ಚಿಕ್ಕಮಗಳೂರು: ಶಿವಮೊಗ್ಗ–ನರಸಿಂಹರಾಜಪುರ–ಶೃಂಗೇರಿ ಹೊಸ ರೈಲು ಮಾರ್ಗ, ಹಲವು ರೈಲು ನಿಲ್ದಾಣಗಳ ಮೇಲ್ದರ್ಜೆ ಸೇರಿ ರೈಲ್ವೆಯಿಂದ ಹಲವು ನಿರೀಕ್ಷೆಗಳನ್ನು ಜಿಲ್ಲೆಯ ಜನ ಹೊಂದಿದ್ದಾರೆ.

ಭದ್ರಾ ಜಲಾಶಯ ನಿರ್ಮಾಣಕ್ಕೂ ಮುನ್ನ ನರಸಿಂಹರಾಜಪುರಕ್ಕೆ ತರಕೆರೆಯಿಂದ ಎನ್.ಆರ್.ಪುರಕ್ಕೆ ಸಮೀಪದ ರೈಲು ಮಾರ್ಗ ಇತ್ತು. ಜಲಾಶಯ ನಿರ್ಮಾಣವಾದ ಬಳಿಕ ಈ ರೈಲು ಮಾರ್ಗ ಮುಳುಗಡೆಯಾಗಿದ್ದು, ನರಸಿಂಹರಾಜಪುರಕ್ಕೆ ರೈಲು ಮಾರ್ಗವೇ ಇಲ್ಲವಾಗಿದೆ.

ಶಿವಮೊಗ್ಗದಿಂದ ಶೃಂಗೇರಿಗೆ ಎನ್.ಆರ್.ಪುರ ಮಾರ್ಗವಾಗಿ ರೈಲು ಮಾರ್ಗ ನಿರ್ಮಿಸಲು ಈ ಭಾಗದ ಜನ ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಇದ್ದಾರೆ. ಎಚ್.ಡಿ.ದೇವೇಗೌಡರು ಪ್ರಧಾನಿ ಆಗಿದ್ದಾಗಿಂದ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಅದರ ಫಲವಾಗಿ ಸಮೀಕ್ಷೆ ಹಣ ನಿಗದಿ ಮಾಡಲಾಗಿತ್ತು. ಕೆ.ಎಚ್.ಮುನಿಯಪ್ಪ ರೈಲ್ವೆ ಸಚಿವರಾಗಿದ್ದ ಅವಧಿಯಲ್ಲೂ ಭರವಸೆ ದೊರೆತಿತ್ತು. ಬಳಿಕವೂ ಪ್ರಯತ್ನ ನಿರಂತರವಾಗಿ ನಡೆಯುತ್ತಲೇ ಇದೆ. ಆದರೆ, ಹೊಸ ಮಾರ್ಗದ ಸಮೀಕ್ಷೆಯೇ ಇನ್ನೂ ಆರಂಭವಾಗಿಲ್ಲ.

ಈ ಬಾರಿಯಾದರೂ ಕೇಂದ್ರ ಸರ್ಕಾರ ಈ ಹೊಸ ಯೋಜನೆಗೆ ಬಜೆಟ್ನಲ್ಲಿ ಹಣ ನಿಗದಿ ಮಾಡಬೇಕು. ಶಿವಮೊಗ್ಗದಿಂದ ಶೃಂಗೇರಿಗೆ ಎನ್.ಆರ್.ಪುರ ಮಾರ್ಗವಾಗಿಯೇ ರೈಲು ಸಂಚಾರ ಮಾಡುವಂತೆ ಆಗಬೇಕು. ತೀರ್ಥಹಳ್ಳಿ ಮಾರ್ಗವಾಗಿ ಶೃಂಗೇರಿ ಸಂಪರ್ಕಿಸುವ ಪ್ರಸ್ತಾಪ ಕೈಬಿಡಬೇಕು ಎಂಬುದು ಎನ್.ಆರ್.ಪುರ ಭಾಗದ ಜನರ ಒತ್ತಾಯ.

ಚಿಕ್ಕಮಗಳೂರು–ಕಡೂರು ಮಾರ್ಗದಲ್ಲಿ ಅಲ್ಲಲ್ಲಿ ರಸ್ತೆಗಳು ಹಾದು ಹೋಗುತ್ತಿವೆ. ರೈಲ್ವೆ ಮೇಲ್ಸೇತುವೆ ನಿರ್ಮಾಣ ಮಾಡಬೇಕು ಎಂಬ ಬೇಡಿಕೆ ಗ್ರಾಮೀಣ ಜನರಲ್ಲಿದೆ. ಅವುಗಳಿಗೂ ಹಣ ನಿಗದಿ ಮಾಡಬೇಕು ಎಂಬುದು ಆ ಭಾಗದ ರೈತರ ಆಗ್ರಹ.

ಇನ್ನು ಚಿಕ್ಕಮಗಳೂರು–ಬೇಲೂರು–ಹಾಸನ ಸಂಪರ್ಕ ಕಲ್ಪಿಸುವ ರೈಲ್ವೆ ಯೋಜನೆಗೆ ನಿಗದಿ ಮಾಡಿದ್ದ ಅನುದಾನ ಕಡಿಮೆ ಮಾಡುವ ಪ್ರಸ್ತಾಪವನ್ನು ಕೈಬಿಡಬೇಕು. ಅಷ್ಟೇ ಅನುದಾನವನ್ನು ಬಜೆಟ್ನಲ್ಲಿ ನಿಗದಿ ಮಾಡಬೇಕು. ಆ ಮೂಲಕ ಯೋಜನೆ ತ್ವರಿತವಾಗಿ ಪೂರ್ಣಗೊಳಿಸಬೇಕು ಎಂಬುದು ಚಿಕ್ಕಮಗಳೂರು ಜನರ ಆಗ್ರಹ. ಈ ಸಂಬಂದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೂಡ ರೈಲ್ವೆ ಸಚಿವರಿಗೆ ಪತ್ರ ಬರೆದಿದ್ದಾರೆ.