ಆ.1 ರಂದು ಶಾರದಾ ಮಠದ ಗುರುನಿವಾಸದಲ್ಲಿ ನಾನಾ ಪ್ರಾಂತ್ಯಗಳ 25 ಪಂಡಿತರಿಗೆ ಸನ್ಮಾನ ಆಯೋಜಿಸಲಾಗಿತ್ತು. ಶಿವಕುಮಾರ ಶರ್ಮ ಮಠದ ಗುರುಗಳಾದ ವಿಧುಶೇಖರಭಾರತಿ ಸ್ವಾಮೀಜಿ ಅವರಿಂದ ಸನ್ಮಾನ ಸ್ವೀಕರಿಸಿದ್ದಾರೆ. ಆದರೆ ಆ.2ರಂದು ಮಧ್ಯಾಹ್ನ 4 ಗಂಟೆಗೆ ಭಾರತೀತೀರ್ಥ ವಸತಿ ಗೃಹದಿಂದ ಶಾರದಾ ಮಠಕ್ಕೆ ಹೋಗಿ ಜಪ ಮಾಡಿ ಬರುವುದಾಗಿ ಹೋದವರು ನಾಪತ್ತೆ ಆಗಿದ್ದಾರೆ. ಅವರ ಪತ್ನಿ ಜ್ಯೋತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಇವರ ಸುಳಿವು ಸಿಕ್ಕಲ್ಲಿ ಮೊಬೈಲ್ ಸಂಖ್ಯೆ9113941398 ಅಥವಾ ಸ್ಥಳೀಯ ಪೊಲೀಸ್ ಠಾಣೆಯ 08265-250150 ನಂಬರ್ ಸಂಪರ್ಕಿಸಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.