ಭಾನುವಾರ, ಸೆಪ್ಟೆಂಬರ್ 25, 2022
29 °C

12 ವರ್ಷಗಳ ನಂತರ ಕೋಡಿ ಬಿದ್ದ ನಾಯಕನ ಕೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸದುರ್ಗ: ತಾಲ್ಲೂಕಿನ ಬಾಗೂರಿನ ಪಶ್ಚಿಮ ದಿಕ್ಕಿನಲ್ಲಿರುವ ನಾಯಕನಕೆರೆ 12 ವರ್ಷಗಳ ನಂತರ ಕೋಡಿ ಬಿದ್ದಿದೆ.

ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೆರೆ ಕೋಡಿ ಬಿದ್ದಿದ್ದು, ಜನರು ಸಂತಸಗೊಂಡಿದ್ದಾರೆ. ಕೆರೆ ಬಳಿ ನೂರಾರು ಜನ ಮೀನು ಹಿಡಿಯುತ್ತಿದ್ದಾರೆ. ಮತ್ತೊಂದೆಡೆ ಮಕ್ಕಳು ಮೀನು ನೋಡಲು ಕೆರೆಯತ್ತ ಧಾವಿಸುತ್ತಿದ್ದಾರೆ.

‘1902ರಲ್ಲಿ ನಿರ್ಮಿಸಿರುವ ಈ ಕೆರೆ 400-500 ಎಕರೆ ವಿಸ್ತೀರ್ಣ ಹೊಂದಿದೆ. ಸುತ್ತಲಿನ ಬಾಗೂರು, ಶ್ರೀರಂಗಾಪುರ ಹಳೇಕುಂದೂರು, ಹೊಸಕುಂದೂರು, ಪಾಳೇದಳ್ಳಿ, ಆನಿವಾಳ ಸೇರಿದಂತೆ ಸುತ್ತಲಿನ ಗ್ರಾಮಗಳ ಜಮೀನುಗಳಿಗೆ ನೀರುಣಿಸುತ್ತಿತ್ತು, ಆ ಜನರ ಒಡನಾಡಿಯಾಗಿದೆ. ಸುಮಾರು 6.5ರಿಂದ 7 ಅಡಿ ನೀರು ಬಂದಿದೆ ಕೋಡಿ ಬಿದ್ದಿದೆ. 2010ರಲ್ಲಿ ಕೋಡಿ ಬಿದ್ದಿದ್ದು, ಪುನಃ ಇವಾಗ ಕೋಡಿ ಬಿದ್ದಿರುವ ದೃಶ್ಯ ಕಣ್ತುಂಬಿಕೊಳ್ಳುವುದು ನಮ್ಮ ಭಾಗ್ಯ’ ಎಂದು ಶ್ರೀರಂಗಾಪುರದ ಖಾನಿ ಚಂದಣ್ಣ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು