ಚಳ್ಳಕೆರೆ: ತಾಲ್ಲೂಕಿನ ಬಾಲೇನಹಳ್ಳಿ, ರಾಮಜೋಗಿಹಳ್ಳಿ, ಕುರುಡಿಹಳ್ಳಿ ಮುಂತಾದ ಗ್ರಾಮಕ್ಕೆ ಗುರುವಾರ ಭೇಟಿ ನೀಡಿದ ಕೃಷಿ ತಜ್ಞರ ತಂಡ ಕಪ್ಪು ಮಣ್ಣಿನ ಭೂಮಿಯಲ್ಲಿ ಬೆಳೆದ ಕಡಲೆ ಬೆಳೆಗೆ ಹರಡಿದ ಸೊರಬು ಕೀಟಬಾಧೆಯನ್ನು ಪರಿಶೀಲನೆ ನಡೆಸಿತು.

ಕೃಷಿ ಸಹಾಯಕ ನಿರ್ದೇಶಕ ಎಸ್.ಟಿ.ರಮೇಶ್ ಮಾತನಾಡಿ, ‘ತಾಲ್ಲೂಕಿನಲ್ಲಿ ಒಟ್ಟು 4,000 ಎಕರೆ ಪ್ರದೇಶದ ಕಪ್ಪು ಮಣ್ಣಿನ ಭೂಮಿಯಲ್ಲಿ ಕಡಲೆ ಬೆಳೆ ಬಿತ್ತನೆ ಮಾಡಲಾಗಿದ್ದು, ಕೆಲವು ಕಡೆ ಬೆಳೆ ಕಟಾವಿಗೆ ಬಂದಿದೆ. ರೋಗಪೀಡಿತ ಸಸಿಗಳನ್ನು ಆರಂಭದಲ್ಲೇ ಕಿತ್ತು ನಾಶಪಡಿಸಬೇಕು. ಪ್ರತಿ ಲೀಟರ್ ನೀರಿಗೆ 2 ಗ್ರಾಂ ಕಾಪರ್ ಆಕ್ಸಿ ಕ್ಲೊರೈಡನ್ನು ಬೆರೆಸಿ ಅದನ್ನು ಬೆಳೆಗೆ ಸಿಂಪರಣೆ ಮಾಡಬೇಕು. ಇದರಿಂದ ಕೀಟಬಾಧೆ ಹತೋಟಿಗೆ ಬರುತ್ತದೆ. ಹೀಗಾಗಿ ಬೆಳೆಗಾರರು ಆತಂಕಪಡುವ ಅಗತ್ಯವಿಲ್ಲ’ ಎಂದು ಹೇಳಿದರು.

ರೈತ ಸಂಘದ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಓ.ಟಿ.ತಿಪ್ಪೇಸ್ವಾಮಿ ಮಾತನಾಡಿ, ‘ಶೇಂಗಾ, ತೊಗರಿ ಬೆಳೆ ನಷ್ಟ ಅನುಭವಿಸಿದ ಬೆಳೆಗಾರರು ಆರ್ಥಿಕವಾಗಿ ಸ್ವಲ್ಪ ಚೇತರಿಸಿಕೊಳ್ಳಲು ಬಿತ್ತನೆ ಮಾಡಿದ ಕಡಲೆಗೆ ಕೀಟಬಾಧೆ ಕಾಣಿಸಿಕೊಂಡು ಬೆಳೆ ವಿಫಲವಾಗಿದೆ. ಹಾಗಾಗಿ, ತಾಲ್ಲೂಕಿನ ಕಡಲೆ ಬೆಳೆಗಾರರಿಗೆ ವಿಮಾ ಕಂಪನಿಯಿಂದ ಪರಿಹಾರ ಕೊಡಿಸಬೇಕು’ ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿದರು.

ಬೆಳೆಗಾರ ಭೀಮಾರೆಡ್ಡಿ, ಚಿದಾನಂದಪ್ಪ, ರಾಜೇಶ್, ವಸಂತ, ಪ್ರಶಾಂತ, ಕೃಷ್ಣಾರೆಡ್ಡಿ, ಬಸವರಾಜ, ಗಿರೀಶ್, ಮಲ್ಲರೆಡ್ಡಿ, ಕೃಷಿ ತಾಂತ್ರಿಕ ಅಧಿಕಾರಿ ಎನ್.ಕೀರ್ತಿ, ಜನಾರ್ದನ, ಕೃಷಿ ಸಹಾಯಕ ರಾಮಕೃಷ್ಣ, ಮಂಜಣ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.