ಭಾನುವಾರ, ಜೂನ್ 26, 2022
25 °C

ವಿಡಿಯೊ ನೋಡಿ: ಹಾವಿನ ಹೊಟ್ಟೆಯಿಂದ ಹೊರಬಂದವು 50 ಮರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಚಿತ್ರದುರ್ಗ: ವಿಷಪೂರಿತ ಹಾವೊಂದು ಟ್ರ್ಯಾಕ್ಟರ್‌ಗೆ ಸಿಲುಕಿ 50 ಮರಿಗಳಿಗೆ ಜನ್ಮನೀಡಿ ಮೃತಪಟ್ಟಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

ತಾಲ್ಲೂಕಿನ ಭರಮಸಾಗರ ಹೋಬಳಿಯ ಹಂಪನೂರು ಗ್ರಾಮ ಇಂತಹದೊಂದು ವಿಸ್ಮಯಕ್ಕೆ ಕಾರಣವಾಗಿದೆ. ಮೃತ ಹಾವು ವೈಪರ್ ಜಾತಿಗೆ ಸೇರಿದ್ದು ಎನ್ನಲಾಗಿದೆ.

ರೈತರೊಬ್ಬರು ಭೂಮಿ ಉಳುಮೆ ಮಾಡುವಾಗ ಟ್ರ್ಯಾಕ್ಟರ್ ಗೆ ಸಿಲುಕಿ ಹಾವು ಮೃತಪಟ್ಟಿದೆ. ಇದರಿಂದ ಗಾಬರಿಗೊಂಡ ರೈತ ಹಾವನ್ನು ಪರಿಶೀಲಿಸಿದಾಗ ಹೊಟ್ಟೆ ಉಬ್ಬಿರುವುದು ಕಂಡುಬಂದಿದೆ.

ಬಳಿಕ ಒಂದೊಂದೇ ಮರಿಗಳು ಹಾವಿನ ದೇಹದಿಂದ ಹೊರಗೆ ಬಂದಿವೆ. ಒಟ್ಟು 50 ಮರಿಗಳು ಹಾವಿನ ಹೊಟ್ಟೆಯೊಳಗೆ ಇದ್ದವು ಎಂದು ರೈತರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು