ಚಿಕ್ಕಮಗಳೂರು: ಬಿಸಿಯೂಟ ತಯಾರಿ ಸುವ ಅಡುಗೆ ಸಿಬ್ಬಂದಿಗಳನ್ನು ಅರೆ ಕಾಲಿಕ ಕಾಯಂ ನೌಕರರೆಂದು ಪರಿಗಣಿಸಿ ಅವರಿಗೆ ಸಾಮಾಜಿಕ ಭದ್ರತೆ ಒದಗಿಸ ಬೇಕು ಎಂದು ಒತ್ತಾಯಿಸಿ ಮಹಿಳೆಯರು ಬುಧವಾರ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಗರದ ಸಿಪಿಐ ಕಚೇರಿಯಿಂದ ಮೆರವಣಿಗೆಯಲ್ಲಿ ತೆರಳಿದ ಪ್ರತಿಭಟ ನಾಕಾರರು, ಜಿಲ್ಲಾಪಂಚಾಯಿತಿ ಕಚೇರಿ ಬಳಿ ಧರಣಿ ನಡೆಸಿ ಬೇಡಿಕೆ ಈಡೇರಿ ಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯ ನಿರ್ವಹ ಣಾಧಿಕಾರಿ ರಾಗಪ್ರಿಯಾ ಅವರಿಗೆ ಮನವಿ ಸಲ್ಲಿಸಿದರು.

ಬೆಲೆ ಏರಿಕೆಗೆ ತಕ್ಕಂತೆ ಈ ವರ್ಷದ ಬಜೆಟ್ ನಲ್ಲಿ ತಿಂಗಳಿಗೆ ₹15 ಸಾವಿರ ವೇತನ ಕೊಡಬೇಕು. ನಿವೃತ್ತಿವೇತನ ತಿಂಗಳಿಗೆ ₹3ಸಾವಿರ ಪಿಂಚಣಿ ಸಿಗುವ ಯೋಜನೆರೂಪಿಸಿ ಜಾರಿಗೊಳಿಸಬೇಕು. ಮರಣಹೊಂದಿದರೆ ಅಂತ್ಯಕ್ರಿಯೆಗೆ ₹15ಸಾವಿರ ನೀಡುವುದು,ಇಎಸ್ ಐ ಹಾಗೂಭವಿಷ್ಯನಿಧಿಯೋಜನೆಯನ್ನು ಜಾರಿಗೆ ತರುವುದು, ಅಡುಗೆ ಕೆಲಸ ನಿರ್ವಹಿಸುವಾಗ ಅವಘಡ ಸಂಭವಿಸಿ ಮರಣಹೊಂದಿದರೆ ಅಥವಾ ಶಾಶ್ವತ ಅಂಗವಿಕಲರಾದರೆ ₹5ಲಕ್ಷ ಪರಿಹಾರ ನೀಡುವ ಯೋಜನೆ ಜಾರಿಗೆ ತರಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಸಂಬಳ ಸಹಿತ 26 ವಾರಗಳ ಹರಿಗೆ ರಜೆ ನೀಡಬೇಕು. ಸೇವೆಯಲ್ಲಿದ್ದಾಗ ಸ್ವಾಭಾವಿಕ ಮರಣಹೊಂದಿದರೆ₹2ಲಕ್ಷ ಧನಸಹಾಯ, ಎಲ್ಲಾ ರೀತಿಯ ವೈದ್ಯ ಕೀಯ ಚಿಕಿತ್ಸೆಗೆ₹1ಲಕ್ಷ ವಿಮೆ ಮಾಡಿಸ ಬೇಕು. ಯೋಜನೆ ಮೂಲ ಕೈಪಿಡಿ ಯಂತೆ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಸಿಬ್ಬಂದಿ ನೇಮಿಸಿ, ಏಪ್ರಿಲ್ ತಿಂಗಳಿನಲ್ಲಿ ಬಿಡುಗಡೆಗೊಳಿಸಿಜೂನ್ ತಿಂಗಳಿನಲ್ಲಿ ಕೆಲಸಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ ನಿಲ್ಲಿಸಬೆಕು. ಸರ್ಕಾರಿ ನೌಕರರಂತೆ ಎಲ್ಲಾ ರಜೆದಿನ ಹಾಗೂ ಪೂರ್ಣ ಸಂಬಳ ನೀಡಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.

ಪ್ರತಿ ತಿಂಗಳ 5ಕ್ಕೆ ಚೆಕ್ ಮೂಲಕ ಬ್ಯಾಂಕ್ ಖಾತೆಗೆ ವೇತನ ಪಾವತಿಯಾ ಗಬೇಕು. ಇತರೆ ಸೇವಾ ಸಂಸ್ಥೆಯೊಂದಿಗೆ ಮಾಡಿಕೊಂಡಿರುವ ಒಪ್ಪಂದವನ್ನು ರದ್ದುಪಡಿಸಿ ಇಲಾಖೆಯಿಂದಲೇ ಬಿಸಿಯೂಟ ತಯಾರಿಸಿ ಮಕ್ಕಳಿಗೆ ಬಡಿಸಬೇಕು. ಹ್ಯಾಂಡ್ ಗ್ಲೌಸ್ ಮತ್ತು ಸಮವಸ್ತ್ರಸೀರೆ ನೀಡುವುದು, ಅಸಂಘ ಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಜಾರಿಗೊಳಿಸಿರುವ ಜನಶ್ರೀ ಬಿಮಾ ಯೋಜನೆ ಎಲ್ಲಾ ಅಡುಗೆ ಸಿಬ್ಬಂದಿಗೆ ಅನ್ವಯಿಸುವಂತೆ ಇಲಾಖೆ ಯಿಂದ ನೋಂದಾಯಿಸಬೇಕು ಎಂದು ಕೋರಿದ್ದಾರೆ.

ಸಂಘದ ಅಧ್ಯಕ್ಷ ವಿಜಯ ಕುಮಾರ್,ಕಾರ್ಯದರ್ಶಿ ಜಿ.ರಘು ಮುಖಂಡರಾದ ಎಸ್.ಎಲ್. ರಾಧಾ ಸುಂದರೇಶ್, ಜಾರ್ಜ್ ಆಸ್ಟಿನ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.