ಚಿಕ್ಕಮಗಳೂರು: ರಸ್ತೆ ಸುರಕ್ಷತಾ ಕ್ರಮಗಳ ನಡುವೆಯೂ ಜಿಲ್ಲೆಯಲ್ಲಿ ಅಪಘಾತಗಳು ನಿರಂತರವಾಗಿ ನಡೆಯುತ್ತಿವೆ. ವರ್ಷದಲ್ಲಿ 200ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

2022–2024ರ ಅವಧಿಯಲ್ಲಿ ಪದೇ ಪದೇ ಅಪಘಾತ ಸಂಭವಿಸಿರುವ 26 ಸ್ಥಳಗಳನ್ನು ಪೊಲೀಸ್ ಇಲಾಖೆ ಪಟ್ಟಿ ಮಾಡಿತ್ತು. ಈ ಪೈಕಿ 22 ಸ್ಥಳಗಳನ್ನು ಸಂಬಂಧಪಟ್ಟ ಇಲಾಖೆಗಳು ಸರಿಪಡಿಸಿವೆ. ನಾಲ್ಕು ಸ್ಥಳಗಳು ಹಾಗೇ ಉಳಿದುಕೊಂಡಿವೆ.

ಪೊಲೀಸ್ ಇಲಾಖೆ ಗುರುತಿಸಿದ್ದ 26 ಸ್ಥಳಗಳಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲೇ 21 ಸ್ಥಳಗಳಿದ್ದವು. ಉಳಿದ 5 ಸ್ಥಳಗಳನ್ನು ರಾಜ್ಯ ಹೆದ್ದಾರಿಯಲ್ಲಿ ಗುರುತಿಸಲಾಗಿತ್ತು. 21 ಸ್ಥಳಗಳಲ್ಲಿ ಅಪಘಾತ ತಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಮೂರು ಸ್ಥಳಗಳು ಮತ್ತು ರಾಜ್ಯ ಹೆದ್ದಾರಿಯಲ್ಲಿ ಒಂದು ಸ್ಥಳ ಇನ್ನೂ ಸರಿಯಾಗಬೇಕಿದೆ.

ಈ 26 ಸ್ಥಳಗಳ ಹೊರತಾಗಿಯೂ ಹೊಸ ಅಪಘಾತ ವಲಯಗಳು ನಿರ್ಮಾಣವಾಗುತ್ತಿವೆ. ಇದರಿಂದಾಗಿ 2025ರ ಜನವರಿಯಿಂದ ಇದುವರೆಗೆ ಒಟ್ಟು 792 ಅಪಘಾತಗಳು ಸಂಭವಿಸಿವೆ. 2023ರಲ್ಲಿ 1011, 2024ರಲ್ಲಿ 949 ಇತ್ತು. ಈ ವರ್ಷ ಡಿಸೆಂಬರ್ ಪೂರ್ಣಗೊಳ್ಳುವ ಮುನ್ನ ಅಪಘಾತಗಳ ಸಂಖ್ಯೆ 792 ಇದೆ. ಮೂರು ವರ್ಷಗಳಲ್ಲಿ 730 ಜನ ಮೃತಪಟ್ಟಿದ್ದಾರೆ.

ಕಡೂರು–ಮೂಡಿಗೆರೆ–ಮಂಗಳೂರು, ತುಮಕೂರು–ಹೊನ್ನಾವರ, ಮಂಗಳೂರು–ಕಾರ್ಕಳ–ಶೃಂಗೇರಿ–ಕೊಪ್ಪ–ಶಿವಮೊಗ್ಗ ಸಂಪರ್ಕಿಸುವ ಮೂರು ರಾಷ್ಟ್ರೀಯ ಹೆದ್ದಾರಿಗಳು ಜಿಲ್ಲೆಯಲ್ಲಿ ಹಾದು ಹೋಗಿವೆ. ಬಹುತೇಕ ಅಪಘಾತಗಳು ರಾಷ್ಟ್ರೀಯ ಹೆದ್ದಾರಿಯಲ್ಲೇ ನಡೆದಿದ್ದು, ಅದರಲ್ಲೂ ಜಿಲ್ಲೆಯ ವ್ಯಾಪ್ತಿಯ ತುಮಕೂರು–ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲೆ ಹೆಚ್ಚು ಅವಘಡಗಳು ನಡೆದಿವೆ.

ಹೊಸದಾಗಿ ನಿರ್ಮಾಣವಾಗಿರುವ ಕಡೂರು–ಮೂಡಿಗೆರೆ–ಮಂಗಳೂರು ರಸ್ತೆಯಲ್ಲೂ ಹೆಚ್ಚಾಗಿ ಅಪಘಾತಗಳು ಸಂಭವಿಸುತ್ತಿವೆ. ಲಕ್ಯಾ ಕ್ರಾಸ್ ಕೂಡ ಪ್ರಮುಖ ಅಪಘಾತ ತಾಣವಾಗಿದ್ದು, ರಸ್ತೆ ವಿಸ್ತರಣೆ ಮತ್ತು ಉಬ್ಬುಗಳನ್ನು ನಿರ್ಮಿಸಿ ಸರಿಪಡಿಸುವ ಕಾರ್ಯ ನಡೆದಿದೆ. ಆದರೂ, ಅಪಘಾತಗಳು ಆಗಾಗ ಸಂಭವಿಸುತ್ತಿವೆ.

ಕಡೂರು: ಅಪಘಾತ ತಪ್ಪಿಸಲು ಕ್ರಮ

ಪಟ್ಟಣ ವ್ಯಾಪ್ತಿಯಲ್ಲಿ ಕನಕ ವೃತ್ತದಿಂದ ಚಿಕ್ಕ ಪಟ್ಟಣಗೆರೆ ಕ್ರಾಸ್ ವರೆಗೆ ಅಂಡರ್ ಬ್ರಿಡ್ಜ್ ರಸ್ತೆಯಿಂದ ಕನಕ ವೃತ್ತದ ವರೆಗೆ ತಂಗಲಿಯಿಂದ ಗೆದ್ಲೆಹಳ್ಳಿ ವರೆಗೆ ಕುಪ್ಪಾಳು ಮೊರಾರ್ಜಿ ವಸತಿ ಶಾಲೆಯ ಬಳಿ ಉದ್ದೇಬೋರನಹಳ್ಳಿ ಜಾನ್ ಸಾಲೆ ಎಸ್ಟೇಟ್ ಬಳಿ ಹಿರೇಗೌಜ ವೃತ್ತದ ಬಳಿ ಅಪಘಾತದ ಸ್ಥಳಗಳನ್ನು ಪೊಲೀಸ್ ಇಲಾಖೆ ಗುರುತಿಸಿತ್ತು. ಈ ಜಾಗಗಳಲ್ಲಿ ರಸ್ತೆ ಉಬ್ಬುಗಳನ್ನು ನಿರ್ಮಿಸಿ ಕೆಲವೆಡೆ ರಸ್ತೆ ವಿಭಜಕ ನಿರ್ಮಿಸಿ ಸಮಸ್ಯೆ ಪರಿಹರಿಸಲಾಗಿದೆ. ಬಿ.ಎಚ್. ರಸ್ತೆಯ ವೇದಾ ಸೇತುವೆ ವಲಯ ಸದ್ಯ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಗೊಂಡಿದೆ. ಅಲ್ಲಿ ಇನ್ನೂ ದುರಸ್ತಿ ಬಾಕಿ ಇದೆ. ಬೀರೂರು ವ್ಯಾಪ್ತಿಯಲ್ಲಿ ಕೋರನಹಳ್ಳಿ ಗೇಟ್ ಕೋಡಿಹಳ್ಳಿ ಕ್ರಾಸ್ ಕೂಡ್ಲೂರು ಗೇಟ್ ಕಡೂರು ರಸ್ತೆಯ ಬ್ರೈಟ್ ಫ್ಯೂಚರ್ ಶಾಲೆಯ ಬಳಿ ಅಪಘಾತ ವಲಯ ಎಂದು ಗುರುತಿಸಲಾಗಿತ್ತು. ಈ ಎಲ್ಲ ಕಡೆ ಮಾಹಿತಿ ಫಲಕಗಳು ರಸ್ತೆ ಉಬ್ಬುಗಳು ಮಾರ್ಗ ಬದಲಾವಣೆಗೆ ತಿರುವಿನ ವ್ಯವಸ್ಥೆ ಕಲ್ಪಿಸಿ ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೀರೂರು ಲಿಂಗದಹಳ್ಳಿ ರಸ್ತೆಯಲ್ಲಿ ತೋಟದ ಕ್ರಾಸ್ ಬಳಿ ಈ ಹಿಂದೆ ಬ್ಲಾಕ್ ಸ್ಪಾಟ್ ಎಂದು ಗುರುತಿಸಿದ್ದು ಅಲ್ಲಿ ರಸ್ತೆ ವಿಸ್ತರಣೆ ಮಾಡಿ ವಿಭಜಕ ನಿರ್ಮಿಸಿದ್ದರೂ ಅಪಘಾತಗಳು ನಡೆಯುತ್ತಲೇ ಇವೆ. ಸಣ್ಣಪುಟ್ಟ ಅಪಘಾತ ಆಗಿರುವುದರಿಂದ ಬ್ಲಾಕ್ ಸ್ಪಾಟ್ ಪಟ್ಟಿಯಿಂದ ಕೈ ಬಿಡಲಾಗಿದೆ.

ಮೂಡಿಗೆರೆ: ಹೆದ್ದಾರಿಯಲ್ಲಿ ತಪ್ಪದ ಅಪಘಾತ

ತಾಲ್ಲೂಕಿನಲ್ಲಿ ಹಾದು ಹೋಗಿರುವ ಎರಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ವಲಯಗಳಿದ್ದು ಅಪಘಾತ ತಡೆಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಮರೀಚಿಕೆಯಾಗಿವೆ. ಕಡೂರಿನಿಂದ ಮೂಡಿಗೆರೆ ಹ್ಯಾಂಡ್ ಪೋಸ್ಟ್ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೊಲ್ಲಿಬೈಲ್ ತಿರುವು ಕುದುರೆಗುಂಡಿ ಭೂತನಕಾಡು ಇಳಿಜಾರು ಪ್ರದೇಶಗಳು ಅಪಘಾತ ವಲಯವಾಗಿವೆ. ವಿಲ್ಲುಪುರಂ– ಮಂಗಳೂರು ಹೆದ್ದಾರಿಯ ಕಸ್ಕೇಬೈಲ್ ತಿರುವು ಗೋಣಿಬೀಡು ಚರ್ಚ್ ನೇರವಾದ ರಸ್ತೆ ಜನ್ನಾಪುರ ಇಳಿಜಾರು ರಸ್ತೆ ಜನ್ನಾಪುರ ಸೇತುವೆ ಜೇನುಬೈಲು ಮುತ್ತಿಗೆಪುರ ಹ್ಯಾಂಡ್ ಪೋಸ್ಟ್ ಸರ್ಕಲ್ ನೀರುಗಂಡಿ ಫಲ್ಗುಣಿ ತಿರುವು ಚಕ್ಕಮಕ್ಕಿ ಚೇಗ್ ರಸ್ತೆ ಅತ್ತಿಗೆರೆ ತಿರುವು ಪ್ರದೇಶಗಳು ಪ್ರಮುಖ ಅಪಘಾತ ವಲಯಗಳಾಗಿವೆ. ಇಲ್ಲಿ ನಿತ್ಯವೂ ಅಪಘಾತಗಳು ಸಂಭವಿಸುತ್ತಿವೆ. ಹೆದ್ದಾರಿ ವಿಸ್ತರಣೆಯಾದ ಬಳಿಕ ಅಪಘಾತಗಳ ಸಂಖ್ಯೆ ಹೆಚ್ಚಾಗಿದ್ದು ನೀರುಗಂಡಿ ಗ್ರಾಮದ ಬಳಿ ರಸ್ತೆ ಉಬ್ಬು ಅಳವಡಿಸಿರುವುದನ್ನು ಬಿಟ್ಟರೆ ಉಳಿದ ಪ್ರದೇಶಗಳಲ್ಲಿ ಅಪಘಾತ ತಡೆಗೆ ಯಾವುದೇ ಕ್ರಮ ವಹಿಸದಿರುವುದು ಅಪಘಾತ ಹೆಚ್ಚಳ ಕಾರಣವಾಗುತ್ತಿದೆ. ಹೆದ್ದಾರಿಯ ಎರಡೂ ಬದಿ ರಸ್ತೆ ಮೇಲೆಯೇ ಮರಳಿನ ರಾಶಿ ನಿರ್ಮಾಣವಾಗಿದ್ದು ನಿತ್ಯವೂ ದ್ವಿಚಕ್ರ ವಾಹನಗಳು ಅಪಘಾತವಾಗಿ ಸವಾರರು ಆಸ್ಪತ್ರೆ ಸೇರುವಂತಾಗಿದೆ. ಅಪಘಾತ ಪ್ರದೇಶದಲ್ಲಿರುವ ಕಂದಕಗಳ ಬಳಿ ತಡೆಗೋಡೆ ನಿರ್ಮಿಸಬೇಕು. ಅಪಘಾತ ವಲಯಗಳಲ್ಲಿ ಜಾಗೃತಿ ಫಲಕ ಅಳವಡಿಸಬೇಕು. ತಿರುವು ರಸ್ತೆಗಳ ಬಗ್ಗೆ ಸೂಚನಾ ಫಲಕಗಳನ್ನು ಹಾಕಬೇಕು. ರಸ್ತೆ ಬದಿ ಸಂಗ್ರಹವಾಗಿರುವ ಮರಳಿನ ರಾಶಿಯನ್ನು ತೆರವುಗೊಳಿಸಬೇಕು. ರಸ್ತೆಗೆ ಹರಡಿರುವ ಮರದ ಕೊಂಬೆ ಪೊದೆಗಳನ್ನು ತೆಗೆಯಬೇಕು. ನೇರ ರಸ್ತೆಗಳಲ್ಲಿ ವೇಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಹ್ಯಾಂಡ್ ಪೋಸ್ಟ್ ವೃತ್ತದಲ್ಲಿ ವಾಹನಗಳು ಸಂಚಾರ ನಿಯಮ ಪಾಲಿಸುವಂತೆ ಮಾಡುವ ಮೂಲಕ ಅಪಘಾತಗಳ ಪ್ರಮಾಣ ತಗ್ಗಿಸಬೇಕು ಎನ್ನುತ್ತಾರೆ ವಾಹನ ಸವಾರರು.

ತರೀಕೆರೆ: ಕಡಿಮೆಯಾದ ಅಪಘಾತ

ಪಟ್ಟಣದ ಬಿ.ಎಚ್.ರಸ್ತೆಯ ಸುಮಾರು 5 ಕಿ.ಮೀ ವ್ಯಾಪ್ತಿಯಲ್ಲಿ ಈ ಹಿಂದೆ ಹಲವು ಅಪಘಾತಗಳು ಸಂಭವಿಸುತ್ತಿದ್ದವು. ಈಗ ರಾಷ್ಟ್ರೀಯ ಹೆದ್ದಾರಿ 206ರ ಬೈಪಾಸ್ ಕಾಮಗಾರಿ ಶೇ 70 ರಷ್ಟು ಪೂರ್ಣಗೊಂಡಿರುವುದರಿಂದ ತರೀಕೆರೆ ಪಟ್ಟಣಕ್ಕೆ ಬರುವ ವಾಹನಗಳ ಸಂಖ್ಯೆ ಕಡಿಮೆಯಾಗಿದೆ. ಮಾನಸ ಕಾಲೇಜು ಮುಂಭಾಗ ರಸ್ತೆಯನ್ನು ಅಪಘಾತ ವಲಯ (ಬ್ಲಾಕ್ ಸ್ಪಾಟ್) ಎಂದು ಗುರುತಿಸಲಾಗಿದೆ. ಇಲ್ಲಿ ಆಗಾಗ ಅಪಘಾತಗಳು ಸಂಭವಿಸಿ ಕೆಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಅರಮನೆ ಹೋಟೆಲ್ ಮುಂಭಾಗದ ರಸ್ತೆಯಲ್ಲಿ ಈ ಹಿಂದೆ ಬ್ಲಾಕ್ ಸ್ಪಾಟ್ ಎಂದು ಗುರುತಿಸಲಾಗಿತ್ತು. ಆದರೆ ಇತ್ತೀಚಿಗೆ ಅಪಘಾತಗಳು ಕಡಿಮೆಯಾಗಿವೆ ಎಂದು ಪೊಲೀಸರು ಹೇಳುತ್ತಾರೆ. ಲಕ್ಕವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲಕ್ಕವಳ್ಳಿ ಗ್ರಾಮದಿಂದ ಸಮೀಪದಲ್ಲಿರುವ ಜಂಗಲ್ ರೆಸಾರ್ಟ್ ಸರ್ಕಲ್ ಬಳಿ ಮತ್ತು ಮಾರಿ ದಿಬ್ಬದ ಬಳಿ ಇರುವ ಬರಳ್ಳದ ಸೇತುವೆ ಬಳಿ ಇರುವ ಜಾಗವನ್ನು ಬ್ಲಾಕ್ ಸ್ಪಾಟ್ ಎಂದು ಗುರುತಿಸಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ಸ್ಥಳಗಳಲ್ಲೂ ಮುಂಜಾಗ್ರತೆಯ ಕ್ರಮದಿಂದ ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆ. ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬ್ಲಾಕ್ ಸ್ಪಾಟ್ ಗುರುತಿಸಲಾಗಿಲ್ಲ. ಆದರೆ ಈ ಠಾಣಾ ವ್ಯಾಪ್ತಿಯಲ್ಲಿ ಪ್ರವಾಸಿ ತಾಣಗಳಾದ ಕೆಮ್ಮಣ್ಣುಗುಂಡಿ ಕಲ್ಲತ್ತಿಗಿರಿ ಹೆಬ್ಬೆ ಜಲಪಾತ ಸ್ಥಳಗಳಿವೆ. ಇಲ್ಲಿಗೆ ಬರುವ ಕೆಲ ಪ್ರವಾಸಿಗರ ಅಜಾಗರೂಕತೆಯಿಂದ ಅಪಘಾತ ಸಂಭವಿಸುತ್ತಿವೆ. ಪೊಲೀಸ್ ಇಲಾಖೆ ಕೈಗೊಂಡಿರುವ ಕ್ರಮದಿಂದ ಇತ್ತೀಚಿಗೆ ಅಪಘಾತಗಳು ಕಡಿಮೆಯಾಗಿವೆ.

ನರಸಿಂಹರಾಜಪುರ: ಕಿರಿದಾದ ಸೇತುವೆ; ಅಪಘಾತ ಹೆಚ್ಚಳ

ತಾಲ್ಲೂಕಿನ ವ್ಯಾಪ್ತಿಯಲ್ಲಿ ಪದೇ ಪದೇ ಅಪಘಾತ ಸಂಭವಿಸುವ ಸ್ಥಳಗಳನ್ನು ಪೊಲೀಸ್ ಇಲಾಖೆ ಗುರುತಿಸಿದೆ. ಪ್ರಮುಖವಾಗಿ ಈ ಹಿಂದೆ ತಾಲ್ಲೂಕಿನ ಬಿ.ಎಚ್.ಕೈಮರದ ಸಮೀಪದ ಕಬ್ಬಿಣ ಸೇತುವೆಯ ಬಳಿ ಇರುವ ತಿರುವು ಶಾಂತಿಭವನ ಕರಗುಂದ ಸ್ಥಳಗಳನ್ನು ಅಪಘಾತ ಸಂಭವಿಸುವ ಸ್ಥಳಗಳೆಂದು ಗುರುತಿಸಲಾಗಿತ್ತು. ಈ ಸ್ಥಳಗಳಲ್ಲಿ ಅಪಘಾತ ಸಂಭವಿಸುವ ಪ್ರಮಾಣ ಕಡಿಮೆಯಾಗಿರುವುದರಿಂದ ಇವುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಮುತ್ತಿನಕೊಪ್ಪದ ಸಂಜೀವಿನಿ ಶಾಲೆ ಸಮೀಪದಿಂದ ಹಾದು ಹೋಗು ಮುಖ್ಯರಸ್ತೆಯ ಸ್ಥಳವನ್ನು ಪದೇ ಪದೇ ಅಪಘಾತ ಸಂಭವಿಸುವ ಸ್ಥಳ ಎಂದು ಈಗ ಗುರುತು ಮಾಡಲಾಗಿದೆ. ಈ ಭಾಗದಲ್ಲಿ ಹರಿಯುವ ಹಳ್ಳಕ್ಕೆ ನಿರ್ಮಿಸಿರುವ ಸೇತುವೆ ಕಿರಿದಾಗುವುದರಿಂದ ಅಪಘಾತಗಳು ಸಂಭವಿಸುತ್ತಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಪೂರಕ ಮಾಹಿತಿ: ಕೆ.ವಿ.ನಾಗರಾಜ್, ಕೆ.ನಾಗರಾಜ್, ಎನ್.ಸೋಮಶೇಖರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.