ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಳದಲ್ಲಿ ಮತ್ಸ್ಯಾಗಾರ ನಿರ್ಮಾಣ: ಮೀನುಗಾರಿಕೆ, ಬಂದರು ಸಚಿವ ಎಸ್. ಅಂಗಾರ ಭರವಸೆ

Last Updated 29 ಮಾರ್ಚ್ 2021, 4:53 IST
ಅಕ್ಷರ ಗಾತ್ರ

ಸುಬ್ರಹ್ಮಣ್ಯ: ‘ಪ್ರಸ್ತುತ ಪರಿಸ್ಥಿತಿಯಲ್ಲಿ ಮತ್ಸ್ಯ ಪ್ರಭೇದಗಳ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ಸಮೃದ್ಧ ನೀರಿನ ವ್ಯವಸ್ಥೆ ಇರುವ ದೇವಳಗಳ ಪರಿಸರದಲ್ಲಿ ಮತ್ಸ್ಯಾಗಾರ ನಿರ್ಮಾಣ ಮಾಡುವ ಚಿಂತನೆ ಇದೆ’ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಹೇಳಿದರು.

ನಾಲ್ಕೂರು ಗ್ರಾಮದ ಮರಕತ ದುರ್ಗಾಪರಮೇಶ್ವರಿ ದೇವಳಕ್ಕೆ ಮರಕತ ದುರ್ಗಾಪರಮೇಶ್ವರಿ ಉಪಾ ಸನಾ ಸಮಿತಿ ಮತ್ತು ಊರ ಭಕ್ತರ ನೆರವಿನಿಂದ ನಿರ್ಮಿಸಿದ ಮಹಾದ್ವಾರವನ್ನು ಭಾನು ವಾರ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

‘ದೇವಳಗಳಲ್ಲಿ ಮತ್ಸ್ಯಾಗಾರವನ್ನು ನಿರ್ಮಾಣ ಮಾಡುವ ಮೂಲಕ ಆಲಯಗಳಲ್ಲಿ ಮತ್ಸ್ಯ ಸಂರಕ್ಷಣೆಗೆ ಒತ್ತು ನೀಡಲಾಗುವುದು. ಅಲ್ಲದೆ, ಭಕ್ತರು ಮತ್ಸ್ಯ ಪ್ರಭೇದಗಳ ಜ್ಞಾನ ಪಡೆದು ಕೊಳ್ಳಲು ಈ ಮೂಲಕ ವಿನೂತನ ಯೋಜನೆಯನ್ನು ಸಿದ್ಧಪಡಿ ಸಲಾಗುವುದು’ ಎಂದು ಹೇಳಿದರು.

‘ದೇವಾಲಯಗಳ ಅಭಿವೃದ್ಧಿಯಿಂದ ಗ್ರಾಮಾಭಿವೃದ್ಧಿ ಸಾಧ್ಯ. ಮರಕತ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಉಪಾಸನಾ ಸಮಿತಿ ರಚಿಸಿಕೊಂಡು ದೇವಳದ ಅಭಿವೃದ್ಧಿಗೆ ಕಂಕಣ ತೊಟ್ಟಿರು ವುದು ಮಾದರಿ ಕಾರ್ಯ. ಗ್ರಾಮೀಣ ದೇವಳಗಳಲ್ಲಿ ಕುಡಿಯುವ ನೀರು ಮತ್ತು ರಸ್ತೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲಾಗುವುದು’ ಎಂದರು.

ಮರಕತ ದುರ್ಗಾಪರಮೇಶ್ವರಿ ಉಪಾಸನಾ ಸಮಿತಿಯ ಅಧ್ಯಕ್ಷೆ ನಿರ್ಮಲಾ ಪದ್ಮನಾಭ ಪರಮಲೆ ಅಧ್ಯಕ್ಷೆತೆ ವಹಿಸಿದ್ದರು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ವೇದಾವತಿ ಎಸ್. ಅಂಗಾರ, ಗುತ್ತಿಗಾರು ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಪ್ರಮೀಳಾ ಭಾಸ್ಕರ್ ಇದ್ದರು.

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಮಾವಿನಕಟ್ಟೆ, ಮಾಜಿ ಸದಸ್ಯ ವೆಂಕಟ್ರಮಣ ಕೊಚ್ಚಿ, ದೈವಗಳ ಪರಿಚಾರಕ ಕರುಣಾಕರ ಮರಕತ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು, ಪ್ರಮುಖರಾದ ವೆಂಕಟ್ ದಂಬೆಕೋಡಿ, ವೆಂಕಟ್ ವಳ ಲಂಬೆ, ವಿಜಯ ಕುಮಾರ್ ಚಾರ್ಮತ, ಉಪಾಸನಾ ಸಮಿತಿ ಪದಾಧಿಕಾರಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.

ವರಲಕ್ಷ್ಮೀ ಕೋಟೆ ಸ್ವಾಗತಿಸಿದರು. ಚಂದ್ರಕಲಾ ಉತ್ರಂಬೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT