ ಅಧಿಕ ಧಾರಣೆ ಲಭ್ಯವಾಗುತ್ತಿತ್ತು.

ಜ್ಯೋತಿ ಭತ್ತ ಪ್ರಮುಖವಾಗಿ ಕುಚ್ಚಲಕ್ಕಿಗೆ ಬಳಕೆಯಾಗುತ್ತದೆ. ಇದಕ್ಕೆ ಕೇರಳ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯೂ ಸೇರಿದಂತೆ ವಿವಿಧೆಡೆ ಬೇಡಿಕೆಯಿದೆ. ಪ್ರಸ್ತುತ ಜ್ಯೋತಿ ಭತ್ತಕ್ಕೆ ಮಾರುಕಟ್ಟೆಯಲ್ಲಿ ಕ್ವಿಂಟಾಲ್ಗೆ ₹2,100ರಿಂದ ₹2,200ದರ ನಿಗದಿಯಾಗಿದೆ. ಇದು ಸರ್ಕಾರ ನಿಗದಿಪಡಿಸಿರುವ ಬೆಂಬಲ ಬೆಲೆಗಿಂತಲೂ ಕಡಿಮೆ ದರ.

ಮಳೆಯಕಾರಣದಿಂದ ಭತ್ತ ಹಸಿಯಾಗಿರುವುದರಿಂದ ಅದನ್ನು ಒಣಗಿಸಿ ಬೇರೆ ಕಡೆಗೆ ಕಳುಹಿಸುವುದು ಕಷ್ಟವಾಗಿರುವುದರಿಂದ ಧಾರಣೆ ಕುಸಿದಿದೆ. ಇದರ ಜತೆಗೆ ಹೊರರಾಜ್ಯದಿಂದ ಹೆಚ್ಚು ಭತ್ತ ರಾಜ್ಯಕ್ಕೆ ಬರುತ್ತಿರುವುದರಿಂದಲೂ ಧಾರಣೆ ಕುಸಿದಿದೆ. ಜತೆಗೆ ಪಡಿತರ ವ್ಯವಸ್ಥೆಯಲ್ಲಿ ಉಚಿತ ಅಕ್ಕಿ ವಿತರಣೆ ಮಾಡುತ್ತಿರುವುದರಿಂದಲೂ ಅಕ್ಕಿಯ ಬೆಲೆ ಕುಸಿದಿದೆ. ಸೋನಾಮಸ್ಸೂರಿ ಅಕ್ಕಿಯ ಬೆಲೆ ಕೆ.ಜಿಗೆ ₹55 ಇದ್ದು ₹45ಕ್ಕೆ ಕುಸಿದಿದೆ.

ಮಾರುಕಟ್ಟೆಯಲ್ಲಿ ಪ್ರಮುಖ ಭತ್ತವಾದ ಐಇಟಿ ಕ್ವಿಂಟಾಲ್ಗೆ ₹2,200, ಜಯ ಹಾಗೂ ತುಂಗಾ ₹2000, 1001ತಳಿ ₹1,800 ಸೋನಮಸ್ಸೂರಿ ₹2,200 ದರ ನಿಗದಿಯಾಗಿದೆ.

ಪ್ರತಿವರ್ಷ ಭತ್ತ ಬೆಳೆಯುವವರ ಸಂಖ್ಯೆ ಈ ಭಾಗದಲ್ಲಿ ಶೇ 10ರಷ್ಟು ಕಡಿಮೆಯಾಗುತ್ತಿದೆ. ಹುಲ್ಲಿನ ಧಾರಣೆ 1ಕಟ್ಟು ಹುಲ್ಲಿಗೆ ₹15ರಿಂದ ₹20 ಇದೆ. ಹೊರರಾಜ್ಯದಲ್ಲಿ ಮೂರು ಬೆಳೆ ಭತ್ತ ಬೆಳೆಯುತ್ತಾರೆ. ಅಲ್ಲಿಂದ ಬರುವ ಭತ್ತ, ಅಕ್ಕಿಯ ಧಾರಣೆ ಕಡಿಮೆ. ಹಾಗಾಗಿ ಭತ್ತಕ್ಕೆ ಬೇಡಿಕೆ ಕಡಿಮೆಯಾಗಿ ದರವೂ ಕಡಿಮೆಯಾಗಿದೆ. ಹವಾಮಾನ ವೈಪರೀತ್ಯದಿಂದ ಮುಂದಿನ ದಿನಗಳಲ್ಲಿ ಭತ್ತ ಬೆಳೆಯುವವರೇ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಭತ್ತದ ವ್ಯಾಪಾರಿ ಬಿ.ಎಚ್.ಕೈಮರದ ಎಚ್.ಎಸ್.ಪೂರ್ಣೇಶ್ ತಿಳಿಸಿದರು.

ತಾಲ್ಲೂಕಿನ ವ್ಯಾಪ್ತಿಯಲ್ಲಿ ಮುತ್ತಿನಕೊಪ್ಪ, ಕೆ.ಕಣಬೂರು, ಸಾತ್ಕೋಳಿ, ಬೈರಾಪುರ ಗ್ರಾಮಗಳ ವ್ಯಾಪ್ತಿಯಲ್ಲಿ ಹೆಚ್ಚು ಭತ್ತ ಬೆಳೆಯಲಾಗಿದೆ. ಅಂದಾಜು 25 ಹೆಕ್ಟೆರ್ ಪ್ರದೇಶದಲ್ಲಿ ಭತ್ತ ಬೆಳೆದಿದ್ದು, ಸಂಪೂರ್ಣ ಕಟಾವಿಗೆ ಬಂದಿದೆ. ಭದ್ರಾಹಿನ್ನೀರು ಪ್ರದೇಶದಲ್ಲಿ ಬೆಳೆದಿರುವುದು ಅಧಿಕೃತವಲ್ಲ. ಮಳೆ ಬರುತ್ತಿರುವುದಿಂದ ಕಟಾವಿಗೆ ಅಡ್ಡಿಯಾಗಿದೆ. ಮಳೆ ಬೀಡುವು ನೀಡಿದರೆ ಕಟಾವು ಆರಂಭವಾಗಲಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಮಹೇಶ್ ಹೇಳಿದರು.

ಮುತ್ತಿನಕೊಪ್ಪ ಗ್ರಾಮದಲ್ಲಿ ಬಿಸಿಲು ಬಂದಾಗ ಯಂತ್ರದ ಸಹಾಯದಿಂದ ಭತ್ತದ ಕಟಾವು ಆರಂಭಿಸಿದ್ದಾರೆ. ಆಗಾಗ ಮಳೆ ಬರುತ್ತಿರುವುದರಿಂದ ಭತ್ತದ ಕಟಾವಿಗೆ ಅಡ್ಡಿಯಾಗಿದೆ ಎಂದು ರೈತ ಮನೋಹರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.