ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಜಾಜೂರು| ಉಪಚಾರ ಮಾಡಿಲ್ಲ ಎಂಬ ಕಾರಣಕ್ಕೆ ಪತಿಯಿಂದ ಕಪಾಳಮೋಕ್ಷ: ಪತ್ನಿ ಸಾವು

Last Updated 27 ಮಾರ್ಚ್ 2023, 6:04 IST
ಅಕ್ಷರ ಗಾತ್ರ

ಚಿಕ್ಕಜಾಜೂರು: ಸರಿಯಾಗಿ ಉಪಚಾರ ಮಾಡಿಲ್ಲ ಎಂಬ ಕಾರಣಕ್ಕೆ ಪತಿ, ಪತ್ನಿ ಜಗಳ ಸಾವಿನಲ್ಲಿ ಅಂತ್ಯಕಂಡಿದೆ.

ಸಮೀಪದ ಬಿ. ದುರ್ಗ ಗ್ರಾಮದ ಸಾಕಮ್ಮ (50) ಮೃತಪಟ್ಟವರು. ಆರೋಪಿ ನಾಗರಾಜಪ್ಪ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಮಾರ್ಚ್ 24ರಂದು ರಾತ್ರಿ ನಾಗರಾಜಪ್ಪ ಅವರು ಮನೆಗೆ ಬಂದಾಗ ಪತ್ನಿ ಸಾಕಮ್ಮ ಸರಿಯಾಗಿ ಉಪಚರಿಸಲಿಲ್ಲ ಎಂದು ಜಗಳ ತೆಗೆದರು. ಜಗಳ ವಿಕೋಪಕ್ಕೆ ತಿರುಗಿ ನಾಗರಾಜಪ್ಪ ಅವರು ಸಾಕಮ್ಮ ಅವರ ಕಣ್ಣಿಗೆ ಬಲವಾಗಿ ಗುದ್ದಿದ್ದಾರೆ. ಗುದ್ದಿದ ರಭಸಕ್ಕೆ ಅವರು ಆಯ ತಪ್ಪಿ ಕೆಳಗೆ ಬಿದ್ದಾಗ ತಲೆಗೆ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ಸಾಕಮ್ಮ ಅವರ ಪುತ್ರ ಪ್ರವೀಣ ಪೊಲೀಸರಿಗೆ ದೂರು ನೀಡಿದ್ದಾರೆ.

ಪಿಎಸ್ಐ ತಿಪ್ಪೇಸ್ವಾಮಿ ದೂರು ದಾಖಲಿಸಿಕೊಂಡು ಆರೋಪಿ ನಾಗರಾಜಪ್ಪನನ್ನು ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT