ಗುರುವಾರ , ಡಿಸೆಂಬರ್ 5, 2019
19 °C

ಮೊಳಕಾಲ್ಮುರು: 60 ಟನ್ ಅಕ್ರಮ ಪಡಿತರ ಅಕ್ಕಿ ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೊಳಕಾಲ್ಮುರು: ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ 60 ಟನ್‌ಗಳಷ್ಟು ಅಕ್ಕಿಯನ್ನು ಸೋಮವಾರ ತಹಶೀಲ್ದಾರ್ ಬಸವರಾಜ್ ನೇತೃತ್ವದ ತಂಡ ತಾಲ್ಲೂಕಿನ ರಾಂಪುರ ಸಮೀಪದ ಕೋನಾಪುರ ಗ್ರಾಮದಲ್ಲಿ ವಶಪಡಿಸಿಕೊಂಡಿದೆ.

ಈ ಅಕ್ಕಿಯು ಅನ್ನಭಾಗ್ಯ ಯೋಜನೆ ಹಾಗೂ ಶಾಲೆಗಳ ಬಿಸಿಯೂಟ ಯೋಜನೆಗೆ ಸೇರಿದ್ದಾಗಿದ್ದು ಅದನ್ನು ಬೆಂಗಳೂರಿಗೆ ಸಾಗಿಸುವ ಹುನ್ನಾರ ನಡೆಸಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ಚಿದಾನಂದಪ್ಪ ಹಾಗೂ ಸಣ್ಣ ಮಾರಣ್ಣ ಎನ್ನುವವರ ಮೇಲೆ ದೂರು ದಾಖಲಿಸಲಾಗಿದೆ.

ಸಿಪಿಐ ಗೋಪಾಲ ನಾಯ್ಕ, ರಾಂಪುರ ಎಸ್‌ಐ ಗುಡ್ಡಪ್ಪ, ಆಹಾರ ಇಲಾಖೆಯ ನಿರೀಕ್ಷಕ ಅಬ್ದುಲ್ ರಜಾಕ್‌ ಹಾಗೂ ಸಿಬ್ಬಂದಿ ಇದ್ದರು. ರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

15 ದಿನಗಳ ಹಿಂದೆ ಸಹ ರಾಂಪುರ ಸಮೀಪ ಅಪಾರ ಪ್ರಮಾಣದ ಅಕ್ರಮ ಪಡಿತರ ಸಾಗಣೆ ಅಕ್ಕಿಯನ್ನು ಪೊಲೀಸರು ವಶಕ್ಕೆ ಪಡೆದಿದನ್ನು ಇಲ್ಲಿ ಸ್ಮರಿಸಬಹುದು.

ಪ್ರತಿಕ್ರಿಯಿಸಿ (+)