ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿದ ಶಾಸಕ ಎಂ.ಚಂದ್ರಪ್ಪ

Last Updated 8 ನವೆಂಬರ್ 2021, 4:59 IST
ಅಕ್ಷರ ಗಾತ್ರ

ಹೊಳಲ್ಕೆರೆ: ಅಬ್ರದಾಸಿಕಟ್ಟೆ ಸಮೀಪ ಹರಿಯುವ ಹಳ್ಳಕ್ಕೆ ₹ 3 ಕೋಟಿ ವೆಚ್ಚದಲ್ಲಿ ಬ್ಯಾರೇಜ್ ನಿರ್ಮಿಸಲಾಗುವುದು ಎಂದು ಶಾಸಕ, ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಂ. ಚಂದ್ರಪ್ಪ ಹೇಳಿದರು.

ತಾಲ್ಲೂಕಿನ ಅಬ್ರದಾಸಿಕಟ್ಟೆಯಲ್ಲಿ ₹10 ಲಕ್ಷ ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

‘ರಾಷ್ಟ್ರೀಯ ಹೆದ್ದಾರಿ-13ರಿಂದ ಮಲ್ಲಾಡಿಹಳ್ಳಿ, ಅಬ್ರದಾಸಿಕಟ್ಟೆ, ಹಿರೇ ಎಮ್ಮಿಗನೂರು ಮೂಲಕ ಸಂತೇಬೆನ್ನೂರು ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ₹3 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಿಸಲಾಗಿದೆ. ಗ್ರಾಮದ ಪ್ರತಿ ಬೀದಿಗೂ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗುವುದು. ಗ್ರಾಮದ ಪಕ್ಕದಲ್ಲಿ ₹ 1.5 ಕೋಟಿ ವೆಚ್ಚದಲ್ಲಿ ಹೊಸಕೆರೆ ನಿರ್ಮಿಸಲಾಗುವುದು. ಮಲ್ಲಾಡಿಹಳ್ಳಿ ಸಮೀಪ ₹ 6 ಕೋಟಿ ವೆಚ್ಛದಲ್ಲಿ ಸೇತುವೆ ನಿರ್ಮಿಸಲಾಗುತ್ತಿದೆ. ಪ್ರತಿ ಗ್ರಾಮಕ್ಕೆ ಅಗತ್ಯ ಇರುವ ಅಭಿವೃದ್ಧಿ ಕಾರ್ಯ ಮಾಡಿಸುತ್ತಿದ್ದೇನೆ. ಸಮಸ್ಯೆ ಬಗ್ಗೆ ಅರ್ಜಿ ಪಡೆದು ಕೆಲಸ ಮಾಡುವ ಜಾಯಮಾನ ನನ್ನದಲ್ಲ’ ಎಂದರು.

‘ಅಂತರ್ಜಲ ಹೆಚ್ಚಳಕ್ಕೆ ಪ್ರಥಮ ಆದ್ಯತೆ ನೀಡಿದ್ದೇನೆ. ಎಲ್ಲಾ ಕಡೆ ಹೊಸಕೆರೆ, ಬ್ಯಾರೇಜ್, ದೊಡ್ಡ ಚೆಕ್ ಡ್ಯಾಂ ನಿರ್ಮಿಸಿದ್ದೇನೆ. ಈ ವರ್ಷ ಬಹುತೇಕ ಎಲ್ಲಾ ಕೆರೆ, ಬ್ಯಾರೇಜ್‌ಗಳು ತುಂಬಿದ್ದು, ಕೊಳವೆಬಾವಿಗಳಲ್ಲಿನೀರು ಉಕ್ಕುತ್ತಿದೆ. ಬಸವರಾಜ ಬೊಮ್ಮಾಯಿ ಅತ್ಯುತ್ತಮ ಮುಖ್ಯಮಂತ್ರಿ. ಮುಖ್ಯಮಂತ್ರಿ ಆದರೂ ಸರಳತೆ ಅಳವಡಿಸಿಕೊಂಡಿದ್ದಾರೆ. ಅವರು ಜೀರೋ ಟ್ರಾಫಿಕ್ ಬೇಡವೆಂದು ಹೇಳಿದ್ದಾರೆ. ಅವರ ತಂದೆ ಎಸ್.ಆರ್. ಬೊಮ್ಮಾಯಿ ನನಗೆ 1994 ಮತ್ತು 1999ರಲ್ಲಿ ಎರಡು ಬಾರಿ ಎಂಎಲ್ಎ ಟಿಕೆಟ್ ನೀಡಿದ್ದರು. ಎರಡು ಬಾರಿಯೂ ಗೆದ್ದಿದ್ದೆ. ನನಗೆ ಆಗಿನಿಂದಲೂ ಬೊಮ್ಮಾಯಿ ಕುಟುಂಬದೊಂದಿಗೆ ಉತ್ತಮ ಸಂಬಂಧ ಇದೆ’ ಎಂದು ಹೇಳಿದರು.

ಜೈಪುರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟಿಸಿ, ₹ 40 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ, ತೇರಿನ ಮನೆ ಕಾಮಗಾರಿಗಳಿಗೆ ಚಾಲನೆ ನೀಡಿದರು.

ರೇವಣ್ಣ, ದೇವರಾಜ್, ಅರೇಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಶೀಲಮ್ಮ, ವೆಂಕಟೇಶ್, ಮೂರ್ತಿ, ರಂಗಪ್ಪ, ಶಿವಣ್ಣ, ಮಂಜಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT