ಶೃಂಗೇರಿ: ತಾಲ್ಲೂಕಿನ ಎಸ್.ಕೆ ಬಾರ್ಡರ್ನ ಗಂಗಾ ಮೂಲದಲ್ಲಿ ಉಗಮಗೊಳ್ಳುವ ತುಂಗಾ ನದಿಯು ಪಟ್ಟಣದ ಜನರಿಗೆ ಆಸರೆಯಾಗಿದೆ.

ಪಟ್ಟಣದಲ್ಲಿ ತಾಂತ್ರಿಕ ಕಾರಣ ಹೊರತುಪಡಿಸಿ, ವರ್ಷಪೂರ್ತಿ ಕುಡಿಯುವ ನೀರಿಗೆ ಸಮಸ್ಯೆ ಉದ್ಭವಿಸುವುದಿಲ್ಲ. ಆದರೆ, ಶುದ್ಧೀಕರಣ ಘಟಕ ಇದ್ದರೂ ಅದರ ಕ್ಲೋರಿನೇಟರ್ ಯಂತ್ರ ಹಾಳಾಗಿದೆ.

ಪಟ್ಟಣದಲ್ಲಿ 1,400ಕ್ಕೂ ಹೆಚ್ಚು ಮನೆಗಳು ಮತ್ತು ಎರಡು ಗ್ರಾಮ ಪಂಚಾಯಿತಿಯ ಕೆಲವು ಪ್ರದೇಶಗಳಿಗೂ ಪ್ರತಿದಿನ 7 ಲಕ್ಷ ಲೀಟರ್ವರೆಗೂ ನೀರು ಪೂರೈಕೆ ಮಾಡಲಾಗುತ್ತಿದೆ. ಅಗತ್ಯ ಪ್ರಮಾಣದಲ್ಲಿ ನೀರು ಪೂರೈಕೆಯಾಗುತ್ತಿದ್ದರೂ, ಬಾಡಿಗೆ ಮನೆಗಳಲ್ಲಿ ವಾಸಿಸುವವರಿಗೆ, ಅಂಗಡಿ, ವಾಣಿಜ್ಯ ಮಳಿಗೆಗಳಲ್ಲಿ ಕುಡಿಯುವ ನೀರಿನ ಉದ್ದೇಶಕ್ಕಾಗಿ ಪಟ್ಟಣದಲ್ಲಿ ಶುದ್ಧಗಂಗಾ ನೀರಿನ ಘಟಕ ಅಗತ್ಯ ಇದೆ. ಕುರುಬಕೇರಿಯಲ್ಲಿ ಶುದ್ಧಗಂಗಾ ನೀರಿನ ಘಟಕ ಸ್ಥಾಪಿಸಿದ್ದರು ಅದು ಉಪಯೋಗಕ್ಕೆ ಬರುತ್ತಿಲ್ಲ.

ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿಯ ಶಾರದಾ ಮಠದ ಹತ್ತಿರ ತುಂಗಾ ನದಿಯಿಂದ ನೀರನ್ನು ಎತ್ತಲು ₹8 ಲಕ್ಷ ವೆಚ್ಚದಲ್ಲಿ ಬಾವಿ ನಿರ್ಮಿಸಿ ಅದರಿಂದ ಈಶ್ವರಗಿರಿಯಲ್ಲಿ ಮತ್ತು ಹನುಮಂತ ನಗರದಲ್ಲಿ ಟ್ಯಾಂಕ್ಗಳಲ್ಲಿ ಶೇಖರಣೆ ಮಾಡಿ ಪಟ್ಟಣದ ಜನರಿಗೆ ನೀರು ಒದಗಿಸಲಾಗುತ್ತಿದೆ.

ಶೇಖರಣಾ ಘಟಕದಲ್ಲಿ ಬ್ಲೀಚಿಂಗ್ ಮತ್ತು ಆಲಂ ಬಳಸಿ ನೀರನ್ನು ಶುದ್ಧಿಕರಿಸಲಾಗುತ್ತಿದೆ. ಆದರೆ, ಕುಡಿಯುವ ನೀರಿನ ಶುದ್ಧಿಕರಣ ಘಟಕದಲ್ಲಿ ಕ್ಲೋರಿನೇಟರ್ ಯಂತ್ರ ಹಾಳಾಗಿದೆ. ಇದರಿಂದ ನೀರು ಪರಿಪೂರ್ಣ ಶುದ್ಧ ಆಗುವುದಿಲ್ಲ ಮತ್ತು ಟ್ಯಾಂಕ್ ಹಾಳಾಗಿದ್ದು, ಇದರಿಂದ ಕಾಯಿಲೆ ಹರಡುವ ಸಂಭವ ಇದೆ. ಪಟ್ಟಣದ ಎರಡು ಕಡೆ ಟ್ಯಾಂಕ್ ನಿರ್ಮಿಸಿ, ದಿನದ 16ಗಂಟೆ ನೀರು ಪೂರೈಕೆ ಮಾಡಿ, ಪಟ್ಟಣದ 11 ವಾರ್ಡ್ ಮತ್ತು ಎರಡು ಗ್ರಾಮ ಪಂಚಾಯಿತಿಗಳಿಗೆ ನೀರು ಪೂರೈಸಲಾಗುತ್ತದೆ. ಅಂಗಡಿ, ಹೋಟೆಲ್ಗಳಿಗೆ ಈ ನೀರನ್ನು ಬಳಕೆ ಮಾಡಲಾಗುತ್ತಿದೆ.

ವಿದ್ಯುತ್ ಸಮಸ್ಯೆಯಿಂದ ಕುಡಿಯುವ ನೀರು ಶೇಖರಿಸಲು ಹಾಗೂ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿತ್ತು. ಕುಡಿಯುವ ನೀರಿನ ಶೇಖರಣ ಘಟಕವೂ ಶುದ್ಧವಾಗಿದ್ದು, ಆಲಂ ಬಳಸಿ ನೀರು ಶುದ್ಧಿಕರಣ ಮಾಡುವುದರಿಂದ ಟ್ಯಾಂಕಿನ ಫಿಲ್ಟರ್ ಬೇಡ್ನ್ನು ಪ್ರತಿನಿತ್ಯ ಸ್ವಚ್ಛಗೊಳಿಸಬೇಕು. ಒಂದು ಮಳೆ ಬಂದರೆ ವಿದ್ಯಾರಣ್ಯಪುರದ ಯಕ್ಕನಹಳ್ಳದಲ್ಲಿ ನೀರು ಕೆಂಪಾಗಿ ಹರಿಯುತ್ತದೆ. ಆ ನೀರು ಈಗ ಪಟ್ಟಣಕ್ಕೆ ಸರಬರಾಜು ಮಾಡುವ ಬಾವಿಯ ಹತ್ತಿರ ಬರುತ್ತದೆ. ಅದೇ ನೀರು ಪಟ್ಟಣಕ್ಕೆ ಸರಬರಾಜು ಆಗುತ್ತದೆ ಎಂದು ಪಟ್ಟಣದ ನಿವಾಸಿ ಪ್ರಶಾಂತ್ ಆರೋಪಿಸಿದರು.

ಪಟ್ಟಣದಲ್ಲಿ ಸಮಸ್ಯೆ ಇಲ್ಲ

ಕೇಂದ್ರ ಮತ್ತು ರಾಜ್ಯ ಸರ್ಕಾರದ ‘ಅಮೃತ್ ನಗರ ನಿರ್ಮಲ್ ನಗರ ಯೋಜನೆ’ಯಡಿ ₹23 ಕೋಟಿ ವೆಚ್ಚದಲ್ಲಿ ಕಾಮಗಾರಿಯು ಪಟ್ಟಣದ ಎಲ್ಲ ಭಾಗಗಳಲ್ಲಿ ಪೈಪ್ಲೈನ್, ವಿದ್ಯಾರಣ್ಯಪುರದ ಯಕ್ಕನಹಳ್ಳದ ಮೇಲ್ಭಾಗದಲ್ಲಿ ಪಂಪ್ಸೆಟ್ ಸ್ಥಾವರದ ಸ್ಥಾಪನೆ ಮತ್ತು ನೀರು ಶುದ್ಧಿಕರಣ ಯಂತ್ರದ ಕಾಮಗಾರಿ ಆರಂಭಗೊಂಡಿದೆ. ಈಗಾಗಲೇ ನಗರೋತ್ಥಾನದಲ್ಲಿ ₹65 ಲಕ್ಷದ ಕೆಲಸ ಮುಗಿದಿದೆ. ಉಳಿದ ₹3.60 ಕೋಟಿ ವೆಚ್ಚದ ಕಾಮಗಾರಿಗೆ ಅನುದಾನ ಬಿಡುಗಡೆಗೊಳ್ಳಬೇಕು. ಪ್ರಸ್ತತ ಪಟ್ಟಣದಲ್ಲಿ ನೀರಿನ ಸಮಸ್ಯೆ ಇಲ್ಲ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಚ್.ಎಸ್ ವೇಣುಗೋಪಾಲ್ ಹೇಳಿದರು.

ಅವೈಜ್ಞಾನಿಕ ಕಾಮಗಾರಿ; ಆಕ್ರೋಶ

ತಾಲ್ಲೂಕಿನ 9 ಗ್ರಾ.ಪಂಗಳಲ್ಲಿ ಕೇಂದ್ರ ಸರ್ಕಾರದ ಜಲ್ಜೀವನ್ ಯೋಜನೆಯಡಿ ನಡೆಸುತ್ತಿರುವ ಕಾಮಗಾರಿಯೂ ಅವೈಜ್ಞಾನಿಕವಾಗಿದ್ದು, ನೀರಿನ ಮೂಲ ಗುರುತಿಸದೆ ಪೈಪ್ಲೈನ್ ಮತ್ತು ನೀರಿನ ಟ್ಯಾಂಕ್ ನಿರ್ಮಿಸಿದ್ದಾರೆ. ಮೆಣಸೆ, ಕೂತುಗೋಡು, ನೆಮ್ಮಾರ್, ಮರ್ಕಲ್, ಬೇಗಾರ್ ಪಂಚಾಯಿತಿಗಳು ಮತ್ತು ಇನ್ನಿತರ ಪಂಚಾಯಿತಿಗಳಲ್ಲಿ ಬಾವಿ ತೆಗೆದು ಅದರಲ್ಲಿ ಬಂಡೆ ಸಿಕ್ಕಿದ್ದರಿಂದ ವ್ಯರ್ಥವಾಗಿದೆ. ದೊಡ್ಡದಾದ ಟ್ಯಾಂಕ್ ಮತ್ತು ಪೈಪ್ಲೈನ್ ನಿರ್ಮಿಸಿ ಎಂಜಿನಿಯರ್ ಮತ್ತು ಗುತ್ತಿಗೆದಾರರು ಅನುದಾನ ಬಿಡುಗಡೆಗಡೆಗೊಳಿಸಿಕೊಂಡು ಭ್ರಷ್ಟಾಚಾರ ಎಸಗಿದ್ದಾರೆ. ಕೆಡಿಪಿ ಸಭೆಗಳಲ್ಲಿ ಅನುದಾನ ಬಿಡುಗಡೆಗೊಳಿಸಬಾರದು ಎಂದು ಶಾಸಕರು ಎಂಜಿನಿಯರ್ಗೆ ಸೂಚನೆ ನೀಡಿದ್ದರು ಅದನ್ನು ಅವರು ತಳ್ಳಿ ಹಾಕಿದ್ದಾರೆ ಎಂದು ಕೆ.ಡಿ.ಪಿ ನಾಮ ನೀರ್ದೆಶನ ಸದಸ್ಯ ಪುಟ್ಟಪ್ಪ ಹೆಗ್ಡೆ ಆಕ್ರೋಶದಿಂದ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.