ಜಯಪುರ(ಬಾಳೆಹೊನ್ನೂರು): ತಾಯಿ ಬುದ್ಧಿ ಹೇಳಿದಕ್ಕೆ ಮನನೊಂದು ಏಳನೇ ತರಗತಿ ವಿದ್ಯಾರ್ಥಿನಿ ವೇಲ್ಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಇಲ್ಲಿಗೆ ಸಮೀಪದ ಬಸರೀಕಟ್ಟೆ ಹೊನ್ನಗುಂಡಿಯಲ್ಲಿ ನಡೆದಿದೆ.

ಕೊಗ್ರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಸುಪ್ರಿತಾ (12) ಮೃತಪಟ್ಟವರು.

ಮಧ್ಯಾಹ್ನ ಊಟ ಮಾಡುವಾಗ ತಟ್ಟೆ ಕೈಯಿಂದ ಜಾರಿ ಬಿದ್ದು ಅನ್ನ ಚೆಲ್ಲಿತ್ತು. ಟಿ.ವಿ ನೋಡುವುದನ್ನು ಬಿಟ್ಟು ಸರಿಯಾಗಿ ಓದ್ಕೊ, ಅನ್ನ ಚೆಲ್ಲಿದ್ದನ್ನು ಸ್ವಚ್ಛ ಮಾಡು ಎಂದು ಬುದ್ಧಿ ಹೇಳಿ ಅಂಗಡಿ ಕೆಲಸಕ್ಕೆ ತೆರಳಿದ್ದ ವೇಳೆ ಮನೆಯಲ್ಲಿ ವೇಲು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತಳ ತಾಯಿ ಸರೋಜ ಜಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಠಾಣಾಧಿಕಾರಿ ರವೀಶ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.