ಪಠ್ಯದ ಜೊತೆಗೆ ಮಾನವೀಯ ಮೌಲ್ಯ ರೂಢಿಸಿ: ಎಸ್.ಎಲ್.ಭೋಜೇಗೌಡ

7

ಪಠ್ಯದ ಜೊತೆಗೆ ಮಾನವೀಯ ಮೌಲ್ಯ ರೂಢಿಸಿ: ಎಸ್.ಎಲ್.ಭೋಜೇಗೌಡ

Published:
Updated:
Deccan Herald

ಚಿಕ್ಕಮಗಳೂರು: ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಮಾನವೀಯ ಮೌಲ್ಯ ರೂಢಿಸುವುದು ಅಗತ್ಯ ಎಂದು ವಿಧಾನಪರಿಷತ್ತಿನ ಸದಸ್ಯ ಎಸ್.ಎಲ್।.ಭೋಜೇಗೌಡ ಸಲಹೆ ನೀಡಿದರು.

ಜಿಲ್ಲಾಡಳಿತದ ವತಿಯಿಂದ ನಗರದ ಒಕ್ಕಲಿಗರ ಸಮುದಾಯಭವನದಲ್ಲಿ ಬುಧವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಈ ಹಿಂದೆ ಗುರುಕುಲ, ಮಠಗಳು, ಋಷಿಮುನಿಗಳ ಕುಠೀರದಲ್ಲಿ ಶಿಕ್ಷಣದ ಜೊತೆಗೆ ಬದುಕುವ ದಾರಿ, ಸಂಸ್ಕೃತಿ, ಮಾನವೀಯ ಮೌಲ್ಯ, ಸೇವಾಮನೋಭಾವ ರೂಢಿಸಲಾಗುತ್ತಿತ್ತು. ಆದರೆ ಈಗಿನ ಶಿಕ್ಷಣ ಅಂಕಗಳಿಗೆ ಸೀಮಿತವಾಗಿದೆ. ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ ಎಂದು ವಿಷಾಧಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಈಚೆಗೆ ಬೆಂಗಳೂರಿನಲ್ಲಿ ಸಭೆ ನಡೆಸಲಾಯಿತು. ಅದರಲ್ಲಿ 25 ವಿಷಯಗಳ ಬಗ್ಗೆ ಚರ್ಚಿಸಲಾಯಿತು. ವೃತ್ತಿ ಆಧಾರಿತ ಕೋರ್ಸಿನ ಮೇಲೆ ಶಿಕ್ಷಕರಾದವರು, ನಿವೃತ್ತಿ ಅಂಚಿನಲ್ಲಿ ಇದ್ದಾರೆ. ಅಂಥವರನ್ನು ಬಿ.ಎಡ್ ತರಬೇತಿಗೆ ಕಳುಹಿಸದಂತೆ ಆಕ್ಷೇಪಿಸಿದ ನಿಮಿತ್ತ ಅದನ್ನು ಕೈಬಿಡಲಾಗಿದೆ ಎಂದರು.

ಚಿಕ್ಕಮಗಳೂರು, ಶಿವಮೊಗ್ಗ, ಮಂಗಳೂರನ್ನು ಗುಡ್ಡಗಾಡು ಪ್ರದೇಶಗಳೆಂದು ಪರಿಗಣಿಸಬೇಕು. ಶಿಕ್ಷಕ ಪತಿ-ಪತ್ನಿ ಬೇರೆ ಬೇರೆ ಕಡೆ ಐದು ವರ್ಷಗಳು ಕಾರ್ಯನಿರ್ವಹಿಸಬೇಕು ಎನ್ನುವ ಕಾಲಮಿತಿಯನ್ನು ಮೂರು ವರ್ಷಗಳಿಗೆ ಇಳಿಸಲು ಸೂಚಿಸಲಾಗಿದೆ ಎಂದರು.

25ಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳ ಶಿಕ್ಷಕರ ವೇತನ ಕಡಿತಗೊಳಿಸಲು ಅಧಿಕಾರಿಗಳು ಸುತ್ತೋಲೆ ಹೊರಡಿಸಿದ್ದರು. ಅದನ್ನು ಕೈಬಿಡಲು ಒತ್ತಡ ಹೇರಲಾಗಿದೆ. ಅಧಿಕಾರಿಗಳ ಸುತ್ತೋಲೆ ಕಾಯ್ದೆ ಆಗುವುದಿಲ್ಲ. ಸದನದಲ್ಲಿ ಅನುಮೋದನೆಗೊಂಡಾಗ ಕಾಯ್ದೆ ಆಗುತ್ತದೆ ಎಂದರು.

ಶಾಸಕ ಸಿ.ಟಿ.ರವಿ ಮಾತನಾಡಿ, ಶಿಕ್ಷಣ ವ್ಯವಸ್ಥೆಯಿಂದ ಪರಿಪೂರ್ಣ ಭಾರತ ನಿರ್ಮಿಸಲು ಸಾಧ್ಯವಾಗುತ್ತದೆ. ಅದನ್ನು ಎಲ್ಲರು ಅರ್ಥಮಾಡಿಕೊಳ್ಳಬೇಕು. ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದರು.
ಕಿರಿಯ ಪ್ರಾಥಮಿಕ ಶಾಲೆಯ 8, ಹಿರಿಯ ಪ್ರಾಥಮಿಕ ಶಾಲೆಯ 8 ಮಂದಿ ಶಿಕ್ಷಕರಿಗೆ ಜಿಲ್ಲಾಮಟ್ಟದ ಶಿಕ್ಷಕ ಪ್ರಶಸ್ತಿ ಪ್ರದಾನ ನೀಡಲಾಯಿತು. ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಸಿದ್ದಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಎಂ.ಕೆ.ಸುರೇಶ್ ರಚಿಸಿರುವ ‘ಭಾವ ಕೇತನ’ ಪುಸ್ತಕ ಬಿಡುಗಡೆಗೊಳಿಸಲಾಯಿತು.

ಜಿಲ್ಲಾಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಜಸಿಂತಅನಿಲ್‌ಕುಮಾರ್, ಜಿಲ್ಲಾಪಂಚಾಯಿತಿ ಸದಸ್ಯರಾದ ಬಿ.ಜಿ.ಸೋಮಶೇಖರಪ್ಪ, ಬೆಳವಾಡಿ ರವೀಂದ್ರ, ಪ್ರೇಮಾ ಕೆ.ವಿ.ಮಂಜುನಾಥ್, ಕವಿತಾಲಿಂಗರಾಜು, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ರಮೇಶ್, ಒಕ್ಕಲಿಗರ ಸಂಘದ ಅಧ್ಯಕ್ಷ ಡಾ.ಡಿ.ಎಲ್.ವಿಜಯಕುಮಾರ್, ಯುಕೋ ಬ್ಯಾಂಕ್ ನಿವೃತ್ತ ಹಿರಿಯ ವ್ಯವಸ್ಥಾಪಕ ನಾರಾವಿ ವೆಂಕಟೇಶ್ ಹೆಗ್ಡೆ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !