ಶೀಘ್ರ ನಾನು ಕ್ರೀಡಾ ಸಂಕೀರ್ಣಕ್ಕೆ ಭೇಟಿ ನೀಡಿ ಪರಿಕರ ವಿತರಣೆಯ ಮಾಹಿತಿ ಪಡೆಯುತ್ತೇನೆ. ಮಕ್ಕಳಿಗೆ ಪ್ರತಿ ವರ್ಷ ಸಮರ್ಪಕವಾಗಿ ಪರಿಕರ ವಿತರಣೆಗೆ ಕ್ರಮ ವಹಿಸಲಾಗುವುದು
ಟಿ.ವೆಂಕಟೇಶ್ ಜಿಲ್ಲಾಧಿಕಾರಿ
ಹೊಟ್ಟೆ ಉರಿಯುತ್ತದೆ...
ಕ್ರೀಡಾ ಸಂಕೀರ್ಣದಲ್ಲಿ ಬಹುತೇಕ ಪರಿಕರಗಳು ಮುರಿದ ಸ್ಥಿತಿಯಲ್ಲಿ ಬಿದ್ದಿವೆ. ಹೊಚ್ಚಹೊಸ ವಾಲಿಬಾಲ್ ಫುಟ್‌ಬಾಲ್ ಟೆನ್ನಿಸ್ ಬಾಲ್ ಬ್ಯಾಟ್ ಬಾಲ್ ಬ್ಯಾಡ್ಮಿಂಟನ್ ಬ್ಯಾಟ್‌ಗಳು ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿವೆ. ಕೊಠಡಿಯಲ್ಲಿ ದೂಳು ತಿನ್ನುತ್ತಿರುವ ಪರಿಕರಗಳನ್ನು ನೋಡಿ ಕ್ರೀಡಾಪ್ರೇಮಿಗಳು ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಾರೆ. ನೂರಾರು ಕಾಕ್‌ಗಳು ವಿಕೆಟ್ ಕೇರಂ ಬೋರ್ಡ್ ಹಾಕಿ ಸ್ಟಿಕ್ ಮೆಡಿಸಿನಲ್ ಬಾಲ್ ವಾಲಿಬಾಲ್ ನೆಟ್ ಜಿಮ್ ಪರಿಕರ ಕ್ರೀಡಾ ಶೂಗಳು ದೂಳು ತಿನ್ನುತ್ತಿವೆ. ಯೋಗ ಮ್ಯಾಟ್‌ಗಳು ಕೂಡ ಹಾಳಾಗಿ ಬಿದ್ದಿವೆ. ಎತ್ತರ ಜಿಗಿತ ಉದ್ದ ಜಿಗಿತಕ್ಕೆ ಬಳಸುವ ಪರಿಕರಗಳು ಕೋನ್‌ಗಳು ಔಷಧ ಕಿಟ್ ನೂರಾರು ಟೋಪಿ ಟ್ರ್ಯಾಕ್ ಸೂಟ್ ಟೀ–ಶರ್ಟ್ ಕೊಳೆಯುವ ಹಂತದಲ್ಲಿವೆ. ‘ಹಾಳಾಗುತ್ತಿರುವ ಕ್ರೀಡಾ ಪರಿಕರಗಳನ್ನು ನೋಡಿದರೆ ಹೊಟ್ಟೆ ಉರಿಯುತ್ತದೆ. ಮಕ್ಕಳಿಗೆ ಕೊಟ್ಟಿದ್ದರೆ ಎಷ್ಟೋ ಮಕ್ಕಳು ಕ್ರೀಡೆಯಲ್ಲಿ ತಮ್ಮ ಪ್ರತಿಭೆ ತೋರಿಸುತ್ತಿದ್ದರು. ಅಧಿಕಾರಿಗಳು ಮಕ್ಕಳಿಗೆ ಅನ್ಯಾಯ ಮಾಡುತ್ತಿದ್ದಾರೆ’ ಎಂದು ಕ್ರೀಡಾ ಪ್ರೇಮಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.