ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಯಲ್ಲಿ ಸಿಕ್ಕ ಲ್ಯಾಪ್‌ಟಾಪ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ವ್ಯಕ್ತಿ

Published 16 ಡಿಸೆಂಬರ್ 2023, 15:55 IST
Last Updated 16 ಡಿಸೆಂಬರ್ 2023, 15:55 IST
ಅಕ್ಷರ ಗಾತ್ರ

ಶ್ರೀರಾಂಪುರ: ರಸ್ತೆಯಲ್ಲಿ ಬ್ಯಾಗ್ ಸಮೇತ ಬಿದ್ದಿದ್ದ ಲ್ಯಾಪ್‌ಟಾಪ್‍ ಅನ್ನು ಮಾಲೀಕರಿಗೆ ಹಿಂದಿರುಗಿಸುವ ಮೂಲಕ ಇಲ್ಲಿನ ಸ್ಥಳೀಯರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.

ಅಡುಗೆ ಕೆಲಸ ಮಾಡಿಕೊಂಡಿರುವ ಹೋಬಳಿಯ ಅರಲಹಳ್ಳಿ ಗ್ರಾಮದ ಗೊರಪ್ಪ ಎಂಬವರು ಶುಕ್ರವಾರ ಬೆಳಿಗ್ಗೆ ಅರಲಹಳ್ಳಿ ಗ್ರಾಮದಿಂದ ಮಾಳಪ್ಪನಹಳ್ಳಿ ಗೇಟ್‍ ಕಡೆ ಹೋಗುವ ರಸ್ತೆಯ ತಿರುವಿನಲ್ಲಿ ಬ್ಯಾಗ್ ಬಿದ್ದಿರುವುದನ್ನು ಗಮನಿಸಿದ್ದಾರೆ. ತೆರೆದು ನೋಡಿದಾಗ ಅದರಲ್ಲಿ ಲ್ಯಾಪ್‌ಟಾಪ್‍ ಇತ್ತು. ತನಗೆ ಲ್ಯಾಪ್‌ಟಾಪ್ ಇರುವ ಬ್ಯಾಗ್ ಸಿಕ್ಕಿರುವ ಮಾಹಿತಿಯನ್ನು ಗ್ರಾಮದ ಕೆಲವರು ಹಾಗೂ ಶ್ರೀರಾಂಪುರ ಪೊಲೀಸರಿಗೆ ಅವರು ತಿಳಿಸಿದ್ದಾರೆ.

ಬ್ಯಾಗ್‌ ಕಳೆದುಕೊಂಡಿದ್ದ ಕೀರ್ತಿಕುಮಾರ್ ಎಂಬವರು ಶನಿವಾರ ಪೊಲೀಸ್ ಠಾಣಗೆ ಆಗಮಿಸಿದ್ದಾರೆ. ಗೊರಪ್ಪ ಅವರು ಪಿಎಸ್‌ಐ ಶ್ರೀಶೈಲ ಅವರ ಸಮ್ಮುಖದಲ್ಲಿ ಲ್ಯಾಪ್‍ಟಾಪ್ ಇರುವ ಬ್ಯಾಗನ್ನು ಮಾಲೀಕರಿಗೆ ಹಸ್ತಾಂತರಿಸಿದ್ದಾರೆ.

ಲ್ಯಾಪ್‌ಟಾಪ್ ಅಂದಾಜು ₹ 2 ಲಕ್ಷ ಮೌಲ್ಯದ್ದು ಎನ್ನಲಾಗಿದೆ. ಬ್ಯಾಗ್‍ ಹಿಂತಿರುಗಿಸಿದ ಗೊರಪ್ಪ ಅವರ ಪ್ರಾಮಾಣಿಕತೆಯನ್ನು ಪೊಲೀಸರು ಶ್ಲಾಘಿಸಿದ್ದಾರೆ. ಬ್ಯಾಗ್ ಮರಳಿ ಪಡೆದ ಮಾಲೀಕರು ಗೊರಪ್ಪ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT