ಸಿರಿಗೆರೆ: ರಾಜ್ಯ ರಾಜಕಾರಣದಲ್ಲಿ ಯಶಸ್ವಿ ನಾಯಕರಾಗಿರುವ ಸಿದ್ದರಾಮಯ್ಯ ಅವರ ವಿರುದ್ಧದ ಪ್ರಕರಣದಲ್ಲಿ ರಾಜ್ಯಪಾಲರ ನಡೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಅದೊಂದು ಷಡ್ಯಂತ್ರವಾಗಿದೆ ಎಂದು ಭರಮಸಾಗರದ ಕಾಂಗ್ರೆಸ್ ಮುಖಂಡ ದುರುಗೇಶ್ ಪೂಜಾರ್ ತಿಳಿಸಿದರು.
ರಾಜ್ಯ ಕಂಡ ಅತ್ಯಂತ ಜನಪ್ರಿಯ ಮುಖ್ಯಮಂತ್ರಿ ಹಾಗೂ ದೇಶದ ಶ್ರೇಷ್ಠ ಅಹಿಂದ ನೇತಾರ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡುವ ಮಟ್ಟಕ್ಕೆ ಇಳಿದಿದ್ದು ನಿಜಕ್ಕೂ ಅಸಂವಿಧಾನಕ ನಡೆ ಎಂದು ಟೀಕಿಸಿದ್ದಾರೆ.
40 ವರ್ಷಗಳರಾಜಕೀಯ ಬದುಕಿನಲ್ಲಿ ಕಪ್ಪು ಚುಕ್ಕೆ ಇಲ್ಲದಂತೆ ಬದುಕಿನ ಧೀಮಂತ ನಾಯಕ ಸಿದ್ದರಾಮಯ್ಯ. ಅವರ ಯಶಸ್ಸು ಸಹಿಸದ ಕೇಂದ್ರದ ಬಿಜೆಪಿ ಸರ್ಕಾರ ನೀಚತನಕ್ಕೆ ಇಳಿದಿರುವುದು ಖಂಡನೀಯ ಎಂದು ಪ್ರತಿಕ್ರಿಯಿಸಿದ್ದಾರೆ.