ಅಜ್ಜಂಪುರ: 14ನೇ ಶತಮಾನದ ಶಿವಶರಣರ ಆದರ್ಶ ಪಥದಲ್ಲಿ ಮಹಾ ಜ್ಯೋತಿಯಾಗಿ ಪ್ರಜ್ವಲಿಸಿದ ಹೇಮರೆಡ್ಡಿ ಮಲ್ಲಮ್ಮ ದೈವಭಕ್ತಿ, ಕಾಯಕ ನಿಷ್ಠೆ, ದಾನಧರ್ಮದಿಂದಲೇ ಲೋಕ ಪ್ರಸಿದ್ಧಿ ಪಡೆದಿದ್ದರು ಎಂದು ಹೊಸಕೋಟೆಯ ಉಪನ್ಯಾಸಕ ಡಾ.ಶಿವಾನಂದ್ ತಿಳಿಸಿದರು.
ಪಟ್ಟಣ ಸಮೀಪದ ಬಗ್ಗವಳ್ಳಿ ಗ್ರಾಮ ದಲ್ಲಿ ಭಾನುವಾರ ನಡೆದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಭವನ ಉದ್ಘಾ ಟನಾ ಸಮಾರಂಭ ಮತ್ತು ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿದರು.

ಸುಖ–ದುಃಖ, ಅಂಬಲಿ–ಅಮೃತ, ಶತ್ರು–ಮಿತ್ರ, ಸ್ತುತಿ–ನಿಂದೆ ಎಲ್ಲವನ್ನು ಸಮಚಿತ್ತದಿಂದ ಸ್ವೀಕರಿಸಿ, ಶ್ರೀ ಶೈಲ ಮಲ್ಲಿಕಾರ್ಜುನನನ್ನು ಸಾಕ್ಷಾತ್ಕರಿ ಸಿಕೊಂಡ ಹೇಮರೆಡ್ಡಿ ಮಲ್ಲಮ್ಮನ ಬದುಕು ಎಂದಿಗೂ ಸ್ಪೂತ್ರಿ, ಅನುಕರ ಣೀಯ ಹಾಗೂ ಮನುಕುಲಕ್ಕೆ ಆದರ್ಶ ಎಂದು ಅರಸೀಕೆರೆಯ ಮಾಡಾಳು ಕ್ಷೇತ್ರದ ಶಿವಬಸವ ಕುಮಾರಾಶ್ರಮದ ತೋಂಟದಾ ಚಾರ್ಯ ಸ್ವಾಮೀಜಿ ಅಭಿಪ್ರಾಯ ಪಟ್ಟರು.
ಸಮಾಜ ಬಾಂಧವರ ನೆರವಿನಿಂದ ನಿರ್ಮಿಸಲಾಗಿರುವ ಈ ಸಮುದಾಯ ಭವನವನ್ನು ಸಮಾಜದ ಧಾರ್ಮಿಕ, ಆಧ್ಯಾತ್ಮಿಕ ಚಟುವಟಿಕೆಗಳ ಮುನ್ನಡೆಗೆ ಮೀಸಲಿರಿಸುವುದಾಗಿ ಬಗ್ಗವಳ್ಳಿ ಕೇಂದ್ರದ ಬಡಗನಾಡು ಹೇಮರೆಡ್ಡಿ ವೀರಶೈವ ಜನಾಂಗ ಸಂಘದ ಅಧ್ಯಕ್ಷ ಹೇಮಂತ್ ಕುಮಾರ್ ತಿಳಿಸಿದರು.

ಪತ್ರಕರ್ತ ಬಿ.ಪಿ.ಮಲ್ಲಪ್ಪ, ನಿವೃತ್ತ ಶಿಕ್ಷಕ ಬಿ.ತೋಂಟದಾರ್ಯ, ಪಿಎಚ್.ಡಿ ಪದವೀಧರ ಡಾ.ಬಿ.ಪಿ.ಸೋಮೇಶ್ ಅವರನ್ನು ಪುರಸ್ಕರಿಸಲಾಯಿತು. ಭವನ ನಿರ್ಮಾಣಕ್ಕೆ ಸಹಕರಿಸಿದ ಮೈತ್ರಿ ಹೇಮಂತ ಕುಮಾರ್, ಮಂಗಳ ಶಿವ ಲಿಂಗಸ್ವಾಮಿ, ಮರುಳಸಿದ್ದಪ್ಪ, ಶಾಂತ ಪ್ಪ, ಕುಮಾರಸ್ವಾಮಿ, ಲಿಂಗೈಕ್ಯ ಪರ ಮೇಶ್ವರಪ್ಪ, ಲಿಂಗೈಕ್ಯ ನೀಲಮ್ಮ ಉಮಾ ಪತಿಯ ಮಕ್ಕಳನ್ನು ಸನ್ಮಾನಿಸಲಾಯಿತು.

ಸದಾಶಿವ ಪೇಟೆಯ ಗದ್ಧಿಗೇಶ್ವರ ಮಠದ ಗದ್ಧಿಗೇಶ್ವರ ಸ್ವಾಮೀಜಿ, ತಾವರೆ ಕೆರೆಯ ಶಿಲಾಮಠದ ಅಭಿನವ ಸಿದ್ಧ ಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಗಿರಿಯಾಪುರ ಗ್ರಾಮದ ಬ.ಹೇ.ವಿ.ಜ ಸಂಘದ ಅಧ್ಯಕ್ಷ ರೇವಣಸಿದ್ದಪ್ಪ, ಕಾರ್ಯದರ್ಶಿ ಚಂದ್ರ ಶೇಖರಪ್ಪ, ನಿವೃತ್ತ ಕಾರ್ಯಪಾಲಕ ಎಂಜಿನಿಯರ್ ಜಿ.ಎಂ. ರಾಜ್ ಕುಮಾರ್, ನಿವೃತ್ತ ಉಪ ನಿರ್ದೇಶಕ ಶಿವಮೂರ್ತಿ, ನಿವೃತ್ತ ಶಿಕ್ಷಕ ಮರುಳ ಸಿದ್ದಯ್ಯ, ಸಮಾಜ ಮುಖಂಡರಾದ ಲಿಂಗೇಗೌಡ, ಕಾಶೀನಾಥ್, ದಕ್ಷಿಣ ಮೂರ್ತಿ, ಜಿ.ಬಿ.ಈಶಣ್ಣ ಮತ್ತಿತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.