ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಿಗೆರೆ: ಹೊಸ ಅಡಿಕೆ ಗಿಡಗಳಿಗೆ ಕಾಡುಹಂದಿ ಕಾಟ

Published 16 ಫೆಬ್ರುವರಿ 2024, 12:52 IST
Last Updated 16 ಫೆಬ್ರುವರಿ 2024, 12:52 IST
ಅಕ್ಷರ ಗಾತ್ರ

ಮೂಡಿಗೆರೆ: ತಾಲ್ಲೂಕಿನ ಜಾಣಿಗೆ, ದೇವರುಂದ, ಕನ್ನೆಹಳ್ಳಿ ಭಾಗಗಳಲ್ಲಿ ಕಾಡುಹಂದಿಗಳ ಕಾಟ ಹೆಚ್ಚಾಗಿದ್ದು ನಾಟಿ ಮಾಡಿದ ಹೊಸ ಅಡಿಕೆ, ಕಾಫಿ, ಹಸಿ ಮೆಣಸಿನ ಗಿಡಗಳನ್ನು ಕಿತ್ತು ಹಾನಿ ಮಾಡುತ್ತಿವೆ.

ಶುಕ್ರವಾರ ನಸಸುಕಿನಲ್ಲಿ ಜಾಣಿಗೆ ಗ್ರಾಮದ ಮೋಹನ್ ಅವರ ತೋಟಕ್ಕೆ ದಾಳಿ ನಡೆಸಿರುವ ಕಾಡುಹಂದಿಗಳ ಗುಂಪು, ಬೇರೂರಿದ್ದ ಅಡಿಕೆ ಗಿಡಗಳನ್ನು ಸಂಪೂರ್ಣ ನಾಶಗೊಳಿಸಿವೆ. ಮಲೆನಾಡು ಭಾಗದಲ್ಲಿ ಬೇಸಿಗೆಯಲ್ಲಿ ಹಸಿ ಮೆಣಸು, ತರಕಾರಿ ಬೆಳೆಗಳನ್ನು ಬೆಳೆಯಲಾಗುತ್ತಿದ್ದು, ನಾಟಿ ಮಾಡಿದ್ದ ಹಸಿಮೆಣಸಿನ ಗಿಡಗಳು, ಬೀನ್ಸ್ ಗಿಡಗಳನ್ನು ಸಹ ತಿಂದು, ತುಳಿದು ಹಾಕಿವೆ.

‘ಇತ್ತೀಚೆಗೆ ಕಾಡುಹಂದಿಗಳ ಕಾಟ ಹೆಚ್ಚಾಗಿದೆ. ಭತ್ತದ ಗದ್ದೆಗಳನ್ನು ಸಂರಕ್ಷಿಸಿಕೊಳ್ಳಲು ಗದ್ದೆಯಲ್ಲಿಯೇ ಟೆಂಟ್ ನಿರ್ಮಿಸಿಕೊಂಡು ಕಾಯುತ್ತಿದ್ದೇವು. ಆದರೆ ಇದೀಗ ಕಾಫಿ ತೋಟಗಳಿಗೂ ಲಗ್ಗೆ ಇಡುತ್ತಿರುವ ಕಾಡುಹಂದಿಗಳು, ಯಾವುದೇ ಸಸಿ ನೆಟ್ಟರೂ ಕಿತ್ತು ಸುಳಿ ತಿನ್ನುತ್ತಿವೆ. ಮೂರು ವರ್ಷಗಳಿಂದ ನಾಟಿ, ಗೊಬ್ಬರ, ಕಲಸ ಸೇರಿಅಪಾರ ವೆಚ್ಚ ಮಾಡಿ ಬೆಳೆದಿದ್ದ ಅಡಿಕೆ ಸಸಿಗಳನ್ನು ಒಂದೇ ರಾತ್ರಿಯಲ್ಲಿ ನಾಶಪಡಿಸಿರುವುದರಿಂದ ಅಪಾರ ನಷ್ಟ ಅನುಭವಿಸುವಂತಾಗಿದೆ. ಕಾಡುಹಂದಿಗಳ ಕಾಟದಿಂದಾಗಿ ಹೊಸ ತೋಟಗಳನ್ನು ಮಾಡುವುದು ಸವಾಲಾಗುತ್ತಿದ್ದು, ಅರಣ್ಯ ಇಲಾಖೆಯು ಕಾಡುಹಂದಿ ಹಾವಳಿ ತಡೆಗೆ ಕ್ರಮ ಕೈಗೊಳ್ಳಬೇಕು’ ಎಂದು ರೈತ ಜಾಣಿಗೆ ಮೋಹನ್ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT