ಆತ್ಮಹತ್ಯೆಗೆ ಯತ್ನ: ಯುವತಿ ರಕ್ಷಿಸಿದ ಪೊಲೀಸರು
ಹೊಸದುರ್ಗ: ತಾಲ್ಲೂಕಿನ ಕುಂದೂರು–ಬಾಗೂರು ಗ್ರಾಮಗಳ ಮಧ್ಯದ ರಸ್ತೆ ಪಕ್ಕದಲ್ಲಿ ಮಂಗಳವಾರ ವಿಷ ಕುಡಿಯಲು ಯತ್ನಿಸುತ್ತಿದ್ದ ಯುವತಿಯನ್ನು ಹೊಯ್ಸಳ 112 ವಾಹನದ ಪೊಲೀಸರು ರಕ್ಷಿಸಿದ್ದಾರೆ.
ಪ್ರೀತಿಯ ವಿಷಯಕ್ಕೆ ಮನನೊಂದು ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿಯ 21 ವರ್ಷದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳಲು ಕ್ರಿಮಿನಾಶಕ ಸೇವಿಸಲು ಮುಂದಾಗಿದ್ದಳು. ಅದನ್ನು ಕಂಡ ಗಸ್ತಿನಲ್ಲಿದ್ದ ಪೊಲೀಸರು ತಕ್ಷಣ ಕ್ರಿಮಿನಾಶಕ ಬಾಟಲಿಯನ್ನು ವಶಕ್ಕೆ ತೆಗೆದುಕೊಂಡರು. ಬಳಿಕ ಮಹಿಳಾ ಪೊಲೀಸ್ ಸಿಬ್ಬಂದಿ ಸಮ್ಮುಖದಲ್ಲಿ ಠಾಣೆಗೆ ಕರೆದುಕೊಂಡು ಹೋದರು.
ಯುವತಿಯ ಪ್ರಾಣ ರಕ್ಷಿಸಿದ 112 ತುರ್ತು ಸೇವೆ ವಾಹನದ ಪೊಲೀಸರ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಶ್ಲಾಘಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.