ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಚಿಕ್ಕಮಗಳೂರು: ಶೋಲಾ ಕಾಡಿಗೆ ಕಾಳ್ಗಿಚ್ಚಿನ ಭಯ

ಹುಲ್ಲುಗಾವಲಿಗೆ ಪದೇ ಪದೇ ಕಿಡಿಗೇಡಿಗಳಿಂದ ಬೆಂಕಿ: ತಡೆಗಟ್ಟಲು ಅರಣ್ಯ ಇಲಾಖೆ ಸಾಹಸ
Published : 24 ಫೆಬ್ರುವರಿ 2025, 8:10 IST
Last Updated : 24 ಫೆಬ್ರುವರಿ 2025, 8:10 IST
ಫಾಲೋ ಮಾಡಿ
Comments
ಶೋಲಾ ಕಾಡಿಗೆ ಬೆಂಕಿ ಹರಡುವುದನ್ನು ತಡೆಯಲು ಹುಲ್ಲುಗಾವಲು ಸುಟ್ಟು ಬೆಂಕಿ ಗೆರೆಗಳನ್ನು ಅರಣ್ಯ ಇಲಾಖೆ ನಿರ್ಮಿಸಿರುವುದು
ಶೋಲಾ ಕಾಡಿಗೆ ಬೆಂಕಿ ಹರಡುವುದನ್ನು ತಡೆಯಲು ಹುಲ್ಲುಗಾವಲು ಸುಟ್ಟು ಬೆಂಕಿ ಗೆರೆಗಳನ್ನು ಅರಣ್ಯ ಇಲಾಖೆ ನಿರ್ಮಿಸಿರುವುದು
ಕಿಡಿಗೇಡಿತನ ತಪ್ಪು ತಿಳುವಳಿಕೆ ಕಾರಣ
ಕಾಳ್ಗಿಚ್ಚು ಬಹುತೇಕ ಕಿಡಿಗೇಡಿಗಳ ಕೃತ್ಯದಿಂದಲೇ ಸಂಭವಿಸುತ್ತಿದೆ. ಅದಕ್ಕೆ ತಪ್ಪು ತಿಳುವಳಿಕೆಗಳೇ ಹೆಚ್ಚಿನದಾಗಿ ಕಾರಣ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ವನ್ಯಜೀವಿ ಪ್ರಿಯರು. ಬೆಂಕಿ ಹಾಕಿದರೆ ಹೊಸದಾಗಿ ಹುಲ್ಲುಗಾವಲು ಚೆನ್ನಾಗಿ ಚಿಗರಲಿದೆ ಎಂಬ ತಪ್ಪು ಅಭಿಪ್ರಾಯ ಇದೆ. ಬೆಂಕಿ ಹಾಕಿದರೆ ನಮಗೆ ಒಳ್ಳೆಯದಾಗಲಿದೆ ಎಂಬ ತಪ್ಪು ಗ್ರಹಿಕೆಯೂ ಇದೆ. ಆದ್ದರಿಂದ ಬೆಂಕಿ ಹಾಕಿ ಹೋಗುತ್ತಾರೆ. ಇದು ಕಾಡು ಮತ್ತು ಕಾಡು ಪ್ರಾಣಿಗಳಿಗೆ ತೊಂದರೆ ತಂದೊಡ್ಡುತ್ತಿದೆ ಎಂದು ಹೇಳುತ್ತಾರೆ. ‘ಎಲ್ಲಿಯೂ ತಾನಾಗಿಯೇ ಬೆಂಕಿ ಹೊತ್ತಿಕೊಂಡಿರುವ ಉದಾಹರಣೆ ಇಲ್ಲ. ಬಹುತೇಕ ಕಡೆ ಬೇಕೆಂದೆ ಹಚ್ಚಿರುವ ಬೆಂಕಿಯಿಂದ ಕಾಳ್ಗಿಚ್ಚು ಹೊತ್ತಿಕೊಂಡಿದೆ. ಜಾಗೃತಿ ಮೂಡಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದೇವೆ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ನೀರಿನ ಮೂಲಕ್ಕೂ ತೊಂದರೆ
ಹುಲ್ಲುಗಾವಲಿಗೆ ಬೆಂಕಿ ಬೀಳುವುದರಿಂದ ನೀರಿನ ಮೂಲಕ್ಕೂ ತೊಂದರೆಯಾಗಲಿದೆ. ಮುಂದಿನ ದಿನಗಳಲ್ಲಿ ಝರಿಗಳು ಬತ್ತಲು ಇದು ಕಾರಣವಾಗುವ ಸಾಧ್ಯತೆ ಇದೆ ಎಂದು ಪರಿಸರ ಪ್ರೇಮಿ ಸಿ.ವಿ.ಭರತ್ ಹೇಳಿದರು. ನೀರು ಹಿಡಿದಿಟ್ಟುಕೊಂಡು ನಂತರ ನೀರು ಜಿನುಗಿಸುವ ಶಕ್ತಿಯನ್ನು ಹುಲ್ಲುಗಾವಲು ಹೊಂದಿವೆ. ಇವುಗಳು ನಾಶವಾದರೆ ನೀರಿನ ಒರತೆಗೂ ತೊಡಕಾಗಲಿದೆ ಎಂದು ತಿಳಿಸಿದರು. ಮಳೆಗಾಲದಲ್ಲಿ ಮಣ್ಣಿನ ಸವಕಳಿ ತಡೆಯುವ ಶಕ್ತಿಯನ್ನು ಹುಲ್ಲುಗಾವಲು ಹೊಂದಿವೆ. ಹುಲ್ಲುಗಾವಲು ಭಸ್ಮವಾಗಿರುವ ಕಡೆಗಳಲ್ಲಿ ಮತ್ತೆ ಹುಲ್ಲು ಚಿಗುರುವುದು ತಡವಾಗುತ್ತದೆ. ಅಲ್ಲಿಯ ತನಕ ಮಣ್ಣಿನ ಸವಕಳಿ ಹೆಚ್ಚಾಗುವುದರಿಂದ ತೊಂದರೆಗಳೇ ಜಾಸ್ತಿ ಎಂದರು. ಇನ್ನು ಹುಲ್ಲುಗಾವಲಿನಲ್ಲಿಯೂ ಸಣ್ಣ ಸಣ್ಣ ವನ್ಯಜೀವಿಗಳು ವಾಸ ಮಾಡುತ್ತಿವೆ. ಮೂಗಿಲಿ ಕಾಡುಮೊಲ ಮುಂಗುಸಿ ಹಾವು ಸೇರಿ ಸಣ್ಣ ಸಣ್ಣ ಜೀವಿಗಳು ಬೆಂಕಿಯಲ್ಲಿ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತವೆ. ಇವೆಲ್ಲವೂ ಇದ್ದರೆ ಮಾತ್ರ ವನ ಮತ್ತು ವನ್ಯಜೀವಿಗಳ ಸಮತೋಲನ ಇರಲಿದೆ. ಎಲ್ಲವನ್ನೂ ಕಾಪಾಡಿಕೊಳ್ಳಬೇಕಿದೆ ಎಂದು ಹೇಳಿದರು. ಅರಣ್ಯ ಇಲಾಖೆ ಅಧಿಕಾರಿಗಳು ಸಂಕ್ರಾಂತಿಗೆ ಮೊದಲೇ ಬೆಂಕಿ ಗೆರೆಗಳನ್ನು ನಿರ್ಮಿಸಬೇಕು. ಪದೇ ಪದೇ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರೆ ಕೆಳ ಹಂತದ ಸಿಬ್ಬಂದಿ ಎಚ್ಚರಿಕೆಯಿಂದ ಕೆಲಸ ಮಾಡುತ್ತಾರೆ. ಬೆಂಕಿ ಹೊತ್ತಿರುವ ಮಾಹಿತಿ ಸಿಕ್ಕಿದ ಕೂಡಲೇ ಹಿರಿಯ ನಂದಿಸಲು ಸಿಬ್ಬಂದಿಯ ಜತೆಗೆ ಹಿರಿಯ ಅಧಿಕಾರಿಗಳು ತೆರಳಬೇಕು. ಸ್ಥಳದಲ್ಲೇ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇರುವ ಅಧಿಕಾರಿಗಳಿದ್ದರೆ ಬೆಂಕಿ ನಂದಿಸುವುದು ಸುಲಭವಾಗುತ್ತದೆ ಎಂದರು.
ಶೋಲಾ ಕಾಡಿಗೆ ಬೆಂಕಿ ತಗುಲದಂತೆ ಕ್ರಮ
ಕಾಳ್ಗಿಚ್ಚು ತಡೆಯಲು ಎಲ್ಲೆಡೆ ಬೆಂಕಿ ಗೆರೆಗಳನ್ನು ನಿರ್ಮಿಸಲಾಗಿದೆ. ಅದ್ದರಿಂದ ಶೋಲಾ ಕಾಡುಗಳಿಗೆ ಬೆಂಕಿ ಹರಡುವುದು ತಪ್ಪಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ರಸ್ತೆ ಬದಿಯಲ್ಲಿ ಶೋಲಾ ಕಾಡಿನ ತುದಿಗಳಲ್ಲಿ ಬೆಂಕಿ ಗೆರೆ ನಿರ್ಮಿಸಲಾಗುತ್ತಿದೆ. ಕೆಲವರು ಕಡಿದಾದ ಪ್ರದೇಶಗಳಿಗೆ ಹತ್ತಿ ಬೆಂಕಿ ಹೊತ್ತಿಸುತ್ತಿದ್ದಾರೆ. ಎಷ್ಟೇ ಜಾಗೃತಿ ಮೂಡಿಸಿದರೂ ಬೆಂಕಿ ಹಚ್ಚುವುದು ನಿಂತಿಲ್ಲ ಎಂದರು. ಅರಣ್ಯ ಸಿಬ್ಬಂದಿ ನಿರಂತರವಾಗಿ ಗಮನ ಹರಿಸುತ್ತಿದ್ದಾರೆ. ರಸ್ತೆ ಬದಿಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಕೂಡ ಸಹಕಾರ ನೀಡುತ್ತಿದ್ದಾರೆ. ಕಾಳ್ಗಿಚ್ಚು ತಡೆಗೆ ಕಾರ್ಯಪಡೆ ರಚಿಸಲಗಿದೆ. ಬೆಂಕಿ ಗಮನಿಸುವ ವಾಚರ್‌ಗಳು ಕೂಡ ಹೆಚ್ಚಿನ ಗಮನ ಹರಿಸಿದ್ದಾರೆ. ಕಿಡಿಗೇಡಿಗಳು ಕಾಡಿನ ಬಗ್ಗೆ ಅರ್ಥ ಮಾಡಿಕೊಂಡರೆ ಸಮಸ್ಯೆ ಕಡಿಮೆಯಾಗಲಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT