ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡೂ ಸ್ಥಾನ ಸಾಮಾನ್ಯಕ್ಕೆ: ಬಿಜೆಪಿಗೆ ಅಧಿಕಾರ ಖಚಿತ

ಮೊಳಕಾಲ್ಮುರು ಪ.ಪಂ: ಹಂಚಿಕೆ ಆಧಾರ ಅನುಸರಿಸುವ ಸಾಧ್ಯತೆ
Last Updated 11 ಅಕ್ಟೋಬರ್ 2020, 4:49 IST
ಅಕ್ಷರ ಗಾತ್ರ

ಮೊಳಕಾಲ್ಮುರು:ಇಲ್ಲಿನ ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ನಿಗದಿ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು, ಆಕಾಂಕ್ಷಿಗಳಲ್ಲಿ ಪೈಪೋಟಿ ಹೆಚ್ಚಿದೆ.

ಮೊದಲ ಬಾರಿಗೆ ಪಟ್ಟಣ ಪಂಚಾಯಿತಿ ಇತಿಹಾಸದಲ್ಲಿ ಇಲ್ಲಿ ಬಿಜೆಪಿಗೆ ಈ ಸಲ ಸ್ಪಷ್ಟ ಬಹುಮತ ಸಿಕ್ಕಿದೆ. 16 ಸದಸ್ಯ ಸ್ಥಾನಗಳನ್ನು ಹೊಂದಿರುವ ಪಂಚಾಯಿತಿಗೆ 8 ಬಿಜೆಪಿ, 6 ಕಾಂಗ್ರೆಸ್ ಹಾಗೂ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಫಲಿತಾಂಶ ಘೋಷಣೆ ದಿನದಂದೇ ಇಬ್ಬರು ಪಕ್ಷೇತರ ಸದಸ್ಯರಾದ ಮಂಜಣ್ಣ ಹಾಗೂ ಸವಿತಾ ಬಿಜೆಪಿಗೆ ಬೆಂಬಲ ನೀಡುವುದಾಗಿ ಘೋಷಣೆ ಮಾಡಿ ಪಕ್ಷದ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಮೂಲಕ ಬಿಜೆಪಿ ಅಧಿಕಾರ ಗದ್ದುಗೆಗೆ ಏರುವುದು ಖಚಿತವಾಗಿದೆ.

ಹೊಸ ಅಧಿಸೂಚನೆಗೂ ಮುನ್ನ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಹೊಸ ಮೀಸಲಾತಿ ಪ್ರಕಾರ ಅಧ್ಯಕ್ಷಮತ್ತು ಉಪಾಧ್ಯಕ್ಷ ಎರಡೂ ಸ್ಥಾನಗಳು ಸಾಮಾನ್ಯಕ್ಕೆ ಮೀಸಲಾಗಿರುವ ಕಾರಣ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದೆ.

ಮೂಲಗಳ ಪ್ರಕಾರ, ಪುರುಷ ಸದಸ್ಯರ ಪೈಕಿ ಅಧ್ಯಕ್ಷ ಸ್ಥಾನಕ್ಕೆ ಟಿ.ಟಿ. ರವಿಕುಮಾರ್, ಲಕ್ಷ್ಮಣ್, ಮಂಜಣ್ಣ ಹಾಗೂ ತಿಪ್ಪೇಸ್ವಾಮಿ ಆಕಾಂಕ್ಷಿಗಳಾಗಿದ್ದಾರೆ.ಮಹಿಳಾ ಸದಸ್ಯರ ಪೈಕಿ ರೂಪಾ, ಲೀಲಾವತಿ, ಶುಭಾ ಅವರ ಹೆಸರು ಮುಂಚೂಣಿಯಲ್ಲಿದೆ.

ಆದರೆ ‘ಒಂದು ಪ್ರಯತ್ನ ಮಾಡಿಯೇ ಬಿಡೋಣ' ಎಂದುಎಲ್ಲರೂ ಆಲೋಚನೆಯಲ್ಲಿರುವ ಕಾರಣ ಇಬ್ಬರು ಪಕ್ಷೇತರರು ಸೇರಿ ಎಲ್ಲಾ 10 ಮಂದಿ ಅಧಿಕಾರದ ಆಸೆಯಲ್ಲಿದ್ದಾರೆ. ಆದರೆ ಇಲ್ಲಿ ಸಚಿವ ಬಿ. ಶ್ರೀರಾಮುಲು ಹಾಗೂ ಪಕ್ಷದ ನಾಯಕರತೀರ್ಮಾನ ವಿರುದ್ಧ ಹೋಗುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ.

‘ಸಾಮಾನ್ಯಕ್ಕೆ ಮೀಸಲಾತಿ ಬಂದಿರುವ ಕಾರಣ ಎಲ್ಲರೂ ಅಧಿಕಾರ ಆಕಾಂಕ್ಷಿಗಳಾಗಿದ್ದಾರೆ. ಸಚಿವ ಬಿ.ಶ್ರೀರಾಮುಲು, ಜಿಲ್ಲಾಧ್ಯಕ್ಷರು ಮತ್ತು ಸ್ಥಳೀಯ ಮುಖಂಡರ ಕೋರ್ ಕಮಿಟಿ ರಚನೆ ಮಾಡಿ, ಪಕ್ಷದ ಸಿದ್ಧಾಂತಗಳಿಗೆ, ಪಕ್ಷದ ದುಡಿದವರಿಗೆ ಆದ್ಯತೆ ಮೇರೆಗೆಅಧಿಕಾರ ನೀಡಲಾಗುವುದು. ಇದು ಎರಡೂವರೆ ವರ್ಷದ ಅವಧಿಯ ಮೀಸಲಾತಿಯಾಗಿದೆ. ಶೀಘ್ರ ಪಕ್ಷದ ಸಭೆ ಕರೆದು ತೀರ್ಮಾನಕೈಗೊಳ್ಳಲಾಗುವುದು’ ಎಂದುಬಿಜೆಪಿ ಮಂಡಲಾಧ್ಯಕ್ಷ ಡಾ.ಪಿ.ಎಂ. ಮಂಜುನಾಥ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT